fbpx
ಮನೋರಂಜನೆ

ಕಾರ್ಯಕ್ರಮವೊಂದರಲ್ಲಿ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ… ಕಾರಣವೇನು ಗೊತ್ತಾ?

ಕಾರ್ಯಕ್ರಮವೊಂದರಲ್ಲಿ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ… ಕಾರಣವೇನು ಗೊತ್ತಾ?

 

 

ಬಾಲಿವುಡ್ ಕ್ವೀನ್ ದೀಪಿಕಾ ಪಡುಕೋಣೆ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿಯೇ ಕಣ್ಣೀರು ಹಾಕಿದ್ದಾರೆ. ನಟಿ ದೀಪಿಕಾ ಪಡುಕೋಣೆ ಅವರ ತಂದೆ ಪ್ರಕಾಶ್ ಪಡುಕೋಣೆಗೆ ಭಾರತ ಕ್ರೀಡಾ ಜಗತ್ತಿನಲ್ಲಿ ಮಾಡಿರುವ ಸಾಧನೆಗಾಗಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಜೀವಮಾನ ಸಾಧನೆ ಗೌರವವನ್ನು ನೀಡಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ನಿನ್ನೆ ದೆಹಲಿಯಲ್ಲಿ ಸನ್ಮಾನಿಸಿದರು.

ತಮ್ಮ ತಂದೆ ಪ್ರಶಸ್ತಿ ಸ್ವೀಕರಿಸುವುದನ್ನು ನೋಡಿದ ದೀಪಿಕಾ ಭಾವುಕರಾಗಿ ಕಣ್ಣೇರು ಹಾಕಿದ್ದಾರೆ. ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ ನೀಡುವ ಲೈಫ್ ಟೈಮ್ ಅಚೀವ್‍ಮೆಂಟ್ ಅವಾರ್ಡ್ ಈ ಬಾರಿ ಪ್ರಕಾಶ್ ಪಡುಕೋಣೆ ಅವರಿಗೆ ಲಭಿಸಿದೆ. ಸಮಾರಂಭದಲ್ಲಿ ದೀಪಿಕಾ ಜೊತೆ ತಾಯಿ ಉಜ್ಜಲಾ ಪಡುಕೋಣೆ ಮತ್ತು ಸೋದರಿ ಅನಿಶಾ ಪಡುಕೋಣೆ ಸಹ ಇದ್ದರು.

 

 

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಕಾಶ್ “ನಾನು ಹಣ, ಬಹುಮಾನ ಅಥವಾ ಖ್ಯಾತಿಗಾಗಿ ಬ್ಯಾಡ್ಮಿಂಟನ್ ಆಡಲಿಲ್ಲ. ಆ ಕ್ರೀಡೆಯ ಮೇಲಿನ ಪ್ರೀತಿಯಿಂದ ಆಡಿದ್ದೇನೆ” ಎಂದರು.” ಸಮಾರಂಭದಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸಹ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿ ಪಡುಕೋಣೆ ಕುಟುಂಬದ ಜೊತೆ ಸೆಲ್ಫಿ ತೆಗೆದುಕೊಂಡು ಇನ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top