fbpx
ಸಿನಿಮಾ

Rap ಹಾಡುಗಳ ಬಗ್ಗೆ ಹಂಸಲೇಖ ಏನು ಹೇಳಿದ್ರು ಗೊತ್ತಾ.

Rap ಹಾಡುಗಳ ಬಗ್ಗೆ ಹಂಸಲೇಖ ಏನು ಹೇಳಿದ್ರು ಗೊತ್ತಾ.

 

ಕನ್ನಡ TV ಚಾನೆಲ್ ರಿಯಾಲಿಟಿ ಶೋಗಳಿಗೆ ಹೊಸ ಆಯಾಮವನ್ನು ನೀಡಿದ ಕೊಟ್ಟ ಜೀ ಕನ್ನಡ ವಾಹಿನಿಯು ಈಗ ಇದೀಗ ತನ್ನ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್-೧೪ ಆವೃತ್ತಿಯನ್ನು ನಡೆಸುತ್ತಿದೆ. ಈ ಮೊದಲಿನ ಎಲ್ಲ ಆವೃತ್ತಿಗಳು ಭರ್ಜರಿ ಯಶಸ್ಸು ಕಂಡಿದ್ದವು. ಕಳೆದ ಸಂಚಿಕೆಯಲ್ಲಿ ಅನ್ವಿತಾ ಶ್ರೀಧರ್ ರವರು ವಿಜೇತರಾಗಿದ್ದರು. ಮಕ್ಕಳ ಹಾಡುಗಳನ್ನು ಕೇಳುವುದು ಅದೇನೋ ಆನಂದ. ಮಕ್ಕಳು ಮನಸ್ಸು ಬಿಚ್ಚಿ ಕೋಗಿಲೆ ಕಂಠದಲ್ಲಿ ಹಾಡುತ್ತಿರುವಾಗ ಮನಸಿನಲ್ಲಿ ಉಲ್ಲಾಸವಾಗುತ್ತದೆ.

 

ಸರಿಗಮಪ ತೀರ್ಪುಗಾರರಾದ ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ ಶಕುಂತ್ಲೆ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದರ ಕುರಿತು ಮಾತನಾಡಲು ಅವರು ಫೇಸ್ಬುಕ್ ಲೈವ್ ಬಂದಿದ್ದರು ಆಗ ಮಾತನಾಡಿದ ಅವರು ಶಕುಂತ್ಲೆ ಚಿತ್ರಕ್ಕೆ ಮೊದಲು ಕನ್ಯಾಕುಮಾರಿ ಎಂಬ ಹೆಸರು ಇತ್ತಂತೆ ಈಗ ಶಕುಂತ್ಲೆ ಎಂದು ಬದಲಾವಣೆ ಮಾಡಿದೆವು ಎಂದು ತಿಳಿಸಿದರು.

 

 

ಲೈವ್ ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೋಡಿದ ಅವರು Rap ಹಾಡುಗಳ ಬಗ್ಗೆ ಕೇಳಿದಾಗ, ರಾಂಪ್ ಸಂಗೀತ ಈಗ ಇಡೀ ಜಗತ್ತನ್ನು ಆವರಿಸುತ್ತಿದೆ. ಮೆಲೋಡಿ ಹಾಗು ರಿದಂ ಸಂಗೀತ ಪ್ರೀಯರಿಗೆ ಬೇಸರ ಆದಾಗ Rap ಹಾಡುಗಳು ಕಾಣಿಸಿಕೊಂಡವು ಎಂದು ಅವರು ತಿಳಿಸಿದರು. Rap ಒಂದು ಅದೀಮವಾದ ಸಂಗೀತವಾಗಿದೆ ಎಂದು ತಿಳಿಸಿದರು. ಆಗ ಬುಡಕಟ್ಟುಗಳಲ್ಲಿ Rap ಶೈಲಿಯ ಗೀತೆಗಳನ್ನು ಹಾಡುತ್ತಿದ್ದರು. Rap ಎನ್ನುವುದು ಒಂದು ಸಾಮಾನ್ಯ ರೀತಿ ಹಾಗು ಅದು ತುಂಬ ಶಕ್ತಿಶಾಲಿ. ಕನ್ನಡ ಚಿತ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ Rap ಬಂದಿದೆ.ಇದು ಬರಲಿ.. ಅದು ಒಳ್ಳೆಯ ಸಂಗತಿ ಎಂದು ಅಭಿಮಾನಿಗಳಿಗೆ ಹೇಳಿದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top