fbpx
ತಿಂಡಿ ತೀರ್ಥ

ರುಚಿರುಚಿಯಾದ ನಾಟಿ ಸ್ಟೈಲ್ ಚಿಕನ್ ಗೋಡಂಬಿ ಮಸಾಲ ತಿಂದ್ರೆ ಸಕ್ಕತ್ತಾಗಿರುತ್ತೆ

ನಾಟಿ ಸ್ಟೈಲ್ ಚಿಕನ್ ಗೋಡಂಬಿ ಮಸಾಲ

 

ಬೇಕಾಗಿರುವ ಪದಾರ್ಥಗಳು :

ಚಿಕನ್ 1 ಕಿಲೋ
ಜೀರಿಗೆ ಪುಡಿ 2 ಟೀಚಮಚ
ಲವಂಗ 3
ದಾಲ್ಚಿನ್ನಿ 2 ತುಂಡು
ಗಸಗಸೆ 2 ಟೀ ಚಮಚ
ಅರಿಶಿನ 1 ಟೀಚಮಚ
ಉಪ್ಪು ರುಚಿಗೆ ತಕ್ಕಷ್ಟು
ಈರುಳ್ಳಿ 3
ಟೊಮೆಟೊ 3
ಕೆಂಪು ಮೆಣಸಿನಕಾಯಿ 6
ಶುಂಠಿ ಬೆಳ್ಳುಳ್ಳಿ ಪೇಸ್ಟ್ 3 ಟೀಚಮಚ
ತೆಂಗಿನಕಾಯಿ ಅರ್ಧ
ಧನಿಯಾ ಪುಡಿ 3 ಟೀಚಮಚ
ಮೆಣಸಿನಕಾಯಿ ಪುಡಿ 2 ಟೀಚಮಚ
ಗೋಡಂಬಿ 100 ಗ್ರಾಂ
ಸೋಂಪು ಪುಡಿ 3 ಟೀಚಮಚ
ಎಣ್ಣೆ

 

ತಯಾರಿಸುವ ವಿಧಾನ :

 

ಜೀರಿಗೆ ಪುಡಿ, ಕೊತ್ತಂಬರಿ ಪುಡಿ ಮತ್ತು ಸೋಂಪು ಪುಡಿ , ಅರಿಶಿನ ಪುಡಿ, ಮೆಣಸಿನಕಾಯಿ ಪುಡಿ ರುಬ್ಬಿಕೊಳ್ಳಿ.

ಗೋಡಂಬಿ, ಗಸಗಸೆ ಜತೆ ತೆಂಗಿನಕಾಯಿ ತುರಿದು ನುಣ್ಣಗೆ ರುಬ್ಬಿಕೊಳ್ಳಿ.

ಈರುಳ್ಳಿ ಸಣ್ಣಗೆ ಹಚ್ಚಿಟ್ಟುಕೊಳ್ಳಿ , ಸಣ್ಣದಾಗಿ ಟೊಮ್ಯಾಟೊ ಹಚ್ಚಿಕೊಳ್ಳಿ

ಬಾಣಲೆಯಲ್ಲಿ 3 -4 ಚಮಚ ಎಣ್ಣೆ ಬಿಸಿ ಮಾಡಿ ಇದಕ್ಕೆ ದಾಲ್ಚಿನ್ನಿ, ಲವಂಗ ಮತ್ತು ಮೆಣಸಿನಕಾಯಿ ಹುರಿಯಿರಿ.

ಈರುಳ್ಳಿ ಮತ್ತು ಟೊಮ್ಯಾಟೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಹುರಿಯಿರಿ.

ಇದಕ್ಕೆ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಹುರಿಯಿರಿ.

ಕತ್ತರಿಸಿದ ಕೋಳಿಯನ್ನು ಹಾಕಿ ಚೆನ್ನಾಗಿ ಬೆರೆಸಿ ಉಪ್ಪು ಹಾಕಿ ಹತ್ತು ನಿಮಿಷ ಬೇಯಲು ಬಿಡಿ , ಸ್ವಲ್ಪ ನೀರು ಚಿಮುಕಿಸಿ .

ಹತ್ತು ನಿಮಿಷ ಆದ ಮೇಲೆ ಗೋಡಂಬಿ, ಗಸಗಸೆ ಜತೆ ತೆಂಗಿನಕಾಯಿ ಮಸಾಲೆ ಹಾಕಿ ಬೆರೆಸಿ ,ಉಪ್ಪು ಸರಿಯಾಗಿ ಹೊಂದಿಸಿ

ಆನಂತ್ರ 5 ನಿಮಿಷ ಬಿಟ್ಟು ಬೆಂದಿದ್ದರೆ ಪಾತ್ರೆ ಕೆಳಗಿಸಿ , ಚಿಕನ್ ಗೋಡಂಬಿ ಮಸಾಲ ಸವಿಯಲು ಸಿದ್ದ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top