fbpx
ಸಿನಿಮಾ

“ಸರಿಗಮಪ ಲಿಟ್ಲ್ ಚಾಂಪ್ಸ್” ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಸ್.ಪಿ.ಬಾಲಸುಬ್ರಹ್ಮಣ್ಯಂ

“ಸರಿಗಮಪ ಲಿಟ್ಲ್ ಚಾಂಪ್ಸ್” ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಸ್.ಪಿ.ಬಾಲಸುಬ್ರಹ್ಮಣ್ಯಂ

 

ಕನ್ನಡ TV ಚಾನೆಲ್ ರಿಯಾಲಿಟಿ ಶೋಗಳಿಗೆ ಹೊಸ ಆಯಾಮವನ್ನು ನೀಡಿದ ಕೊಟ್ಟ ಜೀ ಕನ್ನಡ ವಾಹಿನಿಯು ಈಗ ಇದೀಗ ತನ್ನ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್-೧೪ ಆವೃತ್ತಿಯನ್ನು ನಡೆಸುತ್ತಿದೆ. ಈ ಮೊದಲಿನ ಎಲ್ಲ ಆವೃತ್ತಿಗಳು ಭರ್ಜರಿ ಯಶಸ್ಸು ಕಂಡಿದ್ದವು. ಕಳೆದ ಸಂಚಿಕೆಯಲ್ಲಿ ಅನ್ವಿತಾ ಶ್ರೀಧರ್ ರವರು ವಿಜೇತರಾಗಿದ್ದರು. ಮಕ್ಕಳ ಹಾಡುಗಳನ್ನು ಕೇಳುವುದು ಅದೇನೋ ಆನಂದ. ಮಕ್ಕಳು ಮನಸ್ಸು ಬಿಚ್ಚಿ ಕೋಗಿಲೆ ಕಂಠದಲ್ಲಿ ಹಾಡುತ್ತಿರುವಾಗ ಮನಸಿನಲ್ಲಿ ಉಲ್ಲಾಸವಾಗುತ್ತದೆ.

 

ಈ ಸಲದ ಸರಿಗಮಪ ಲಿಟಲ್ ಚಾಂಪ್ಸ್ ನಿರ್ಣಾಯಕರಾಗಿ ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯ ಮತ್ತು ವಿಜಯಪ್ರಕಾಶ್ ಇವರ ಜೊತೆಗೆ ಮಹಾಗುರುಗಳಾಗಿ ಹಂಸಲೇಖ ಇದ್ದಾರೆ. ಕಾರ್ಯಕ್ರಮ ಅದ್ಭುತವಾಗಿ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಈಗ ಮತ್ತಷ್ಟು ಮೆರಗು ಬರಲಿದೆ, ಪ್ರಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಷಯವನ್ನು ಖುದ್ದು ಹಂಸಲೇಖ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ತಿಳಿಸಿದ್ದಾರೆ. ನಿನ್ನೆ ಫೇಸ್ಬುಕ್ ಲೈವ್ ನಲ್ಲಿ ಮಾತನಾಡುತ್ತಿದ್ದ ಅವರು ಎಸ್.ಪಿ.ಬಾಲಸುಬ್ರಹ್ಮಣ್ಯಂ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂಬ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿದರು.

 

 

ಸಂಗೀತ ಲೋಕದ ದಿಗ್ಗಜರು ಒಂದೇ ವೇದಿಕೆಯಲ್ಲಿ ಸೇರುತ್ತಿರುವುದು ಅಭಿಮಾನಿಗಳಲ್ಲಿ ಅಪಾರ ಸಂತಸ ಉಂಟು ಮಾಡಿದೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಆಗಮನಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮಕ್ಕೆ ಆಗಮಿಸುವ ದಿನಾಂಕ ಇನ್ನು ಅಂತಿಮವಾಗಿಲ್ಲ ಎಂದು ತಿಳಿದು ಬಂದಿದೆ. ಬಾಲಸುಬ್ರಹ್ಮಣ್ಯಂ ಹಾಗು ಹಂಸಲೇಖ ಅವರು ಬಹಳ ವರ್ಷಗಳ ಕಾಲ ಜೊತೆಯಾಗಿ ಕೆಲಸ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top