fbpx
ಮನೋರಂಜನೆ

82 ವರ್ಷದ ವೃದ್ಧೆಯ ತಮ್ಮ ಅಭಿಮಾನಿ ಮನವಿಗೆ ಸ್ಪಂದಿಸಿದ ಕಿಚ್ಚ ಸುದೀಪ್‌‌‌.

82 ವರ್ಷದ ವೃದ್ಧೆಯ ತಮ್ಮ ಅಭಿಮಾನಿ ಮನವಿಗೆ ಸ್ಪಂದಿಸಿದ ಕಿಚ್ಚ ಸುದೀಪ್‌‌‌.

 

 

ಕಲಾವಿದರು ಅಂದಮೇಲೆ ಅವರನ್ನು ಇಷ್ಟ ಪಡುವ ಅಭಿಮಾನಿಗಳಿರುತ್ತಾರೆ. ಅದರಲ್ಲೂ ಯುವಕ ಯುವತಿಯರೇ ಹೆಚ್ಚಾಗಿ ತಮ್ಮ ನೆಚ್ಚಿನ ನಟನ ಪ್ರತಿಯೊಂದು ಅಪ್ ಡೇಟ್ಸ್ ಅನ್ನು ಫಾಲೋ ಮಾಡುತ್ತಿರುತ್ತಾರೆ. ಆದರೆ ಕೆಲವೇ ಕೆಲವು ಸ್ಟಾರ್ ನಟರಿಗೆ ಮಾತ್ರ ಆಡುವ ಹುಡುಗರಿಂದ ಅಲ್ಲಾಡುವ ಮುದುಕರವರೆಗೂ ಅಭಿಮಾನಿಗಳನ್ನು ಹೊಂದಿರುತ್ತಾರೆ. ಕನ್ನಡದ ಪಾಲಿಗೆ ಅಂತವರ ಸಾಲಿನಲ್ಲಿ ಮೊದಲು ನಿಲ್ಲುವವರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.

 

 

ಹೌದು ನಟ ಸುದೀಪ್ ಅವರಿಗೆ 82 ವರ್ಷದ ವೃದ್ದೆಯೊಬ್ಬರು ಅಭಿಮಾನಿಯಾಗಿದ್ದು ಸುದೀಪ್ ಅವರು ಚಿತ್ರರಂಗಕ್ಕೆ ಬಂದು 22 ವರ್ಷಗಳನ್ನು ಪೂರೈಸಿರುವುದರಿಂದ ಅವರಿಗೆ ಶೃಭಕೋರಲು ವಿಡಿಯೋವನ್ನು ಮಾಡಿ ಅದನ್ನು ಕುಟುಂಬದ ಸದಸ್ಯರೊಬ್ಬರ ಕೈನಿಂದ ಯೂಟೂಬ್‌ನಲ್ಲಿ ಅಪ್‌‌ಲೋಡ್‌ ಮಾಡಿಸಿದ್ದಾರೆ. ಮೈಸೂರಿನಲ್ಲಿ ವಾಸವಾಗಿರುವ ಪದ್ಮ ತಾತಾಚಾರ್‌ ಎಂಬ ಅಜ್ಜಿಯ ಆ ವಿಡಿಯೋನಲ್ಲಿ ಸುದೀಪ್ ಕುರಿತು ಅನೇಕ ವಿಷಯಗಳನ್ನ ಮಾತನಾಡಿದ್ದು ಅವರ ಮನೆಗೆ ಬರುವಂತೆ ಸುದೀಪ್ ಗೆ ಆಮಂತ್ರಿಸಿದ್ದಾರೆ. ಈ ವಿಡಿಯೋ ಸುದೀಪ್ ಕಣ್ಣಿಗೆ ಬಿದ್ದಿದ್ದು ಅದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

 

 

ಆ ಅಜ್ಜಿಯ ವಿಡಿಯೋವನ್ನು ನೋಡಿ ಟ್ವೀಟ್ ಮಾಡಿರುವ ಸುದೀಪ್ “ಖಂಡಿತವಾಗಿಯೂ ನಿಮ್ಮ ಮನೆಗೆ ಬರುತ್ತೇನೆ ಅಮ್ಮ, ನಿಮ್ಮಂತವರ ಈ ಮಾತು ಹಾಗು ಆಶಿರ್ವಾದವೇ ನನ್ನ ಸಂಪಾದನೆ. ನಿಮ್ಮ ಮಾತುಗಳಿಗೆ ಧನ್ಯವಾದ.” ಎಂದು ಹೇಳಿದ್ದಾರೆ.

ಅಷ್ಟಕ್ಕೂ 82 ವರ್ಷದ ಆ ವೃದ್ದೆ ಹೇಳಿರೋದೇನು ಅಂತೀರಾ? ಈ ವಿಡಿಯೋ ನೋಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top