fbpx
ಸಿನಿಮಾ

ಮಂಡ್ಯದ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಸದ್ದು ಮಾಡುತ್ತಿದ್ದಾರೆ ಆರ್ಮುಗಂ ರವಿಶಂಕರ್

ಮಂಡ್ಯದ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಸದ್ದು ಮಾಡುತ್ತಿದ್ದಾರೆ ಆರ್ಮುಗಂ ರವಿಶಂಕರ್

 

ತಮ್ಮ ಖಡಕ್ ಡೈಲಾಗ್ ನಿಂದ ಹೆಸರುವಾಸಿಯಾಗಿರುವ ನಟ ರವಿಶಂಕರ್ ಇತ್ತೀಚಿನ ದಿನಗಳಲ್ಲಿ ವಿಶಿಷ್ಟ ಪಾತ್ರವನ್ನು ಆಯ್ಕೆ ಮಾಡುತ್ತಿದ್ದಾರೆ. ಕಳೆದ ವರ್ಷ ಬಿಡುಗಡೆಗೊಂಡಿದ್ದ ಕಾಲೇಜ್ ಕುಮಾರ ಚಿತ್ರದಲ್ಲಿ ಅವರು ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದರು. ಮಗ ದುಡಿಯುವುದು ತಂದೆ ಕಾಲೇಜಿಗೆ ಹೋಗುವುದು ಈ ಪಾತ್ರದ ವಿಶಿಷ್ಟತೆ ಇತ್ತು. ರಾಜರಥ ಚಿತ್ರದಲ್ಲಿ ಕೂಡ ರವಿಶಂಕರ್ ಅವರದ್ದು ವಿಭಿನ್ನ ಪಾತ್ರ.

 

 

ಕನ್ನಡ ಚಿತ್ರರಂಗದ ನಿನಾಸಂ ಸತೀಶ್ ಮತ್ತು ರಚಿತಾ ರಾಮ್ ನಟಿಸಿರುವ ‘ಅಯೋಗ್ಯ’ ಚಿತ್ರದಲ್ಲಿ ಮಂಡ್ಯದ ಗ್ರಾಮ ಪಂಚಾಯ್ತಿ ಅಧ್ಯಕ್ರ ಪಾತ್ರದಲ್ಲಿ ಆರ್ಮುಗಂ ರವಿಶಂಕರ್ ಎಂಟ್ರಿ ಕೊಟ್ಟಿದ್ದಾರೆ. ಅಯೋಗ್ಯ ಚಿತ್ರದಲ್ಲಿ ರವಿಶಂಕರ್ ರಾಜಕಾರಣಿ ಪಾತ್ರದಲ್ಲಿ ಮಿಚಲಿದ್ದಾರೆ. ನಟ ನಿನಾಸಂ ಸತೀಶ್ ಗ್ರಾಮ ಪಂಚಾಯತಿಯ ಸದಸ್ಯನಾಗಿ ನಾಯಕನ ಪಾತ್ರದಲ್ಲಿ ತೆರೆಮೇಲೆ ಮಿಂಚಲಿದ್ದಾರೆ.

 

 

ಅಯೋಗ್ಯ ನಾಯಕ ಶೌಚಾಲಯ ಕಟ್ಟುವ ಒಳ್ಳೆಯ ಕೆಲಸ ಮಾಡುತ್ತಾನೆ ಆದರೆ ಅದನ್ನು ಕೆಡವುವ ಕೆಲಸವನ್ನು ರವಿಶಂಕರ್ ಪಾತ್ರ ಮಾಡಲಿದೆ. ಚಿತ್ರವನ್ನು ಟಿ.ಆರ್. ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. . ಚಿತ್ರದ ಬಹುತೇಹ ಚಿತ್ರೀಕರಣ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

 

 

ಅಯೋಗ್ಯ ಚಿತ್ರದಲ್ಲಿ ಹಾಸ್ಯನಟ ಚಿಕ್ಕಣ್ಣ, ರಂಗಾಯಣ ರಘು ಅಭಿನಯ ಮಾಡುತ್ತಿದ್ದಾರೆ. ಇನ್ನು ಕೇವಲ ಹತ್ತು ದಿನದಲ್ಲಿ ಸಿನಿಮಾ ಶೂಟಿಂಗ್ ಸಂಪೂರ್ಣ ಮುಗಿಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top