fbpx
Sports

ವಿಶ್ವಕಪ್ ಗೆದ್ದ ಭಾರತ ಕಿರಿಯರ ತಂಡಕ್ಕೆ ಭರ್ಜರಿ ಉಡುಗೊರೆ ಕೊಟ್ಟ BCCI. ರಾಹುಲ್ ಹುಡುಗ್ರು ಫುಲ್ ಖುಷಿ

ವಿಶ್ವಕಪ್ ಗೆದ್ದ ಭಾರತ ಕಿರಿಯರ ತಂಡಕ್ಕೆ ಭರ್ಜರಿ ಉಡುಗೊರೆ ಕೊಟ್ಟ BCCI. ರಾಹುಲ್ ಹುಡುಗ್ರು ಫುಲ್ ಖುಷಿ

ನ್ಯೂಜಿಲೆಂಡ್ ನ ಬೇ ಓವಲ್ ಮೈದಾನದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಬಲಿಷ್ಟ ಆಸ್ಟ್ರೇಲಿಯಾ ತಂಡವನ್ನು ಮಣಿಸಿ 4ನೇ ಬಾರಿಗೆ ಕಿರಿಯರ ವಿಶ್ವಕಪ್ ಅನ್ನು ಭಾರತ ಮುಡಿಗೇರಿಸಿಕೊಂಡಿದೆ. ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು 8 ವಿಕೆಟ್ ಗಳಿಂದ ಬಗ್ಗು ಬಡಿದು ಕನ್ನಡಿಗ ದ್ರಾವಿಡ್ ಹುಡುಗರು ವಿಶ್ವಕಪ್ ಅನ್ನು ಗೆದ್ದು ಬೀಗಿದ್ದಾರೆ.

 

 

 

ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಹುಮಾನ ಘೋಷಣೆ ಮಾಡಿದ್ದು ತಂಡದ ಆಟಗಾರರಿಗೆ ಮತ್ತು ಕೋಚ್ ರಾಹುಲ್ ದ್ರಾವಿಡ್, ಸಹಾಯಕ ಕೋಚ್ ಗಳಿಗೆ ವಿಶೇಷ ನಗದು ಬಹುಮಾನ ನೀಡಿದ್ದಾರೆ. ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ 50 ಲಕ್ಷ ರೂ ಬಹುಮಾನ ಘೋಷಣೆ ಮಾಡಿದ್ದು, ತಂಡದ ಎಲ್ಲ ಆಟಗಾರರಿಗೂ ತಲಾ 30 ಲಕ್ಷ ರೂ ನೀಡುವ ಕುರಿತು ಘೋಷಣೆ ಮಾಡಿದೆ. ಭಾರತ ಅಂಡರ್‌19 ಕ್ರಿಕೆಟ್ ತಂಡದ ತಂತ್ರಜ್ಞಾನ, ದೈಹಿಕ ಸಲಹೆಗಾರ ಇನ್ನೂ ಹಲವು ವಿಭಾಗದ ಬೆಂಬಲ ಸಿಬ್ಬಂದಿಗೆ ಪ್ರತಿಯೊಬ್ಬರಿಗೆ 20 ಲಕ್ಷ ರೂಪಾಯಿಯನ್ನು ನೀಡುವುದಾಗಿ ಘೋಷಣೆ ಮಾಡಿದೆ.

 

 

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಸೀಸ್‌ ತಂಡ 47.2 ಓವರ್‌ಗಳಿಗೆ ಸರ್ವ ಪತನಗೊಂಡು 216 ರನ್‌ಗಳಿಸಿತ್ತು. ಗೆಲ್ಲಲು 217 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ ಕೇವಲ 2 ವಿಕೆಟ್ ನಷ್ಟಕ್ಕೆ 38.5 ಓವರ್ ಗಳಲ್ಲಿ 220 ರನ್ ಗಳಿಸಿ ಗುರಿಯನ್ನು ಮುಟ್ಟಿತು. ಮನೋಜ್ ಕರ್ಲಾ ಆಕರ್ಷಕ ಅಜೇಯ ಶತಕ 101 ರನ್(102 ಎಸೆತ, 8 ಬೌಂಡರಿ, 3 ಸಿಕ್ಸರ್) ಸಿಡಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top