fbpx
ಕ್ರಿಕೆಟ್

ಮೊದಲ ಏಕದಿನ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ!

ಮೊದಲ ಏಕದಿನ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ!

 

 

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಆರು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

 

 

ಡರ್ಬನ್’ನ ಕಿಂಗ್ಸ್ ಮೇಡ್ ಮೈದಾನದಲ್ಲಿ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 269 ರನ್‌ಗಳ ಸವಾಲಿನ ಮೊತ್ತ ಕಲೆ ಹಾಕಿತು. . 270 ರನ್ ಗಳ ಸವಾಲಿನ ಮೊತ್ತವನ್ನು ಬೆನ್ನತ್ತಿದ್ದ ಭಾರತ ತಂಡ, ವಿರಾಟ್ ಕೊಹ್ಲಿ ಭರ್ಜರಿ ಶತಕ ಹಾಗೂ ಅಜಿಂಕ್ಯಾ ರಹಾನೆ ಅವರ ಅಮೋಘ ಅರ್ಧಶತಕದ ನೆರವಿನಿಂದ ಕೇವಲ 4 ವಿಕೆಟ್ ಕಳೆದುಕೊಂಡು ಜಯವನ್ನು ಸಾಧಿಸಿತು. ನಾಯಕ ಕೊಹ್ಲಿ ಶತಕವನ್ನು ಬಾರಿಸುವ ಮೂಲಕ ತಮ್ಮ ವೃತ್ತಿ ಜೀವನದ 33ನೆ ಶತಕವನ್ನು ದಾಖಲಿಸಿದರು. ಕೊಹ್ಲಿಗೆ ಸಾಥ್‌ ನೀಡಿದ ರಹಾನೆ 79 ರನ್‌ಗಳಿಸಿದ್ದರು.

 

 

ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡದ ಡುಪ್ಲೇಸಿಸ್ ಭರ್ಜರಿ ಶತಕ ಸಿಡಿಸಿದ್ದು 12 ಎಸೆತಗಳಲ್ಲಿ 120 ರನ್ ಸಿಡಿಸಿದ್ದಾರೆ. . ಭಾರತ ಪರ ಕುಲದೀಪ್ ಯಾದವ್ 3, ಯಜುಂವೇಂದ್ರ ಚಹಾಲ್ 2, ಭುವನೇಶ್ವರ್ ಕುಮಾರ್ ಮತ್ತು ಬೂಮ್ರಾ ತಲಾ 1 ವಿಕೆಟ್ ಪಡೆದು ಬೌಲಿಂಗ್ ನಲ್ಲಿ ಮಿಚಿದ್ದಾರೆ.

ಸಂಕ್ಷಿಪ್ತ ಸ್ಕೋರ್:

ಸೌತ್ ಆಫ್ರಿಕಾ: 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 269
ಪಾಫ್ ಡುಪ್ಲೆಸಿ 120
ಡೀ ಕಾಕ್ 34
ಕ್ರಿಶ್ ಮಾರಿಸ್ 37

ಕುಲದೀಪ್ ಯಾದವ್: 34 -3
ಚಾಹಲ್ :45 -2

ಭಾರತ 45.3 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 270

ವಿರಾಟ್ ಕೊಹ್ಲಿ 112
ಅಜಿಂಕ್ಯ ರಹಾನೆ 79

ಆಂಡಿಲೇ ಪೆಹೆಲ್ಯೂಕೊ 42-2

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top