fbpx
ಭವಿಷ್ಯ

ಶುಕ್ರ ಗ್ರಹವು ಫೆಬ್ರವರಿ 6ನೇ ತಾರೀಖಿನಂದು ಕುಂಭ ರಾಶಿಯನ್ನು ಪ್ರವೇಶಿಸಲಿದೆ ಇದರಿಂದ 12 ರಾಶಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು ತಿಳ್ಕೊಳ್ಳಿ

ಶುಕ್ರ ಗ್ರಹವು ಫೆಬ್ರವರಿ 6ನೇ ತಾರೀಖಿನಂದು ಕುಂಭ ರಾಶಿಯನ್ನು ಪ್ರವೇಶಿಸಲಿದೆ ಇದರಿಂದ 12 ರಾಶಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು ತಿಳ್ಕೊಳ್ಳಿ

 

ಫೆಬ್ರವರಿ 6 ನೇ ತಾರೀಖಿನಂದು, ಮಂಗಳವಾರ ,ಬೆಳಗ್ಗೆ ಹನ್ನೊಂದು ಗಂಟೆ , ಮೂವತ್ತೇಳು ನಿಮಿಷಕ್ಕೆ, ಶುಕ್ರ ಗ್ರಹವು ಕುಂಭ ರಾಶಿಯನ್ನು ಪ್ರವೇಶ ಮಾಡಲಿದೆ .ಇಷ್ಟು ದಿನ ಮಕರ ರಾಶಿಯಲ್ಲಿ ಸ್ಥಿತವಿದ್ದ ಶುಕ್ರ ಗ್ರಹವು ಈಗ ಕುಂಭ ರಾಶಿಯನ್ನು ಪ್ರವೇಶ ಮಾಡಲಿದೆ. ಈಗ ಕುಂಭ ರಾಶಿಗೆ ಪ್ರವೇಶ ಮಾಡುವುದರಿಂದ ಶುಕ್ರ ಗ್ರಹವು ಯಾವ ಯಾವ ರಾಶಿಗೆ ಶುಭ ಫಲವನ್ನು ತಂದುಕೊಡಲಿದೆ. ಯಾವ ರಾಶಿಯ ಮೇಲೆ ಇದರ ಪ್ರಭಾವ ಬೀರುವುದು.ಎಂದು ನೋಡೋಣ ಬನ್ನಿ………

 

ಶುಕ್ರಗ್ರಹವು ಸೂರ್ಯನಿಗೆ ಸದಾಕಾಲ ಹತ್ತಿರದಲ್ಲೇ ಇರುತ್ತದೆ.ಬೆಳಗಿನ ಜಾವ ಪ್ರಾತಃ ಕಾಲದಲ್ಲಿ ಸೂರ್ಯನು ಉದಯವಾಗುವ ಸಮಯದಲ್ಲಿ ಸೂರ್ಯನ ಹತ್ತಿರ ಶುಕ್ರನು ಇರುವ ಕಾರಣ ಶುಕ್ರ ಗ್ರಹವು ತುಂಬಾ ಪ್ರಕಾಶಮಾನವಾದ ಒಂದು ನಕ್ಷತ್ರವಾಗಿ ಆಕಾಶದಲ್ಲಿ ಪ್ರಜ್ವಲಿಸುತ್ತದೆ ಶುಕ್ರ ಗ್ರಹವನ್ನು ಎಲ್ಲಾ ಗ್ರಹಗಳ ಸ್ವಾಮಿ ಎಂದೇ ಪರಿಗಣಿಸಲಾಗಿದೆ.ಯಾರಿಗೆ ಶುಕ್ರಗ್ರಹವು .

ಶುಕ್ರ ಗ್ರಹವು ಯಾರ ಜಾತಕದಲ್ಲಿ ಒಳ್ಳೆಯ ಉಚ್ಚ ಸ್ಥಿತಿಯಲ್ಲಿ ಇದ್ದರೆ ಅವರಿಗೆ ಜೀವನದಲ್ಲಿ ಐಶ್ವರ್ಯ, ಹಣ, ಆಸ್ತಿ, ಸಂಪತ್ತು ಎಲ್ಲವೂ ದೊರೆಯುವುದಲ್ಲದು ಅಷ್ಟೇ ಅಲ್ಲದೆ , ಅವರು ಶ್ವೇತ ವರ್ಣವನ್ನು ಹೊಂದಿದ್ದು, ನೋಡಲು ಕೂಡ ತುಂಬಾ ಸುಂದರವಾಗಿ ಇರುತ್ತಾರೆ. ಇಂಥವರಿಗೆ ಜನ್ಮದಿಂದಲೇ ಶಾರೀರಿಕವಾಗಿ ಎಲ್ಲಾ ರೀತಿಯ ಸುಖಗಳನ್ನು ಶುಕ್ರನು ಕರುಣಿಸುವನು. ಶುಕ್ರ ಗ್ರಹದಿಂದ ಸುಖವು ಪ್ರಾಪ್ತಿಯಾಗುವುದು. ಇವರು ನೋಡಲು ಸುಂದರವಾಗಿರುವುದರ ಜೊತೆಗೆ ದಷ್ಟಪುಷ್ಟ ಶರೀರವನ್ನು ಹೊಂದಿರುತ್ತಾರೆ. ಒಳ್ಳೆಯ ಬಟ್ಟೆ, ಓಡಾಡಲು ವಾಹನ, ಕಾರು, ಜಮೀನು, ಮನೆ ಮತ್ತು ಆಭರಣಗಳು ಎಲ್ಲವೂ ದೊರೆಯುತ್ತದೆ. ಶುಕ್ರನು ಜಾತಕದಲ್ಲಿ ಚೆನ್ನಾಗಿದ್ದರೆ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಾರೆ.

ಕುಂಭ ರಾಶಿಗೆ ಶುಕ್ರನು ಪ್ರವೇಶ ಮಾಡುವುದರಿಂದ .ಕುಂಭರಾಶಿಯು ಶುಕ್ರನ ಮಿತ್ರ ರಾಶಿಯಾಗಿದ್ದು, ಕುಂಭ ರಾಶಿಯಿಂದ ಏಳನೇ ರಾಶಿಯಾಗಿ ಬರುವುದು ಸಿಂಹ ರಾಶಿ ಆದ್ದರಿಂದ ಸಿಂಹ ರಾಶಿಗೆ ಶುಕ್ರನು ಶತ್ರುವಿನ ರಾಶಿಯಾಗಿದ್ದು, ಶುಕ್ರನು ತುಲಾ ರಾಶಿ ಮತ್ತು ವೃಷಭ ರಾಶಿಯ ಸ್ವಾಮಿಯಾಗಿದ್ದು.

ಕುಂಭ ರಾಶಿಯವರಿಗೆ ಇದು ಎಲ್ಲಾ ರೀತಿಯಲ್ಲೂ ತುಂಬಾ ಒಳ್ಳೆಯ ಸಮಯವಾಗಿದ್ದು, ಶುಕ್ರನು ಕುಂಭ ರಾಶಿಯಲ್ಲಿ ಪ್ರವೇಶಿಸುವ ಕಾರಣ ಕೆಲವು ರಾಶಿಯವರಿಗೆ ಉತ್ತಮ ಸಮಯವಾಗಿದ್ದು, ಎಲ್ಲ ರೀತಿಯ ಭೌತಿಕ ಸುಖವೂ ಪ್ರಾಪ್ತಿಯಾಗುವುದು.ಉತ್ತಮ ಫಲಗಳು ದೊರೆಯುವವು, ಮನಸ್ಸು ಪ್ರಸನ್ನವಾಗಿ, ಅಲ್ಲಿ ಇಲ್ಲಿ ತಿರುಗಾಡಲು ಮನಸ್ಸು ಇಚ್ಛಿಸುವುದರ ಜೊತೆ ಜೊತೆಗೆ ಆರೋಗ್ಯವೂ ಚೆನ್ನಾಗಿರುವುದು .

 

ಮೇಷ (Mesha)

ಮೇಷ ರಾಶಿಯವರಿಗೆ ಧನಲಾಭವಾಗುವುದು. ಉತ್ತಮ ಸುಖವು ಪ್ರಾಪ್ತಿಯಾಗುವುದು, ಧನ, ಐಶ್ವರ್ಯ, ಹಣದ ಪ್ರಾಪ್ತಿಯಾಗುವುದು.ಪ್ರಮೋಷನ್ ದೊರೆಯುವುದು,ಸಂತಾನ ಸುಖ ಪ್ರಾಪ್ತಿಯಾಗುವುದು,ವಿದ್ಯಾರ್ಥಿಗಳಿಗೆ ಲಾಭವಾಗುವುದು.ಒಟ್ಟಾರೆ ಇದು ತುಂಬಾ ಒಳ್ಳೆಯ ಸಮಯ ಇದಾಗಿದೆ.

 

ವೃಷಭ (Vrushabh)

ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಉತ್ತಮ ಫಲವು ಪ್ರಾಪ್ತಿಯಾಗುವುದು, ಒಳ್ಳೆಯ ಸಮಯವಾಗಿದೆ,ಹೊಸ ಆಸ್ತಿಯನ್ನು ಖರೀದಿಸುವಿರಿ, ಪಿತೃ ಸುಖ ಪ್ರಾಪ್ತಿಯಾಗುವುದು,ಪ್ರಮೋಷನ್ ಗಳು ದೊರೆಯುವವು, ವ್ಯವಸಾಯದಲ್ಲಿ ಇರುವವರಿಗೆ ಉತ್ತಮ ಫಲ ಪ್ರಾಪ್ತಿಯಾಗುವುದು. ವ್ಯಾಪಾರ ಮಾಡುತ್ತಿರುವವರಿಗೆ ವ್ಯಾಪಾರದಲ್ಲಿ ಉನ್ನತಿಯನ್ನು ಗಳಿಸುವಿರಿ.

 

ಮಿಥುನ (Mithuna)

ಮಿಥುನ ರಾಶಿಯವರಿಗೆ ಉತ್ತಮ ಸಮಯವಾಗಿದ್ದು ,ಅದೃಷ್ಟವನ್ನು ತಂದುಕೊಡಲಿದೆ,ವ್ಯಾಆರಾದಲ್ಲಿ ಲಾಭವಾಗುವುದು,ಹೊಸವ್ಯಾಪಾರಕ್ಕೆ ಕೈ ಹಾಕುವಿರಿ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ.ಪ್ರೇಮಿಗಳಿಗೆ ಮದುವೆಗೆ ಶುಭ ಸಮಯವಾಗಿದೆ.

 

ಕರ್ಕ (Karka)

ಕಟಕ ರಾಶಿಯವರಿಗೆ ಇದು ಸಂಕಟದ ಸಮಯವಾಗಿದೆ, ಶನಿಯು ಎಂಟನೇ ಮನೆಯಲ್ಲಿ ಸ್ಥಿತನಿದ್ದು ,ಹೀಗೆ ಇರುವುದರಿಂದ ಆರೋಗ್ಯದಲ್ಲಿ ಏರುಪೇರಾಗಲಿದೆ,ಖಾಯಿಲೆಗಳಿಂದ ನರಳುವಿರಿ, ಡಾಮತ್ಯಾ ಸುಖದಲ್ಲಿ ವೈಮನಸ್ಯ ,ಜಗಳ ಉಂಟಾಗಲಿದೆ,ವಾಹನಗಳನ್ನು ಎಚ್ಚರದಿಂದ ಚಲಾಯಿಸಿರಿ, ಇಲ್ಲವೆಂದರೆ ದುರ್ಘಟನೆಗಳು ಸಂಭವಿಸಬಹುದು,ಅಧಿಕ ಹಣ ಖರ್ಚಾಗುವುದು.

 

ಸಿಂಹ (Simha)

ಆರೋಗ್ಯವೂ ಏರುಪೇರಾಗಲಿದೆ, ವಾತಾ, ಪಿತ್ತ ದಂತಹ ಕಾಯಿಲೆಗಳಿಂದ ಬಳಲಬಹುದು,ದಾಂಪತ್ಯ ಜೀವನಕ್ಕೆ ಇದು ಅಷ್ಟೊಂದು ಶುಭಕಾರಿಯಲ್ಲ, ಚರ್ಮ ರೋಗಗಳಿಂದ ನರಳುವರಿ.

 

ಕನ್ಯಾರಾಶಿ (Kanya)

ಕನ್ಯಾ ರಾಶಿಯವರಿಗೂ ಇದು ಅಷ್ಟೊಂದು ಒಳ್ಳೆಯ ಸಮಯವಲ್ಲ, ಆದ್ದರಿಂದ ಸ್ವಲ್ಪ ಎಚ್ಚರದಿಂದ ಇರುವುದು ಒಳ್ಳೆಯದು, ಶತ್ರುಗಳು ಹೆಚ್ಚಾಗುವರು,ಸೊಂಟ ನೋವು,ಇನ್ನೂ ಇತ್ಯಾದಿ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡಲಿವೆ, ಖರ್ಚು ಜಾಸ್ತಿಯಾಗಲಿದೆ,ನಷ್ಟವನ್ನು ಅನುಭವಿಸಲಿದ್ದೀರಿ.

 

ತುಲಾ (Tula)

ಪ್ರೇಮ ಪ್ರಸಂಗದಲ್ಲಿ ಇರುವ ತುಲಾ ರಾಶಿಯ ಜಾತಕದವರಿಗೆ ಇದು ತುಂಬಾ ಒಳ್ಳೆಯ ಸಮಯವಾಗಿದೆ,ಲಾಭವಾಗಲಿದೆ,ಕಲೆ,ಮನೋರಂಜನೆಯಲ್ಲಿ ಮನಸ್ಸು ತೊಡಗುವುದು,ವಿದ್ಯಾರ್ಥಿಗಳಿಗೆ, ಬ್ಯಾಂಕ್ ನಲ್ಲಿ ವೃತ್ತಿ ಮಾಡುತ್ತಿರುವವರಿಗೆ ಲಾಭವಾಗಲಿದೆ.ಒಟ್ಟಾರೆ ತುಲಾ ರಾಶಿಯವರಿಗೆ ಇದು ಒಳ್ಳೆಯ ಸಮಯವಾಗಿದೆ.

 

ವೃಶ್ಚಿಕ (Vrushchika)

ವೃಶ್ಚಿಕ ರಾಶಿಯ ಅವರಿಗೆ ಒಳ್ಳೆಯ ಸಮಯವಾಗಿದ್ದು,ಜಮೀನು,ಮಾತೃವಿನ ಆರೋಗ್ಯ ಹದಗೆಡಲಿದೆ, ಎಚ್ಚರವಾಗಿರಿ ದಾಂಪತ್ಯ ಸುಖ ಪ್ರಾಪ್ತಿಯಾಗುವುದು,ಹೊಸ ಆಸ್ತಿಯ ಖರೀಧಿ ಮಾಡುವಿರಿ,ಮಿತ್ರರ ಸಹಯೋಗ ದೊರೆಯುವುದು ಭೌತಿಕ ಸುಖವು ಪ್ರಾಪ್ತಿಯಾಗುವುದು.

 

ಧನು ರಾಶಿ (Dhanu)

ದೊಡ್ಡದೊಡ್ಡ ಕೆಲಸಗಳನ್ನು ಮಾಡುವಿರಿ, ಅಲ್ಲಿ ಇಲ್ಲಿ ಸುತ್ತಾಡುವಿರಿ, ಮಿತ್ರರಿಂದ ಪೂರ್ಣ ರೀತಿಯಲ್ಲಿ ಸಹಕಾರ ಸಹಯೋಗ ದೊರೆಯುವುದು,ನಿಮ್ಮ ತಮ್ಮ ತಂಗಿಯರಿಗೆ ಇದು ತುಂಬಾ ಒಳ್ಳೆಯ ಸಮಯವಾಗಿದೆ,ವಿಶೇಷವಾಗಿ ನಿಮಗೆ ತಂಗಿ ಇದ್ದರೆ ಅವರಿಗೆ ಲಾಭವಾಗುವುದು,

 

ಮಕರ (Makara)

ಮಕರ ರಾಶಿಯವರಿಗೆ ಉತ್ತಮ ಫಲಗಳು ದೊರೆಯುವವು, ದನದ ಸಂಗ್ರಹವಾಗುವುದು,ಧನದ ವೃದ್ಧಿಯಾಗುವುದು, ಪರಿವಾರದಲ್ಲಿ ಸುಖ ಶಾಂತಿ ನೆಲೆಸುವುದು ,ಒಳ್ಳೆಯ ಮಾತನಾಡುವಿರಿ,ಕಾರ್ಯ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣಲಿದ್ದೀರಿ,ಎಲ್ಲ ರೀತಿಯಲ್ಲೂ ಮಕರ ರಾಶಿಯವರಿಗೆ ಉತ್ತಮ ಸಮಯವಾಗಿದೆ.

 

ಕುಂಭರಾಶಿ (Kumbha)

 

ವಿವಾಹ ಯೋಗ್ಯರಿಗೆ ವಿವಾಹ ಕೂಡಿಬರುವುದು, ವ್ಯಾಪಾರದಲ್ಲಿ ಲಾಭವಾಗುವುದು, ಎಲ್ಲರಿಂದಲೂ ಪ್ರಶಂಸೆಗೆ ಒಳಗಾಗುವಿರಿ, ಎಲ್ಲ ಸಮಸ್ಯೆಗಳಿಂದಲೂ ಮುಕ್ತರಾಗುವಿರಿ, ಒಟ್ಟಾರೆ ಕುಂಭ ರಾಶಿಯವರಿಗೆ ಇದು ತುಂಬಾ ಒಳ್ಳೆಯ ಸಮಯವಾಗಿದೆ, ಇದುವರೆಗೂ ಇದ್ದ ಸಮಸ್ಯೆಗಳಿಂದ ನೀವು ಶಾರೀರಿಕ ಸಮಸ್ಯೆ ಮತ್ತು ಜೀವನದ ಸಮಸ್ಯೆಗಳಿಂದಲೂ ಎಲ್ಲಾ ರೀತಿಯಲ್ಲೂ ಮುಕ್ತರಾಗಿ ಪ್ರಗತಿಯನ್ನು ಕಾಣಲಿದ್ದೀರಿ.

 

ಮೀನರಾಶಿ (Meena)

ಮೀನ ರಾಶಿಯವರಿಗೆ ನಿಮ್ಮ ಖರ್ಚು ಅಧಿಕಗೊಳ್ಳುವುದು , ಯಾಕೆಂದರೆ ನೀವು ಐಷಾರಾಮಿ ವಸ್ತುಗಳ ಖರೀದಿಯಿಂದ ಖರ್ಚು ಹೆಚ್ಚಾಗುವುದು ಹೊಸ ಮೊಬೈಲ್ ಫೋನ್, ಹೊಸ ಬಟ್ಟೆ, ಹೊಸ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸುವಿರಿ, ವಿಶೇಷವಾಗಿ ಮನೆಗೆ ಬೇಕಾಗಿರುವ ವಸ್ತುಗಳನ್ನು ಖರೀದಿಸುವಿರಿ ಮತ್ತು ತೋರಿಕೆಗೂ ಕೂಡ ನೀವು ಖರೀದಿಸುವ ಸಾಧ್ಯತೆ. ಇದೆಲ್ಲದರಿಂದ ಖರ್ಚು ಹೆಚ್ಚಾಗುವ ಸಂಭವ ಇದೆ . ಆದ್ದರಿಂದ ಖರ್ಚನ್ನು ಕಡಿಮೆಗೊಳಿಸಿ, ಕಣ್ಣಿನ ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ. ಯಾರಾದರೂ ಪ್ರೇಮ ಪ್ರಸಂಗದಲ್ಲಿ ಇದ್ದರೆ ಪ್ರೇಮಿಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಸಮಸ್ಯೆಯಲ್ಲಿ ಸಿಲುಕುವಿರಿ, ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಸಂಭವ ಇದೆ. ಹೊಟ್ಟೆಗೆ ಸಂಬಂಧಪಟ್ಟ ರೋಗಗಳು ಬಾಧಿಸುವ ಸಾಧ್ಯತೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top