fbpx
ಸಿನಿಮಾ

ಹಿರಿಯ ಬಹುಭಾಷಾ ನಟಿ ಭಾನುಪ್ರಿಯ ರವರ ಮಾಜಿ ಪತಿ ವಿಧಿವಶ

ಹಿರಿಯ ಬಹುಭಾಷಾ ನಟಿ ಭಾನುಪ್ರಿಯ ರವರ ಮಾಜಿ ಪತಿ ವಿಧಿವಶ

ಹಿರಿಯ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ನಟಿಸಿರುವ ಕೂಚಿಪುಡಿ ಕಲಾವಿದೆ ಖ್ಯಾತಿಯ ನಟಿ ಬಹುಭಾಷಾ ನಟಿಯಾಗಿರುವ ಭಾನುಪ್ರಿಯ ಅವರ ಮಾಜಿ ಪತಿ ಆದರ್ಶ್ ಕೌಶಲ್ ಅವರು ಅಮೆರಿಕಾದಲ್ಲಿ ಸಾವನ್ನಪ್ಪಿದ್ದಾರೆ.

 

 

ನಟಿಯಾಗಿ ಅವರಿಗೆ ಅವಕಾಶಗಳು ಕಡಿಮೆಯಾದಾಗ ಆದರ್ಶ ಅವರನ್ನು 1988ರಲ್ಲಿ ಮದುವೆಯಾಗಿದ್ದರು. ಇವರ ಮದುವೆ ಅಮೇರಿಕಾದಲ್ಲಿ ನಡೆದಿತ್ತು ಇವರಿಗೆ ಅಭಿನಯ ಎಂಬ ಮಗಳು ಇದ್ದಾಳೆ ಎಂದು ತಿಳಿದುಬಂದಿದೆ. ವಿವಾಹವಾದ ಕೆಲವು ವರ್ಷಗಳಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. 2005 ರಲ್ಲಿ ಕೋರ್ಟ್ ವಿಚ್ಛೇದನ ನೀಡಿತ್ತು. ವಿಚ್ಛೇದನ ನಂತರ ಭಾರತಕ್ಕೆ ಮರಳಿದ ಭಾನುಪ್ರಿಯ ಮಗಳ ಜೊತೆಗೆ ಚೆನ್ನೈ ನಗರದಲ್ಲಿ ವಾಸವಾಗಿದ್ದಾರೆ.

 

 

ಆದರ್ಶ್ ಕೌಶಲ್ ರವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮಾಜಿ ಪತಿಯ ನಿಧನದ ಸುದ್ದಿ ಕೇಳಿ ಆಘಾತಗೊಂಡ ಭಾನುಪ್ರಿಯ ಕೂಡಲೇ ಅಮೆರಿಕಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top