fbpx
ಮನೋರಂಜನೆ

ಮಂಡ್ಯ ರಮೇಶ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ!

ಮಂಡ್ಯ ರಮೇಶ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ!

 

 

ಸ್ಯಾಂಡಲ್ ವುಡ್’ನ ಹಿರಿಯ ಹಾಸ್ಯನಟ ಮಂಡ್ಯ ರಮೇಶ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಮೊನ್ನೆಯಷ್ಟೇ ನಟ ನೀನಾಸಂ ಸತೀಶ್ ಅವರು ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಬರುತ್ತಿರುವಾಗ ಕಾರು ಅಪಘಾತವಾಗಿತ್ತು ಆದರೆ ಯಾವುದೇ ತೊಂದರೆಗಳಾಗದೆ ಪ್ರಾಣಾಪಾಯದಿಂದ ಸತೀಶ್ ಬಚಾವ್ ಆಗಿದ್ದರು. ಆ ಘಟನೆ ಮರೆಯುವ ಮುನ್ನವೇ ಈಗ ಅಂಥದ್ದೇ ಘಟನೆ ಮಾತೊಮ್ಮೆ ಸಂಭವಿಸಿದೆ.

ಬೆಂಗಳೂರು – ಮೈಸೂರು ಹೆದ್ದಾರಿ  ಶ್ರೀರಂಗಪಟ್ಟಣ ದ ಕೆ.ಶೆಟ್ಟಿಹಳ್ಳಿ ರಾಷ್ಟ್ರೀಯ ಹೆದ್ದಾರಿ 275 ಬಳಿಯಲ್ಲಿ ಮಂಡ್ಯ ರಮೇಶ್ ಅವರ ಕಾರು ಅಪಘಾತಕೀಡಾಗಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

 

 

ಮಜಾಟಾಕೀಸ್ ಕಾರ್ಯಕ್ರಮದ ಚಿತ್ರೀಕರಣವನ್ನು ಮುಗಿಸಿ ವಾಪಸ್ಸಾಗುವ ವೇಳೆ ಈ ಘಟನೆ ನಡೆದ್ದಿದ್ದು ಕೂದಲೆಳೆಯಲ್ಲಿ ಮಂಡ್ಯ ರಮೇಶ್ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಲಾರಿ ಓವರ್​ಟೇಕ್ ಮಾಡಲು ಹೋಗಿ ಡಿವೈಡರ್​ಗೆ ರಮೇಶ್​ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿಯಾಗಿ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top