ಕಿರುತೆರೆ

ಚಂದನ್ ಜೊತೆ ಮದುವೆಯ ಸುದ್ದಿ ಕುರಿತು ಸ್ಪಷ್ಟನೆ ನೀಡಿದ ಅಗ್ನಿಸಾಕ್ಷಿ ಸನ್ನಿಧಿ!

ಚಂದನ್ ಜೊತೆ ಮದುವೆಯ ಸುದ್ದಿ ಕುರಿತು ಸ್ಪಷ್ಟನೆ ನೀಡಿದ ಅಗ್ನಿಸಾಕ್ಷಿ ಸನ್ನಿಧಿ!

 

 

ಸೋಷಿಯಲ್ ಮೀಡಿಯಾ ಎನ್ನುವುದೇ ಹೀಗೆ ಯಾವುದೇ ಒಂದು ವಿಷಯವನ್ನು ಹರಿಬಿಟ್ಟರೆ ಅತ್ಯಂತ ಕಡಿಮೆ ಅವಧಿಯಲ್ಲಿಯೇ ವೈರಲ್ ಮಾಡಿಬಿಡುತ್ತದೆ. ಈ ರೀತಿ ವೈರಲ್ ಆದ ಸುದ್ದಿಗಳಲ್ಲಿ ಈಗ ಚಾಲ್ತಿಯಲ್ಲಿರುವ ವಿಷಯ ಅಂದರೆ ಅದು ಚಂದನ್ ಶೆಟ್ಟಿ ಮತ್ತು ಅಗ್ನಿಸಾಕ್ಷಿ ಸನ್ನಿದಿಯ ಮದುವೆಯ ವಿಚಾರ. ಈ ಸುದ್ದಿಗೆ ಜನ್ಮ ಕೊಟ್ಟ ಮಹಾನುಭಾವ ಯಾರೋ ಗೊತ್ತಿಲ್ಲ ಆದರೆ ಸುದ್ದಿ ಮಾತ್ರ ಕಾಡ್ಗಿಚ್ಚಿನಂತೆ ಹಬ್ಬಿಕೊಂಡಿದ್ದು ನ್ಯೂಸ್ ಚಾನೆಲ್’ಗಳವೆರೆಗೆ ಪಸರಿಕೊಂಡಿದೆ . ಟ್ರೋಲ್ ಪೇಜ್’ಗಳಂತೂ ಈ ಸುದ್ದಿಯನ್ನು ನಿಜವೆಂದೇ ಭಾವಿಸಿ ಅನಧಿಕೃತವಾಗಿ ಇಬ್ಬರಿಗೂ ಮದುವೆಯ ವಿಷಸ್ ತಿಳಿಸಿಬಿಟ್ಟಿವೆ.

 

 

ನೆನ್ನೆ ಮಧ್ಯಾಹ್ನದಿಂದ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಮತ್ತು ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ವಿವಾಹವಾಗುತ್ತಿದ್ದಾರಂತೆ. ಇವರಿಬ್ಬರಿಗೂ ಫೆಬ್ರವರಿ 11ನೇ ತಾರೀಕಿನಂದು ನಿಶ್ಚಿತಾರ್ಥವಾಗುತ್ತದಂತೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು. ಈ ಸುದ್ದಿ ತಿಳಿಯುತ್ತಿದ್ದಂತೆ ಅವರವರ ಅಭಿಮಾನಿಗಳಲ್ಲಿ ವಿಚಾರದ ಬಗ್ಗೆ ಗೊಂದಲವನ್ನು ಮೂಡಿಸಿತ್ತು. ಎಲ್ಲಾ ಅಂತೇ ಕಂತೆಗಳು ಎಲ್ಲೆಯನ್ನು ಮೀರುತ್ತಿರುವಾಗಲೇ ಈ ಸುದ್ದಿಯ ಬಗ್ಗೆ ಕ್ಲ್ಯಾರಿಟಿ ಕೊಡಲು ಸ್ವತಃ ಸನ್ನಿದಿ ವೈಷ್ಣವಿ ಗೌಡ ಅವರೇ ಪ್ರತ್ಯಕ್ಷವಾಗಿದ್ದಾರೆ.

 

 

ಚಂದನ್ ಜೊತೆಗಿನ ಮದುವೆಯ ವಿಚಾರವಾಗಿ ಫೇಸ್ಬುಕ್ ಲೈವ್ ನಲ್ಲಿ ಮಾತನಾಡಿರುವ ವೈಷ್ಣವಿ “ಈ ಸುದ್ದಿ ಶುದ್ಧ ಸುಳ್ಳು, ನಾನು ಸದ್ಯಕ್ಕೆ ಮದುವೆ ಮಾಡಿಕೊಳ್ಳುವ ಯಾವ ಯೋಜನೆಯಲ್ಲಿಲ್ಲ ಅಲ್ಲದೆ ಯಾರ ಜೊತೆ ನಿಶ್ಚಿತಾರ್ಥವನ್ನ ಕೂಡ ಮಾಡ್ಕೋತಿಲ್ಲ. ಈಗ ತಾನೇ ನನ್ನ ಕರಿಯರ್ ನ ಪ್ರಾರಂಭಿಸಿದ್ದೇನೆ ಜೀವನದಲ್ಲಿ ಸಾದಿಸಬೇಕಾದುದ್ದು ತುಂಬಾ ಇದೆ.,ನಾನು ಮದುವೆ ಮಾಡಿಕೊಳ್ಳುವಾಗ ನಿಮ್ಮೆಲ್ಲರಿಗೂ ಹೇಳಿಯೇ ಮದುವೆಯಾಗುತ್ತೇನೆ. ಕಲಾವಿದರ ಬಗ್ಗೆ ಸುಖಾಸುಮ್ಮನೆ ಈ ರೀತಿಯ ವದಂತಿಗಳನ್ನು ಹಬ್ಬಿಸಬೇಡಿ, ಇದು ಮನಸಿಗೆ ತುಂಬಾ ನೋವಾಗುತ್ತದೆ. ” ಎಂದು ರೂಮರ್ ಗೆ ತೆರೆ ಎಳೆದಿದ್ದಾರೆ.

ಸನ್ನಿದಿ ವೈಷ್ಣವಿಯ ವಿಡಿಯೋವನ್ನು ಇಲ್ಲಿ ನೋಡಿ


 

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಂದನ್ ಶೆಟ್ಟಿ ಆಪ್ತ ವಲಯವು ಕೂಡ ಸುದ್ದಿಯನ್ನು ಅಲ್ಲೆಗೆಳೆದಿದ್ದು ಇದೆಲ್ಲಾ ವದಂತಿ ಎಂದು ಖಚಿತಪಡಿಸಿದೆ. ಅಲ್ಲಿಗೆ ನೆನ್ನೆಯಿಂದ ಟಾಕ್ ಆಫ್ ದಿ ಟೌನ್ ಆಗಿದ್ದ ಚಂದನ್ ಸನ್ನಿದಿ ಅಘೋಷಿತ ಮದುವೆ ವಿಷಯಕ್ಕೆ ಎಳ್ಳು ನೀರುಬಿದ್ದಿದ್ದು. ಈ ಸುದ್ದಿ ಹಬ್ಬಿಸಿದವರಿಗೆ ತೀರಾ ನಿರಾಸೆ ಮೂಡಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top