fbpx
ದೇವರು

ವಿಷ್ಣು ಪುರಾಣದ ಪ್ರಕಾರ ಮರೆತು ಕೂಡ ರಸ್ತೆಯಲ್ಲಿ ಸಿಗುವ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು

ವಿಷ್ಣು ಪುರಾಣದ ಪ್ರಕಾರ ಮರೆತು ಕೂಡ ರಸ್ತೆಯಲ್ಲಿ ಸಿಗುವ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು

 

ವಿಷ್ಣು ಪುರಾಣದಲ್ಲಿ ಸುಖ, ಸಮೃದ್ಧಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಹೇಳಲಾಗಿದೆ. ಆ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದ್ದಲ್ಲಿ, ಭಗವಂತನಾದ ವಿಷ್ಣು ಮತ್ತು ಮಹಾಲಕ್ಷ್ಮೀ ದೇವಿಯ ಜೊತೆಗೆ ಎಲ್ಲ ದೇವಾನುದೇವತೆಗಳು ಖುಷಿಯಾಗಿರುತ್ತಾರೆ.

 

 

ವಿಷ್ಣು ಪುರಾಣದಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ. ರಸ್ತೆಯ ಮೇಲೆ ನಾವು ಅಲ್ಲಿ ಇಲ್ಲಿ ಸಾಮಾನ್ಯವಾಗಿ ಓಡಾಡುತ್ತಲೇ ಇರುತ್ತೇವೆ. ಅಂತಹ ಸಮಯದಲ್ಲಿ ನಮಗೆ ಕೆಲವೊಂದು ವಸ್ತುಗಳ ನಮ್ಮ ಕಣ್ಣಿಗೆ ಬೀಳುತ್ತವೆ. ಅಂತಹ ವಸ್ತುಗಳನ್ನು ನಾವು ಯಾವುದೇ ಕಾರಣಕ್ಕೂ ಮುಟ್ಟಬಾರದು, ಮನೆಯೊಳಗೆ ತರಲೇಬಾರದು ಎಂದು ವಿಷ್ಣು ಪ್ರಮಾಣದಲ್ಲಿ ಹೇಳಲಾಗಿದೆ. ರಸ್ತೆಯಲ್ಲಿರುವ ಕೆಲವು ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತವೆ. ಆದ್ದರಿಂದ ಆಶುಭವಾಗಿರುವುದರಿಂದ ಅವುಗಳನ್ನು ಮನೆಗೆ ತರುವುದು ಅಷ್ಟು ಒಳ್ಳೆಯದಲ್ಲ.

 

ವಿಷ್ಣು ಪುರಾಣದ ಪ್ರಕಾರ ಕೂದಲುಗಳು ಅಪವಿತ್ರ . ರಸ್ತೆಯಲ್ಲಿ ಬಿದ್ದ ಕೂದಲನ್ನು ಅಪ್ಪಿತಪ್ಪಿಯೂ ಮುಟ್ಟಬಾರದು. ಆಹಾರದ ಜೊತೆಗೆ ಒಂದು ವೇಳೆ ನಿಮಗೆ ಕೂದಲುಗಳು ಅಥವಾ ಕೂದಲು ಸಿಕ್ಕಿದರೂ ಕೂಡಾ ಅದು ಶುಭ ಸಂಕೇತವಲ್ಲ, ಬದಲಾಗಿ ಅದು ಅಶುಭ ಸೂಚನೆಯಾಗಿದೆ ಎಂದು ಹೇಳಲಾಗಿದೆ.

 

 

ರಸ್ತೆಯಲ್ಲಿ ಸತ್ತು ಬಿದ್ದಿರುವ ಪ್ರಾಣಿಗಳು ಮತ್ತು ಪ್ರಾಣಿಯ ಮೂಳೆಗಳನ್ನು, ಯಾವುದೇ ಕಾರಣಕ್ಕೂ ಮುಟ್ಟಬಾರದು.ಅದರಿಂದ ದೂರ ಹೋಗಬೇಕು. ಅವು ಆಶುಭವಾಗಿವೆ ಮತ್ತು ಅಶುಭದ ಸೂಚನೆಗಳು. ಶವಯಾತ್ರೆ ಮುಗಿಸಿ ಬಂದವರು ತಕ್ಷಣವೇ ಸ್ನಾನ ಮಾಡಬೇಕು .

 

 

ಸ್ನಾನ ಮಾಡಿದ ನೀರು ರಸ್ತೆಗೆ ಬಂದರೆ ಅದನ್ನು ಅಕಸ್ಮಾತ್ ಆಗಿ ಕೂಡ ತುಳಿಯಬೇಡಿ. ಅದು ನಿಮ್ಮನ್ನು ಅಶುದ್ಧಗೊಳಿಸುವುದಷ್ಟೇ ಅಲ್ಲದೆ, ಅಪವಿತ್ರ ಗೊಳಿಸುತ್ತದೆ.
ರಸ್ತೆಯಲ್ಲಿ ಬಿದ್ದಿರುವ ಮುಳ್ಳಿನಿಂದ ದೂರ ಓಡಾಡಿ ಸಾಧ್ಯವಾದರೆ, ಆ ಮುಳ್ಳನ್ನು ರಸ್ತೆಯಿಂದಲೇ ತೆಗೆದು ದೂರ ಎಸೆಯಿರಿ.

 

 

ರಸ್ತೆಯ ಮೇಲೆ ಭಸ್ಮವನ್ನು ಕಂಡರೆ ಅದನ್ನು ತಿಳಿಯಬೇಡಿ, ಅದು ಯಜ್ಞ- ಯಾಗಾದಿಗಳಿಂದ ಮಾಡಿದ್ದಾಗಿದ್ದು ಅದನ್ನು ತುಳಿದರೆ ನಿಮಗೆ ಪಾಪ ಅಂಟಿಕೊಳ್ಳುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top