fbpx
ಮನೋರಂಜನೆ

55 ಟೇಕ್ಸ್, ಅರ್ಧ ಬಾಟೆಲ್ ಎಣ್ಣೆ ತಗೊಂಡು ಮಾಡಿದ್ದ ಈ ಕಿಸ್ಸಿಂಗ್ ಸೀನ್‍ನ ಕರಾಳ ಸತ್ಯ ಬಿಚ್ಚಿಟ್ಟ ರಾಖಿ ಸಾವಂತ್:

55 ಟೇಕ್ಸ್, ಅರ್ಧ ಬಾಟೆಲ್ ಎಣ್ಣೆ ತಗೊಂಡು ಮಾಡಿದ್ದ ಈ ಕಿಸ್ಸಿಂಗ್ ಸೀನ್‍ನ ಕರಾಳ ಸತ್ಯ ಬಿಚ್ಚಿಟ್ಟ ರಾಖಿ ಸಾವಂತ್:

 

 

ಬಾಲಿವುಡ್‌ನಲ್ಲಿ ಬಿಚ್ಚಿ ತೋರಿಸೋ ಪರಾಕ್ರಮದಿಂದಲೇ ಪ್ರವರ್ಧಮಾನಕ್ಕೆ ಬಂದ ನಟೀಮಣಿಯರದ್ದೊಂದು ದಂಡೇ ಇದೆ. ಅಂಥವರ ಸಾಲಿನಲ್ಲಿ ರಾಖಿ ಸಾವಂತ್‌ಳದ್ದು ಅಗ್ರಸ್ಥಾನ. ಆಕ್ಟಿಂಗಿನ ಗಂಧಗಾಳಿ ಇಲ್ಲದಿದ್ದರೂ ನಟಿ ಅನ್ನಿಸಿಕೊಳ್ಳೋದು ಹೇಗೆ? ಸದಾ ಒಂದಿಲ್ಲೊಂದು ರೀತಿಯಲ್ಲಿ ಪ್ರಚಾರದಲ್ಲಿರೋದು ಹೇಗೆ ಎಂಬ ವಿಚಾರದ ಬಗ್ಗೆ ರಾಖಿ ಖಂಡಿತವಾಗಿಯೂ ಆಸಕ್ತರಿಗೆ ಸದಾ ಹೆಬ್ಬಾಗಿಲು ತೆರೆದು ಕುಂತಿರೋ ಯೂನಿವರ್ಸಿಟಿ!

 

 

ತವಾಗ್ಲೂ ವಿವದನ್ನು ತಮ್ಮ ಮೈಮೇಲೆ ಎಳೆದು ಕೊಳ್ಳುವ ಬಾಲಿವುಡ್ ಐಟಂ ಬಾಮ್ ರಾಖಿ ಸಾವಂತ್ ಈಗ ಮತ್ತೊಂದು ವಿವಾದ ಬಾಂಬ್ ಸಿಡಿಸಿದ್ದಾಳೆ. ಸದ್ಯ ತಾನು ನಟಿಸುತ್ತಿರುವ ಚಿತ್ರದಲ್ಲಿ ಮಾದಕ ವ್ಯಸನಿ ಪಾತ್ರ ಮಾಡ್ತಿರುವ ರಾಖಿ ಸಾವಂತ್ ತನ್ನ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಆ ಚಿತ್ರದ ಕಿಸ್ಸಿಂಗ್ ಸೀನ್ ಶೂಟ್ ಮುಗಿದ ನಂತರ ಬಿಡುವು ಮಾಡಿಕೊಂಡು 2007 ರಲ್ಲಿ ತನಗಾಗಿದ್ದ ಅನುಭವವನ್ನು ತನ್ನ ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾಳೆ!

 

 

“ಇವತ್ತು ಕಿಸ್ಸಿಂಗ್ ಸೀನ್‍ಗಾಗಿ ಒಟ್ಟು 55 ಬಾರಿ ರಿಟೇಕ್ ತೆಗೆದುಕೊಂಡಿದ್ದೇನೆ ಜೊತೆಗೆ ಪಾತ್ರಕ್ಕಾಗಿ ಅರ್ಧ ಬಾಟೆಲ್ ಮದ್ಯವನ್ನು ಸೇವಿಸಿದ್ದೇನೆ. ಸೆಟ್‍ನಲ್ಲಿ ಪದೇ ಪದೇ ಕಿಸ್ ಮಾಡುವಾಗ 2007 ರಲ್ಲಿ ನಡೆದಿದ್ದ ಮಿಖಾಸಿಂಗ್ ಘಟನೆ ನೆನಪು ಬಂದು ಒಂದು ಕ್ಷಣ ನಾನು ಭಯಗೊಂಡಿದ್ದೆ. 2007ರಲ್ಲಿ ಅಂದು ನಡೆದ ಕಹಿ ಘಟನೆ ಇನ್ನೂ ನನ್ನ ಮನಸ್ಸಿನಲ್ಲಿದೆ. ಪಾರ್ಟಿಯಲ್ಲಿ ನನ್ನ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಂಡು ಮಿಕಾ ಸಿಂಗ್ ಬಲವಂತವಾಗಿ ಕಿಸ್ ಕಿಸ್ ಮಾಡಿದ್ದರು” ಎಂದು ಬರೆದುಕೊಂಡಿದ್ದಾಳೆ. ಅಂದಹಾಗೆ ಈಕೆ ಹೇಳುವ ಮಾತುಗಳನ್ನು ನಂಬುವುದು ಸುಲಭವಲ್ಲ ಜನಪ್ರಿಯತೆಗಾಗಿ ಇಲ್ಲ ಸಲ್ಲದ ಹೇಳಿಕೆ ಕೊಡುವ ಈಕೆ ಇದನ್ನು ಸೃಷ್ಟಿ ಮಾಡಿಕೊಂಡೆ ಹೇಳಿದ್ದರೂ ಹೇಳಿರಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top