fbpx
ಮನೋರಂಜನೆ

ಬಂಗಾರದಂತ ಸಾಯಿ ಪಲ್ಲವಿ ಇಷ್ಟೊಂದು ಬದಲಾಗಿದ್ದು ಏಕೆ?

ಬಂಗಾರದಂತ ಸಾಯಿ ಪಲ್ಲವಿ ಇಷ್ಟೊಂದು ಬದಲಾಗಿದ್ದು ಏಕೆ?

 

 

ಪ್ರೇಮಂ ಚಿತ್ರದ ಮೂಲಕ ಏಕಾಏಕಿ ಸ್ಟಾರ್ ನಟಿಯಾಗಿ ಹೊರ ಹೊಮ್ಮುತ್ತಲೇ ಯುವ ಸಮೂಹದ ಹಾಟ್ ಫೇವರಿಟ್ ಹೀರೋಯಿನ್ ಆದಾಕೆ ಸಾಯಿಪಲ್ಲವಿ. ಮೊದಲ ಚಿತ್ರ ಸೂಪರ್ ಹಿಟ್ ಆದ ನಂತರ ಟಾಲಿವುಡ್ ನಲ್ಲಿ ಒಳ್ಳೆಯ ಆಫರ್’ಗಳು ಈಕೆಯನ್ನು ಹುಡುಕಿಕೊಂಡು ಬಂದಿದ್ದರೂ ಈಕೆ ಮಾತ್ರ ಆಯ್ಕೆ ಮಾಡಿದ್ದು ಟಾಲಿವುಡ್ ಚಿತ್ರಗಳನ್ನು. ಟಾಲಿವುಡ್’ನ ಫಿದಾ, ಮತ್ತು ಎಂಸಿಎ ಚಿತ್ರಗಳಲ್ಲಿಯೂ ನಟಿಸಿದ ಈಕೆಗೆ ಇಲ್ಲೂ ಕೂಡ ಭರ್ಜರಿ ಯಶಸ್ಸು ಸಿಕ್ಕಿತ್ತು.

 

 

ಮೊದಲ ಮೂರು ಚಿತ್ರಗಳಲ್ಲಿ ಯಶಸ್ಸನ್ನು ಕಂಡಿರುವ ಸಾಯಿ ಪಲ್ಲವಿಯ ವಿರುದ್ಧ ಈಗ ಆರೋಪಗಳು ಕೇಳಿಬರುತ್ತಿವೆ. ಹೌದು, ಮೊದಲು ಸಾಯಿ ಪಲ್ಲವಿಯಲ್ಲಿದ್ದ ವಿನಯ, ನಡತೆ ಈಗ ಕಾಣುತ್ತಿಲ್ಲ. ಸಕ್ಸಸ್ ನ ಅಹಂ ಅವರ ತಲೆಗೆ ಏರಿರುವಂತೆ ಕಾಣುತ್ತದೆ. ದೊಡ್ಡ ಸೂಪರ್ ಸ್ಟಾರ್ ರೇಂಜ್‌ನಲ್ಲಿ ಬಿಹೇವ್‌ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಇವರ ವಿರುದ್ಧ ಕೇಳಿ ಬರುತ್ತಿವೆ. ಸಾಯಿ ಪಲ್ಲವಿಯ ಈ ದುರ್ವರ್ತನೆಗೆ ಬೇಸರಗೊಂಡಿರುವ ನಿರ್ಮಾಪಕ ದಿಲ್ ರಾಜು ಹಾಗೂ ನಟ ನಾನಿ ಅವರು ಸಾಯಿ ಪಲ್ಲವಿ ಮೇಲೆ ಕೋಪಿಸಿಕೊಂಡಿದ್ದಾರಂತೆ.

 

 

ಅಷ್ಟೇ ಅಲ್ಲದೆ ನಟ ನಾಗ ಶೌರ್ಯ ಕೂಡ ಸಾಯಿ ಪಲ್ಲವಿ ವಿರುದ್ಧ ಮಾಧ್ಯಮದವರ ಮುಂದೆ ಬಹಿರಂಗವಾಗಿಯೇ ಮಾತನಾಡಿದ್ದರು. ಈಗ ಹೊಸ ಸೇರ್ಪಡೆ ಎಂಬಂತೆ ಈಕೆ ಶೂಟಿಂಗ್ ಗೆ ಸರಿಯಾಗಿ ಬರುತ್ತಿಲ್ಲ ಪದೇ ಪದೇ ಗೈರು ಆಗುತ್ತಿದ್ದಾಳೆ ಎಂದು ನಿರ್ದೇಹಷಕರು ದೂರುತ್ತಿದ್ದಾರೆ.. ಜನರಿಂದ ಒಳ್ಳೆ ಹೆಸರನ್ನು ಗಳಿಸಿಕೊಂಡ ಈಗಿನ ಕಾಲದ ಕೆಲವು ನಟಿಯರು ಎರಡು ಮೂರು ಚಿತ್ರಗಳನ್ನು ಮಾಡಿದ ತಕ್ಷಣ ಅದ್ಯಾಕೆ ಹೀಗೆ ಜಂಬದಿಂದ ವರ್ತಿಸಿ ತಮಗೆ ಸಿಕ್ಕಿರುವ ಅಮೂಲ್ಯ ಅವಕಾಶಗಳನ್ನು ಅದ್ಯಾಕೆ ಕೈಚೆಲ್ಲಿಕೊಳ್ಳುತ್ತಾರೋ ಗೊತ್ತಿಲ್ಲ, ಕನ್ನಡದ ಸಂಯುಕ್ತ ಹೆಗ್ಡೆ ವಿಚಾರದಲ್ಲೂ ಇದೇ ಕಥೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top