fbpx
ಹೆಚ್ಚಿನ

ನೀವು ನಿಮ್ಮ ಜೀವನದಲ್ಲಿ ಯಶಸ್ಸು ಮತ್ತು ಉತ್ತಮ ಅದೃಷ್ಟ ಪಡೆಯಬೇಕಾದ್ರೆ ಪುರಾತನವಾದ ಈ 5 ಸಲಹೆಗಳನ್ನ ತಪ್ಪದೆ ಪಾಲಿಸಿ

ನೀವು ನಿಮ್ಮ ಜೀವನದಲ್ಲಿ ಯಶಸ್ಸು ಮತ್ತು ಉತ್ತಮ ಅದೃಷ್ಟ ಪಡೆಯಬೇಕಾದ್ರೆ ಪುರಾತನವಾದ ಈ 5 ಸಲಹೆಗಳನ್ನ ತಪ್ಪದೆ ಪಾಲಿಸಿ

 

1.ಮನೆಯಲ್ಲಿ ಅಡುಗೆ ಮತ್ತು ತಿಂಡಿಯನ್ನು ಮಾಡುವಾಗ, ಮೊದಲಿಗೆ ಮಾಡಿದ ಮೊದಲ ಚಪಾತಿಯನ್ನು ಹಸುವಿಗೆ ತಿನ್ನಲು ಕೊಡಿ ಮತ್ತು ಕೊನೆಯ ಚಪಾತಿಯನ್ನು ನಾಯಿಗೆ ತಿನ್ನಲು ಕೊಡಿ. ಇದು ತುಂಬಾ ಪುರಾತನವಾದ ಸಲಹೆಯಾಗಿದ್ದು,ಹೀಗೆ ಮಾಡುವುದರಿಂದ ನಿಮ್ಮ ಜಾತಕದಲ್ಲಿರುವ ಕೆಟ್ಟ ಗ್ರಹಗತಿಗಳನ್ನು ಮತ್ತು ಅದರ ದೋಷಗಳನ್ನು ತೊಡೆದು ಹಾಕುತ್ತದೆ .

 

 

2.ಬಿಳಿ ಬಣ್ಣದ ಸಿಹಿ ಪದಾರ್ಥಗಳನ್ನು ಅಥವಾ ಸಿಹಿಯಾದ ತಿಂಡಿಗಳನ್ನು ಪ್ರತಿ ಶುಕ್ರವಾರ ಕನ್ಯೆಯರಿಗೆ ಅಂದರೆ ಚಿಕ್ಕ ಪುಟ್ಟ ಕನ್ಯೆಯಾಗಿರುವ ಹುಡುಗಿಯರಿಗೆ ದಾನ ಮಾಡಿ.

 

 

3. ನೀವು ಯಾವುದೇ ಕಾರಣಕ್ಕೂ ರಾತ್ರಿಯ ಸಮಯದಲ್ಲಿ ತಟ್ಟೆಯಲ್ಲಿ ಊಟವನ್ನು ಹಾಗೆ ಬಿಟ್ಟು ಮಲಗಬೇಡಿ. ಒಂದು ವೇಳೆ ನೀವು ಊಟವನ್ನೂ ಸೇವಿಸದೆ ಹೋದರೆ ಅದನ್ನು ಹೊರಗೆ ಚೆಲ್ಲಿ, ತಟ್ಟೆಯನ್ನು ಖಾಲಿ ಮಾಡಿ, ಅದನ್ನು ತೊಳೆಯದೇ ಹೋದರೆ, ನೀವು ಅದರ ಮೇಲೆ ನೀರು ಹಾಕಿ ಒಂದು ಕಡೆ ಇಟ್ಟು ಬಿಡಿ. ಆದರೆ ತಟ್ಟೆಯಲ್ಲಿ ಮಾತ್ರ ರಾತ್ರಿ ಪೂರ್ತಿ ಊಟವನ್ನು ಹಾಗೇ ಬಿಟ್ಟು ಮಲಗಬೇಡಿ ಅದು ನಿಮ್ಮ ಮನೆಗೆ ಬಡತನವನ್ನು ಆಕರ್ಷಿಸುವಂತೆ ಮಾಡುತ್ತದೆ.

 

 

4. ನೀವು ತಿಂಡಿ, ಊಟ ಅಥವಾ ಭೋಜನ ಮಾಡುವಾಗ ಅಥವಾ ಆಹಾರ ಸೇವಿಸುವಾಗ ಉತ್ತರ ಅಥವಾ ಪೂರ್ವ ದಿಕ್ಕಿಗೆ ಕುಳಿತು ಊಟ ಮಾಡಿ. ನೀವು ಮೊದಲ ತುತ್ತನ್ನು ತಿನ್ನುವುದಕ್ಕೂ ಮುಂಚೆ, ಮೊದಲು ಪ್ರಾರ್ಥನೆಯನ್ನು ಮಾಡಿ ನಂತರ ಸೇವಿಸಿ. ಈ ರೀತಿಯ ಅಭ್ಯಾಸವನ್ನು , ನಿಮ್ಮ ಜೀವನದಲ್ಲಿ ಬೆಳೆಸಿಕೊಂಡರೆ ಅದು ನಿಮಗೆ ಸಂಪತ್ತನ್ನು ಮತ್ತು ಸಮೃದ್ಧಿಯನ್ನು ತಂದುಕೊಡುತ್ತದೆ.

 

 

5. ನೀವು ಸದಾ ನಿಮ್ಮ ತಂದೆ, ತಾಯಿ ಮತ್ತು ಹಿರಿಯರ ಪಾದಗಳನ್ನು ಸ್ಪರ್ಶಿಸಿ, ನಮಸ್ಕಾರ ಮಾಡಿ. ನೀವು ನಿಮ್ಮ ಮನೆಯಿಂದ ಆಚೆ ಹೋಗುವುದಕ್ಕೂ ಮುನ್ನ ಮತ್ತು ನೀವು ಯಾವುದಾದರೂ ಮುಖ್ಯ ಕೆಲಸಕ್ಕೆ ಹೊರಗೆ ಹೋಗುವಾಗ ಅಥವಾ ಕೆಲಸದ ನಿಮಿತ್ತ ಸಂದರ್ಶನಕ್ಕೆ ಹೋಗುವಾಗ , ಹೀಗೆ ಹಿರಿಯರ ಪಾದಗಳನ್ನು ಸ್ಪರ್ಶಿಸಿ, ನಮಸ್ಕಾರ ಮಾಡಿ ಹೋದರೆ ನಿಮಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top