fbpx
ಸಮಾಚಾರ

ತಾನು ಅಂದುಕೊಂಡಿದ್ದನ್ನ ಕೊನೆಗೂ ಸಾಧಿಸಿಯೇ ಬಿಟ್ಟಳು ಕಿರಿಕ್ ಹುಡುಗಿ ಸಂಯುಕ್ತಾ!

ತಾನು ಅಂದುಕೊಂಡಿದ್ದನ್ನ ಕೊನೆಗೂ ಸಾಧಿಸಿಯೇ ಬಿಟ್ಟಳು ಕಿರಿಕ್ ಹುಡುಗಿ ಸಂಯುಕ್ತಾ!

 

 

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟು ಮಾಡಿದ ಒಂದೇ ಚಿತ್ರಕ್ಕೆ ಇರೋ ಬರೋ ವಿವಾದಗಳನ್ನೆಲ್ಲಾ ಮೈಮೇಲೆ ಎಳೆದುಕೊಂಡು ಇತ್ತೀಚಿಗೆ ಹೆಚ್ಚು ಸುದ್ದಿಯಾಗುತ್ತಿರುವ ನಟಿ ಸಂಯುಕ್ತ ಹೆಗ್ಡೆ ತನ್ನ ಬಹುದಿನಗಳ ಆಸೆಯನ್ನ ಈಡೇರಿಸಿಕೊಂಡಿದ್ದಾರೆ. ಬಿಗ್ ಬಾಸ್ ನಿಂದ ಹೊರಬಂದ ನಂತರ ಯಾರ ಕಣ್ಣಿಗೂ ಕಾಣದೆ ಅವಿತು ಕುಳಿತಿದ್ದ ಸಂಯುಕ್ತ ಈಗ ತನ್ನ ಇಸ್ಟಾಗ್ರಾಮ್ ಅಕೌಂಟ್’ನಲ್ಲಿ ವಿಧ ವಿಧವಾದ ಭಂಗಿಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಅಪ್ಲೋಡ್ ಮಾಡಿ ಸುದ್ದಿಯಾಗುತ್ತಿದ್ದಾಳೆ.

 

 

ಕಿರಿಕ್ ಪಾರ್ಟಿ ಚಿತ್ರದ ನಂತರ ಒಳ್ಳೆಯ ಹೆಸರು ಬಂದಿದ್ದ ಕಾರಣ ಅನೇಕ ಕನ್ನಡ ಚಿತ್ರಗಳಿಗೆ ನಟಿಯಾಗುವ ಆಫರ್’ಗಳು ಇವಳನ್ನು ಹುಡುಕಿಕೊಂಡು ಬಂದಿದ್ದವು. ಆದರೆ ಯಾವುದೋ ಒಂದು ಪರಭಾಷಾ ಚಿತ್ರಕ್ಕೋಸ್ಕರ “ನಾನು ಕನ್ನಡ ಚಿತ್ರಗಳಲ್ಲಿ ನಟಿಸುವುದಿಲ್ಲ ನನಗೆ ನನ್ನ ಕರಿಯರ್ ಮುಖ್ಯ” ಎಂದು ಹೇಳಿದ್ದ ಸಂಯುಕ್ತ ತನ್ನ ಆ ಹೇಳಿಕೆಯನ್ನು ಈಗ ಸಕಾರಗೊಳಿಸಿದ್ದಾರೆ. ಹೌದು ಕೊನೆಗೂ ತನ್ನ ನಟನೆಯ ತೆಲುಗು ಚಿತ್ರದ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

 


ತೆಲುಗಿನಲ್ಲಿ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ರಿಮೇಕ್ ಆಗಿ ಬಿಡುಗಡೆಗೆ ಸಜ್ಜಾಗಿದೆ ಸದ್ಯ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು ಆ ಟೀಸರ್ ನಲ್ಲಿ ಸಂಯುಕ್ತ ಎರಡು ಸೀನ್’ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಪರ ಭಾಷಾ ಚಿತ್ರಗಳಲ್ಲಿ ಹೆಸರು ಮಾಡಬೇಕು ಎಂದು ಇಟ್ಟುಕೊಂಡಿದ್ದ ಸಂಯುಕ್ತ ಆಸೆ ಸ್ವಲ್ಪ ಮಟ್ಟಿಗೆ ಈಡೇರಿದೆಯಾದರೂ ಅಲ್ಲಿಯೂ ಕೂಡ ತನ್ನ ನಖರಾಗಳನ್ನ ಮಾಡಿ ಚೀಮಾರಿ ಹಾಕಿಸಿಕೊಳ್ಳುತ್ತಾರೋ ಅಥವಾ ಸಭ್ಯವಾಗಿ ವರ್ತಿಸಿ ಆ ಜನರ ಮನಸು ಗೆಲ್ಲುತ್ತಾರೋ ಎಲ್ಲವನ್ನು ಕಾಲವೇ ಉತ್ತರಿಸಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top