fbpx
ಸಿನಿಮಾ

‘ಪದ್ಮಾವತ್’ ಚಿತ್ರ ಪ್ರದರ್ಶನ ವೇಳೆ ಖಾಲಿ ಬಾಲ್ಕನಿಯ ಕಾರ್ನರ್ ಸೀಟಿನಲ್ಲಿ ಯುವತಿಯ ರೇಪ್

‘ಪದ್ಮಾವತ್’ ಚಿತ್ರ ಪ್ರದರ್ಶನ ವೇಳೆ ಖಾಲಿ ಬಾಲ್ಕನಿಯ ಕಾರ್ನರ್ ಸೀಟಿನಲ್ಲಿ ಯುವತಿಯ ರೇಪ್

ದಿನೇ ದಿನೇ ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ಕಿರುಕುಳಗಳು ಹೆಚ್ಚುತ್ತಿದ್ದು ಕಾಮುಕರ ಅಟ್ಟಹಾಸಕ್ಕೆ ಕೊನೆ ಇಲ್ಲದಂತಾಗಿದೆ. ಪದೇ ಪದೇ ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆ ಏಳುವ ಬೆನ್ನಲ್ಲೇ ‘ಪದ್ಮವತ್’ ಚಿತ್ರ ಪ್ರದರ್ಶನವಾಗುತ್ತಿದ್ದ ಥೇಟರ್ ನಲ್ಲಿ 19 ವರ್ಷ ವಯಸ್ಸಿನ ಯುವತಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಮಾಡಿರುವ ಹೀನ ಕೃತ್ಯ ಹೈದರಾಬಾದ್‌ ನಗರದಲ್ಲಿ ನಡೆದಿದೆ.

 

 

ಸಂತ್ರಸ್ತ ಯುವತಿಗೆ ಆರೋಪಿ ಯುವಕನು ಸಾಮಾಜಿಕ ಜಾಲತಾಣ ಫೇಸ್ಬುಕ್ ಮುಖಾಂತರ ಪರಿಚಯವಾಗಿದ್ದ, ಇವರಿಬ್ಬರ ಸ್ನೇಹ ಪ್ರೀತಿಯಾಗಿ ತಿರುಗಿತ್ತು. ನಂತರ ಯುವಕನು ಪರಸ್ಪರ ಭೇಟಿಯಾಗೋಣ ಎಂದು ಯುವತಿಗೆ ಮನವಿ ಮಾಡಿದ್ದ ಇದಕ್ಕೆ ಸಮ್ಮತಿಸಿದ ಯುವತಿ ಆತನೊಂದಿಗೆ ಸುತ್ತಾಡಿದ್ದಳು. ಇಬ್ಬರು ಸೇರಿ ಪದ್ಮಾವತ್ ಚಿತ್ರ ನೋಡಲು ತೆರಳಿದ್ದರು. ಬಾಲ್ಕನಿ ಯಲ್ಲಿ ಕಡಿಮೆ ಜನ ಇದ್ದ ಕಾರಣ ಈ ಸಂಧರ್ಭವನ್ನು ದುರುಪಯೋಗ ಮಾಡಿಕೊಂಡು ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ.

 

 

ಜನವರಿ ೨೯ ನೇ ತಾರೀಕಿನಂದು ಈ ಅಮಾನವೀಯ ಘಟನೆ ನಡೆದಿದೆ, ಸಂತ್ರಸ್ತ ಯುವತಿ ದೂರು ನೀಡಿದ್ದು ಪೊಲೀಸರು ದೂರು ದಾಖಲೆ ಮಾಡಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿದ್ದಾರೆ. ಚಿತ್ರಮಂದಿರದಲ್ಲಿ ಸರಿಯಾದ ಭದ್ರತೆ ಕೊರತೆಯಿಂದ ಪ್ರಶಾಂತ್ ಥೇಟರ್ ಮಾಲೀಕರ ವಿರುದ್ಧವೂ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗುವರ ಬಗ್ಗೆ ಯುವತಿಯರು ಜಾಗರೂಕರಾಗಿರಬೇಕು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top