fbpx
ಮನೋರಂಜನೆ

ಕಿರುತೆರೆಯಲ್ಲಿ ಕನ್ನಡದ ಹಿರಿಯ ಹಾಸ್ಯನಟರ ಮಹಾಸಂಗಮ.

ಕಿರುತೆರೆಯಲ್ಲಿ ಕನ್ನಡದ ಹಿರಿಯ ಹಾಸ್ಯನಟರ ಮಹಾಸಂಗಮ.

 

 

ಹಲವಾರು ವರ್ಷಗಳ ಕಾಲ ಕನ್ನಡ ಚಿತ್ರರಸಿಕರನ್ನು ರಂಜಿಸಿದ್ದ ಹಿರಿಯ ಹಾಸ್ಯ ಕಲಾವಿದರು ಈಗ ಒಂದೇ ವೇದಿಕೆಯಲ್ಲಿ ಮತ್ತೆ ಒಂದಾಗುತ್ತಿದ್ದಾರೆ. ಕೆಲವು ವರ್ಷಗಳಿಂದ ಹೆಚ್ಚಾಗಿ ಸದ್ದು ಮಾಡದೆ ತೆರೆಮರೆಯಲ್ಲಿದ್ದ ಈ ಕಲಾವಿದರು ಈಗ ಮತ್ತೆ ನಿಮ್ಮನ್ನು ರಂಜಿಸಲು ಬರ್ತಿದ್ದಾರೆ. ಬ್ಯಾಂಕ್ ಜರ್ನಾಧನ್,ಹೊನ್ನವಳ್ಳಿ ಕೃಷ್ಣ, ಬಿರಾದರ್, ಉಮೇಶ್, ಮತ್ತು ಲಕ್ಷ್ಮಿ ದೇವಿ ಸೇರಿ ಕೆಲವು ಹಾಸ್ಯ ನಟರು ಈ ವಾರಾಂತ್ಯಕ್ಕೆ ವೀಕ್ಷರನ್ನು ರಂಜಿಸಲು ರೆಡಿಯಾಗಿದ್ದಾರೆ.

 

 

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಕಾಮಿಡಿ ಶೋಗೆ ವಿಶೇಷ ಅಥಿತಿಗಳಾಗಿ ಆಗಮಿಸಿರುವ ಇವರುಗಳು ತಮ್ಮ ಸಿನಿ ಬದುಕಿನ ಅನುಭವಗಳನ್ನು ಅಂದು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದ ವತಿಯಿಂದ ಇವರಿಗೆ ಚಿಕ್ಕ ಸನ್ಮಾನವನ್ನೂ ಕೂಡ ಮಾಡಲಾಗಿದೆ. ಕಾರ್ಯಕ್ರಮ ತುಂಬಾ ಮೋಜು ತಮಾಷೆಯಿಂದ ಕೂಡಿದ್ದು ನೋಡುವವರನ್ನು ನಕ್ಕು ನಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ವಿಶೇಷ ಸಂಚಿಕೆ ಇದೆ ಶನಿವಾರ ಮತ್ತು ಭಾನುವಾರ ರಾತ್ರಿ ಎಂಟು ಗಂಟೆಗೆ ಪ್ರಸಾರವಾಗಲಿದೆ.

ಭರ್ಜರಿ ಕಾಮಿಡಿ ಕಾರ್ಯಕ್ರಮದಲ್ಲಿ ರಾಗಿಣಿ, ಹಿರಿಯ ನಟ ದೊಡ್ಡಣ್ಣ ಮತ್ತು ನಿರ್ದೇಶಕ ಗುರುಪ್ರಸಾದ್ ತೀರ್ಪುಗಾರರಾಗಿದ್ದರೆ ಅಗ್ನಿಶಾಕ್ಷಿ ಖ್ಯಾತಿಯ ವೈಷ್ಣವಿ ನಿರೂಪಣೆ ಮಾಡುತ್ತಿದ್ದಾರೆ. ಹಿರಿಯ ಹಾಸ್ಯನಟರಿಗೆ ಗೌರವ ಸೂಚಿಸುವ ಸಲುವಾಗಿ ಅವರನ್ನು ಅಥಿತಿಗಳಾಗಿ ಕರೆಸಿ ಎರಡು ಸಂಚಿಕೆಗಳನ್ನು ಅವರಿಗೆ ಅರ್ಪಿಸಲಾಗಿದೆ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top