fbpx
ಸಿನಿಮಾ

ಬಾಗಲಕೋಟೆಯ ಇಳಕಲ್ ನಲ್ಲಿ ದರ್ಶನ ಬಿ ಸಿ ಪಾಟೀಲ್‍ರನ್ನು ನೆನೆಸಿದ್ದು ಏಕೆ ಗೊತ್ತಾ.

ಬಾಗಲಕೋಟೆಯ ಇಳಕಲ್ ನಲ್ಲಿ ದರ್ಶನ ಬಿ ಸಿ ಪಾಟೀಲ್‍ರನ್ನು ನೆನೆಸಿದ್ದು ಏಕೆ ಗೊತ್ತಾ.

ಕೋಟೆ ನಗರ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಇಳಕಲ್ ನಗರದಲ್ಲಿ ವಿಜೃಂಭಣೆಯಿಂದ ರಾಷ್ಟ್ರೀಯ ಯುವ ಉತ್ಸವ ನಡೆಯಿತು . ಇಳಕಲ್ ವೀರಮಣಿ ಕ್ರೀಡಾಂಗಣದಲ್ಲಿ SRNE ಫೌಂಡೇಶನ್ ಕಡೆಯಿಂದ ಭರ್ಜರಿಯಾಗಿ ನಡೆದ ಉತ್ಸವದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗವಹಿಸಿದ್ದರು. ಅವರು ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿದ್ದರು. ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಚಿತ್ರ ನಟರ ಮೊರೆ ಹೋಗುವುದು ಸರ್ವೇ ಸಾಮಾನ್ಯವಾಗಿದೆ.

 

ಇಳಕಲ್ ನಗರಕ್ಕೆ ದರ್ಶನ ಆಗಮಿಸುತ್ತಿದ್ದಂತೆ ಭರ್ಜರಿ ಸ್ವಾಗತವನ್ನು ಅಭಿಮಾನಿಗಳು ಕೋರಿದರು. ನಟ ಧನಂಜಯ್ ಅವರು ಕೂಡ ದರ್ಶನ್ ಜೋತೆ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ವಿಜಯ ಪ್ರಕಾಶ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

 

 

ವೇದಿಕೆ ಮೇಲೆ ಆಗಮಿಸಿದ ದರ್ಶನ ಮಾತನಾಡಿ ಬಿ ಸಿ ಪಾಟೀಲ್ ಅವರನ್ನ ನೆನಪಿಸಿಕೊಂಡರು . ಬಿ ಸಿ ಪಾಟೀಲ್ ಅವರ ಚಿತ್ರದಲ್ಲಿ ಇಳಕಲ್ ಸೀರೆ ಬಗ್ಗೆ ಹಾಡಿದೆ. ಇಳಕಲ್ ಜನತೆಯನ್ನು ನೋಡಿದಾಗ ನನಗೆ ಬಿ ಸಿ ಪಾಟೀಲ್ ಅವರು ನೆನಪಾಗುತ್ತಾರೆ ಎಂದು ಹೇಳಿದರು. ದರ್ಶನ ಮಾತು ಮುಗಿಸುತ್ತಲೇ ಅಭಿಮಾನಗಳು ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸಿದರು. ಮಾತು ಮುಂದು ವರಿಸಿದ ದರ್ಶನ ಜನತೆ ಸಮಯ ವ್ಯರ್ಥ ಮಾಡಬಾರದು ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top