fbpx
ಮನೋರಂಜನೆ

ಶಿವಣ್ಣನ ಜೊತೆ ಕಬೀರ ಚಿತ್ರದಲ್ಲಿ ನಟಿಸಿದ್ದ ನಟಿಗೆ ನಿದ್ರಿಸುತ್ತಿದ್ದ ವೇಳೆ ಲೈಂಗಿಕ ಕಿರುಕುಳ!

ಶಿವಣ್ಣನ ಜೊತೆ ಕಬೀರ ಚಿತ್ರದಲ್ಲಿ ನಟಿಸಿದ್ದ ನಟಿಗೆ ನಿದ್ರಿಸುತ್ತಿದ್ದ ವೇಳೆ ಲೈಂಗಿಕ ಕಿರುಕುಳ!

 


ಇತ್ತೀಚಿಗೆ ಸಿನಿಮಾ ನಟಿಯ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಬಹಳ ಕೇಳಿಬರುತ್ತಿವೆ. ನೆನ್ನೆ ಹೆಬ್ಬುಲಿ ನಟಿ ಅಮಲಾ ಪೌಲ್ ಕೂಡ ತಮ್ಮ ಮೇಲೆ ಲೈಂಗಿಕ ಕಿರುಕುಳವಾಗಿದೆ ಎಂದು ಪೊಲೀಸರಿಗೆ ದ್ದೂರು ನೀಡಿದ್ದರು. ಈಗ ಕನ್ನಡ ಮತ್ತು ಮಲೆಯಾಳಂ ನ ಖ್ಯಾತ ನಟಿ, ಶಿವಣ್ಣನ ಸಂತೆಯಲ್ಲಿ ನಿಂತ ಕಬೀರ ಚಿತ್ರದಲ್ಲಿ ನಟಿಸಿದ್ದ ಸನುಷ ಸಂತೋಷ್ ಮೇಲೆ ಲೈಂಗಿಕ ಕಿರುಕುಳವಾಗಿದೆ. ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಅದೇ ರೈನಲ್ಲಿದ್ದ ಕಿಡುಗೇಡಿಯೊಇಬ್ಬನು ನಟಿ ನಿದ್ರಿಸುತ್ತಿದ್ದಾಗ ಲೈಂಗಿಕ ಕುರುಕುಳಕ್ಕೆ ಯತ್ನಿಸಿದ್ದಾನೆ.

 

 

ನಟಿ ಸನುಷಾ ಸಂತೋಷ್ ಕನ್ಯಾಕುಮಾರಿಯಿಂದ ತಿರುವನಂತಪುರಂಗೆ ಮಾವೆಲಿ ಎಕ್ಸ್ ಪ್ರೆಸ್‍ನ 2 ಟೈರ್ ಎಸಿ ಕೋಚ್‍ನಲ್ಲಿ ಪ್ರಯಾಣಿಸುತ್ತಿದ್ದರು. ಸನುಷಾ ಮೇಲಿನ ಬರ್ತ್‍ನಲ್ಲಿ ಮಲಗಿದ್ದ ವೇಳೆ ವ್ಯಕ್ತಿಯೊಬ್ಬ ಆಕೆಯ ತುಟಿಯ ಮೇಲೆ ಕೈ ಬೆರಳಿನಿಂದ ಸವರಿ ತುಟಿಯ ಮೇಲೆ ಬೆರಳುಗಳನ್ನು ತಿರುಚಿದ್ದಾನೆ ಎಂದು ನಟಿ ಆರೋಪಿಸಿದ್ದಾಳೆ. ಆ ವೇಳೆ ಆಕೆಯ ಸುತ್ತ ಮುತ್ತ ಇದ್ದಂತಹ ಯಾವ ಪ್ರಯಾಣಿಕರು ಆಕೆಯ ನೆರವಿಗೆ ಬರಲಿಲ್ಲ ಎಂದೂ ಕೂಡ ನಟಿ ಹೇಳಿಕೊಂಡಿದ್ದಾರೆ .

 

 

ನಂತರ ಧೈರ್ಯ ಕಳೆದುಕೊಳ್ಳದ ಸನುಷಾ ಆತನ ಕೈ ಹಿಡಿದು ಜೋರಾಗಿ ಕಿರುಚಿಕೊಂಡಿದ್ದಾರೆ ಅವರ ನೆರವಿಗೆ ಯಾವ ಪ್ರಯಾಣಿಕರೂ ಬರಲಿಲ್ಲದಿದ್ದರೂ ರೈಲ್ವೆ ಅಧಿಕಾರಿಗಳು ಈಕೆಯ ಕೂಗಿಗೆ ಓಡಿಬಂದು ವಿಚಾರಣೆ ನಡೆಸಿದ್ದಾರೆ. ರೈಲು ತ್ರಿಶೂರ್ ತಲುಪಿದಾಗ ನಟಿಯ ದೂರಿನ ಮೇರೆಗೆ ಕಾಮುಕನನ್ನು ಪೊಲೀಸರು ಆತನನ್ನು ಬಂಧಿಸಿದ್ದು ಪೊಲೀಸರಿಗೆ ಸನುಷಾ ತನ್ನ ಹೇಳಿಕೆಯನ್ನು ನೀಡಿ ಅದೇ ರೈಲಿನಲ್ಲಿ ತನ್ನ ಪ್ರಯಾಣ ಮುಂದುವರೆಸಿದ್ದಾರೆ ಎಂದು ವರದಿಯಾಗಿದೆ. ನಟಿಯ ಈ ಧೈರ್ಯಕ್ಕೆ ಚಿತ್ರರಂಗದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top