fbpx
ಸಿನಿಮಾ

ರಾಕಿಂಗ್ ಸ್ಟಾರ್ ಯಶ್ ರಾಜಕೀಯಕ್ಕೆ ಧುಮುಕುತ್ತಾರಾ. ಅವರ ನಿಲುವೇನು?

 

ರಾಕಿಂಗ್ ಸ್ಟಾರ್ ಯಶ್ ರಾಜಕೀಯಕ್ಕೆ ಧುಮುಕುತ್ತಾರಾ. ಅವರ ನಿಲುವೇನು?

 

ಕನ್ನಡ ಚಿತ್ರರಂಗದ ನಟರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಇನ್ನು ಅನೇಕ ನಾಯಕರು ರಾಜಕೀಯ ವಿಷಯವಾಗಿ ತಮ್ಮ ನಿಲುವಿನ ಕುರಿತು ಸ್ಪಷ್ಟನೆ ನೀಡಿದ್ದಾರೆ. ಆದರೆ ರಾಕಿಂಗ್ ಸ್ಟಾರ್ ಯಶ್ ಮಾತ್ರ ತಮ್ಮ ನಿಲುವಿನ ಬಗ್ಗೆ ಸೀಕ್ರೆಟ್ ಆಗಿ ಇಟ್ಟಿದ್ದರು. ಆದರೆ ಈಗ ತಮ್ಮ ರಾಜಕೀಯ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

 

 

ಮಾಧ್ಯಮದ ಮುಂದೆ ತಮ್ಮ ರಾಜಕೀಯ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಿದ ಯಶ್ ಈ ಸದ್ಯಕ್ಕೆ ರಾಜಕೀಯಕ್ಕೆ ಧುಮುಕುವ ಯಾವುದೇ ವಿಚಾರವು ನನಗೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ, ಬಹಳ ಕಡೆಯಿಂದ ರಾಜಕೀಯಕ್ಕೆ ಬರಬೇಕೆಂಬ ಒತ್ತಡವು ತಮ್ಮ ಮೇಲೆ ಇರುವುದು ನಿಜ ಎಂದು ಅವರು ಹೇಳಿದ್ದಾರೆ.

 

 

ಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಯಾವ ಮತಕ್ಷೇತ್ರದಿಂದಲೂ ಸ್ಪರ್ಧೆ ಮಾಡಲಾರೆ.ಆ ವಿಚಾರವಾಗಿ ನನಗೆ ಆಸಕ್ತಿಯೂ ಕೂಡ ಇಲ್ಲ. ರಾಜಕೀಯದಿಂದ ನಾನು ದೂರ ಇರುತ್ತೇನೆ ಜನರಿಗಾಗಿ ಮಾಡುವ ಒಳ್ಳೆಯ ಕೆಲಸ ಸಾಕಷ್ಟು ಇವೆ ಎಂದು ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top