fbpx
ಭವಿಷ್ಯ

02 ಫೆಬ್ರವರಿ : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಶುಕ್ರವಾರ, ೦೨ ಫೆಬ್ರವರಿ ೨೦೧೮
ಸೂರ್ಯೋದಯ : ೦೬:೪೯
ಸೂರ್ಯಾಸ್ತ : ೧೮:೧೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾಘ
ಪಕ್ಷ : ಕೃಷ್ಣ ಪಕ್ಷ
ತಿಥಿ : ಬಿದಿಗೆ
ನಕ್ಷತ್ರ : ಮಖಾ
ಯೋಗ : ಶೋಭಾನ

ರಾಹು ಕಾಲ: ೧೧:೦೭ – ೧೨:೩೩
ಗುಳಿಕ ಕಾಲ: ೦೮:೧೫ – ೦೯:೪೧
ಯಮಗಂಡ: ೧೫:೨೫ – ೧೬:೫೧

ಮೇಷ (Mesha)

ಆಗಾಗ ಆಡೆತಡೆಗಳು ತೋರಿ ಬಂದರೂ ಕಾರ್ಯಸಾಧನೆಯಾಗಲಿದೆ. ಸರಕಾರಿ ಕೆಲಸಗಳು ಶೀಘ್ರ ರೂಪದಲ್ಲಿ ಮುಗಿದು ಹೋಗಲಿವೆ. ಪಂಚಮದ ರಾಹು ಆಗಾಗ ಅಸ್ಥಿರತೆಗೆ ಕಾರಾಣನಾದರೂ ದೃಢತೆಯಿಂದ ಮುನ್ನುಗ್ಗಿರಿ.

ವೃಷಭ (Vrushabh)


ವ್ಯಾಪಾರ, ವ್ಯವಹಾರಗಳು ಉತ್ತಮ ಚೇತರಿಕೆಯನ್ನು ಹೊಂದಲಿವೆ. ನವದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆ ಕಂಡು ಬರುವುದು. ಆಗಾಗ ಆಡಚಣೆಗಳು ತೋರಿ ಬಂದರೂ ಧನಾಗಮನಕ್ಕೆ ಕೊರತೆ ಇಲ್ಲ.

ಮಿಥುನ (Mithuna)


ಆಗಾಗ ದಾಂಪತ್ಯದಲ್ಲಿ ಅನಾವಶ್ಯಕ ಕಲಹಕ್ಕೆ ಕಾರಣವಾಗಬಹುದು. ಜಾಗ್ರತೆ ವಹಿಸಿರಿ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದ ಸಾರ್ಥಕ್ಯವನ್ನು ಪಡೆಯಲಿದ್ದಾರೆ. ಆಗಾಗ ದೇಹಾರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ

ಕರ್ಕ (Karka)


ಹೆಂಡತಿ ಮಕ್ಕಳಿಂದ ಸಮಾಧಾನದ ವಾತಾವರಣ. ಕೆಲಸಕಾರ್ಯಗಳಲ್ಲಿ ಆರ್ಥಿಕವಾಗಿ ಮುನ್ನಡೆ. ವಾಹನ ಖರೀದಿ, ಭೂ ಖರೀದಿಗೆ ಸಕಾಲ. ಯೋಗ್ಯ ವಯಸ್ಕರಿಗೆ ಅನಿರೀಕ್ಷಿತ ಕಂಕಣ ಭಾಗ್ಯವಿದೆ.

ಸಿಂಹ (Simha)


ಹಿರಿಯರಿಗೆ ಶ್ರೀ ದೇವತಾನುಧಿಗ್ರಹಕ್ಕಾಗಿ ದರುಶನ ಭಾಗ್ಯವಿದೆ. ಆರ್ಥಿಕವಾಗಿ ಹೆಚ್ಚಿನ ಸಮಸ್ಯೆ ಇರದು. ಕೋಪ ತಾಪಗಳಿಗೆ ಬಲಿಯಾಗದೆ ಸಮಾಧಾನ ಚಿತ್ತದಿಂದ ಮುಂದುವರಿಯಿರಿ. ದಿನಾಂತ್ಯ ಶುಭ.

ಕನ್ಯಾರಾಶಿ (Kanya)


ಕಾರ್ಯರಂಗದಲ್ಲಿ ನಿಮ್ಮ ಮುನ್ನಡೆ ನಿಮ್ಮ ಪ್ರಯತ್ನಬಲದಲ್ಲಿಯೇ ಮುಂದುಧಿವರಿಯಬೇಕಾಗುವುದು. ವಿದ್ಯಾರ್ಥಿಗಳು ವಿದ್ಯಾ ಸಂಪನ್ನರಾದಾರು. ಆಗಾಗ ಆರ್ಥಿಕ ಪರಿಸ್ಥಿತಿ ಏರುಪೇರಾಗದಂತೆ ಜಾಗ್ರತೆ ವಹಿಸಿರಿ.

ತುಲಾ (Tula)


ಆಗಾಗ ಅನಿರೀಕ್ಷಿತ ಉತ್ತಮ ಘಟನೆಗಳು ಗೋಚರಕ್ಕೆ ಬರುವುವು. ಆರ್ಥಿಕವಾಗಿ ಲಾಭಕರವಾದ ಶನಿ ನಿಮಗೆ ಎಲ್ಲಾ ವಿಚಾರದಲ್ಲಿ ಸಾಧಕನಾಗುತ್ತದೆ. ಸಾಂಸಾರಿಕವಾಗಿ ಸಮಾಧಾನದ ವಾತಾವರಣ ವಿರುತ್ತದೆ.

ವೃಶ್ಚಿಕ (Vrushchika)


ಶನಿಯ ಪ್ರತಿಕೂಲತೆ ಆಗಾಗ ತೋರಿ ಬಂದರೂ ಶ್ರೀದೇವರ ಅನುಗ್ರಹ ಪರಿಪೂರ್ಣ ವಿರುವುದು. ಬಂದ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿರಿ. ದಿನಾಂತ್ಯದಲ್ಲಿ ಅತಿಥಿಗಳು ಬಂದು ಸಂತಸ ತರಲಿದೆ.

ಧನು ರಾಶಿ (Dhanu)


ಸ್ವಲ್ಪ ದಿನದಲ್ಲೇ ನಿಮ್ಮ ಮುನ್ನಡೆಗೆ ಅನುಕೂಲವಾದ ಅವಕಾಶಗಳು ತೋರಿ ಬರಲಿವೆ. ದೇಹಾರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ಸಂಚಾರದಲ್ಲಿ ಕಾರ್ಯಸಿದ್ಧಿಯಾಗಲಿದೆ. ದಿನಾಂತ್ಯದಲ್ಲಿ ನೆಮ್ಮದಿಯ ವಾತಾವರಣ.

ಮಕರ (Makara)


ಶುಭಮಂಗಲ ಕಾರ್ಯಗಳಿಗೆ ಸಕಾಲ. ಆಗಾಗ ಅತಿಥಿಗಳ ಆಗಮನ ವಿರುತ್ತದೆ. ನಿಮ್ಮ ಯಾವುದೇ ಶುಭಮಂಗಲ ಕಾರ್ಯಗಳಿಗೆ ಪ್ರಯತ್ನಬಲಕ್ಕೆ ದೃಢತೆಯಿಂದ ಮುಂದುವರಿಯಿರಿ.

ಕುಂಭರಾಶಿ (Kumbha)


ಮನೆಯಲ್ಲಿ ಸುಖಶಾಂತಿಗಳು ಗೋಚರಕ್ಕೆ ಬರಲಿವೆ. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳಿಗೆ ಮುಂಭಡ್ತಿಯೋಗವಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯಹೊಂದುವಂತಿಲ್ಲ. ಸಂಚಾರದಲ್ಲಿ ಜಾಗ್ರತೆ ಮಾಡಿರಿ.

ಮೀನರಾಶಿ (Meena)


ಮನಸ್ಸಿನ ಎಣಿಕೆಯಂತೆ ಒಳ್ಳೆಯ ಕೆಲಸಗಳು ನಡೆದು ಸಂತಸ ತರುವುದು. ವಿದ್ಯಾರ್ಥಿಗಳಿಗೆ ಅವಕಾಶಗಳು ಲಭಿಸಲಿವೆ. ಆರೋಗ್ಯದಲ್ಲಿ ಒಳ್ಳೆಯ ಸುಧಾರಣೆ ಇರುತ್ತದೆ. ದಿನಾಂತ್ಯ ಶುಭ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top