fbpx
ಮನೋರಂಜನೆ

ಮೂಗು ಕತ್ತರಿಸುತ್ತೇವೆ ಎಂದು ಹೇಳಿದ್ದವರಿಗೆ ತಿರುಗೇಟು ನೀಡಿದ ದೀಪಿಕಾ ಪಡುಕೋಣೆ!

ಮೂಗು ಕತ್ತರಿಸುತ್ತೇವೆ ಎಂದು ಹೇಳಿದ್ದವರಿಗೆ ತಿರುಗೇಟು ನೀಡಿದ ದೀಪಿಕಾ ಪಡುಕೋಣೆ!

 

 

ಚಿತ್ರೀಕರಣ ಆರಂಭವಾದ ಕ್ಷಣದಿಂದಲೂ ಥರ ಥರದ ವಿವಾದಗಳನ್ನು ಸುತ್ತಿಕೊಂಡಿದ್ದ ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರ ಸದ್ಯ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಹಿಂದೆ ಈ ಚಿತ್ರಕ್ಕೆ ಖುದ್ದು ಸುಪ್ರೀಂ ಕೋರ್ಟ್ ಭಾರತಾಧ್ಯಂತ ಈ ಚಿತ್ರವನ್ನು ಬಿಡುಗಡೆಗೊಳಿಸಲು ಹಸಿರು ನಿಶಾನೆ ತೋರಿಸಿದ್ದರೂ ಕೆಲ ಮಂದಿ ಅಡ್ಡಿ ಪಡಿಸುವ ಮಾತಾಡುತ್ತಿದ್ದರು. ಅಲ್ಲದೆ ಚಿತ್ರದ ನಾಯಕಿ ದೀಪಿಕಾ ಪಡುಕೋಣೆಯವರ ಮೂಗು, ತಲೆಯನ್ನು ಕಡಿದವರಿಗೆ ಬಹುಮಾನವನ್ನು ಘೋಷಿಸಿದ್ದರು.

 

 

ಮುಖ್ಯಪಾತ್ರಧಾರಿಯಾಗಿರೋ ದೀಪಿಕಾ ಪಡುಕೋಣೆ ಓರ್ವ ಹೆಣ್ಣೆಂಬುದನ್ನೂ ಮರೆತು ಮಾಡಿದ್ದ ಪ್ರಹಾರಗಳು ಒಂದೆರಡಲ್ಲ. ಇದೇ ಪಂಥದ ಮಂದಿ ದೀಪಿಕಾಳ ತಲೆ ಕಡಿಯುವಂತೆ ಕರೆ ನೀಡಿ ಆಕೆಯ ತಲೆಗೆ ರೇಟು ಫಿಕ್ಸ್ ಮಾಡಿದ್ದರು. ಇನ್ನೂ ಕೆಲ ಮಂದಿ ದೀಪಿಕಾಳನ್ನು ಜೀವಂತವಾಗಿಯೇ ಸುಡುವಂಥಾ ಅಮಾನವೀಯ ಮಾತುಗಳನ್ನಾಡಿದ್ದರು. ಆದರೆ ದೀಪಿಕಾ ಮಾತ್ರ ಇವೆಲ್ಲವನ್ನೂ ಧೈರ್ಯವಾಗಿಯೇ ಎದುರಿಸಿದ್ದರು. ತಮ್ಮ ವಿರುದ್ಧ ಕೇಳಿ ಬಂದಿದ್ದ ವಿರೋಧಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದ ದೀಪಿಕಾ ಈಗ ಅಂತಹ ಮನಸ್ಥಿತಿಯ ಜನರಿಗೆ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ದೀಪಿಕಾ “ನನಗೆ ನನ್ನ ಮೂಗು ಅಂದರೆ ಇಷ್ಟ, ಅದನ್ನು ಕಳೆದುಕೊಳ್ಳಲು ನಾನು ಇಷ್ಟ ಪಡುವುದಿಲ್ಲ. ಒಂದು ವೇಳೆ ನಿಮಗೆ ಏನಾದರೂ ಬೇಕೇ ಬೇಕು ಅಂದರೆ ನನ್ನ ಕಾಲನ್ನು ಕತ್ತರಿಸಿಕೊಂಡು ಹೋಗಿ. ನನ್ನ ಕಾಲು ನಿಮಗೆ ಉಪಯೋಗಕ್ಕೆ ಬರಬಹುದು.” ಎಂದು ಟಾಂಗ್ ನೀಡಿದ್ದಾರೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top