fbpx
ದೇವರು

ದರ್ಶನ ಮಾಡಿದ್ರೆ ಏಳೇಳು ಜನ್ಮಗಳ ಪಾಪ ಪರಿಹರವಾಗುತ್ತಂತೆ ಅಂತ ಹೇಳುವ ದ್ವಾದಶ ಜ್ಯೋತಿರ್ಲಿಂಗಗಳು ಹೇಗೆ ಹುಟ್ಟಿದವು ಗೊತ್ತೇ ?

ದರ್ಶನ ಮಾಡಿದ್ರೆ ಏಳೇಳು ಜನ್ಮಗಳ ಪಾಪ ಪರಿಹರವಾಗುತ್ತಂತೆ ಅಂತ ಹೇಳುವ ದ್ವಾದಶ ಜ್ಯೋತಿರ್ಲಿಂಗಗಳು ಹೇಗೆ ಹುಟ್ಟಿದವು ಗೊತ್ತೇ ?

 

ನಮ್ಮಲ್ಲಿ ಸಾಕಷ್ಟು ಜನ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಮಾತ್ರದಿಂದಲೇ ಸಕಲ ಪಾಪಗಳಿಂದ ವಿಮುಕ್ತಿ ಸಿಗುತ್ತದೆ ಎಂದು ತಿಳಿದು ಈ ಜನ್ಮದಲ್ಲಿ ಅಥವಾ ಜೀವನದಲ್ಲಿ ಒಂದು ಬಾರಿಯಾದರೂ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಮಾಡಬೇಕೆಂದು ಹಾತೊರೆಯುತ್ತಾರೆ. ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಮಾತ್ರದಿಂದಲೇ ಪರಮ ಶಿವನ ಅನುಗ್ರಹ ಸಾಧ್ಯ ಎಂದು ಪುರಾಣಗಳು, ವೇದಗಳು ಸಾರಿ ಸಾರಿ ಹೇಳುತ್ತವೆ. ಈಗ ದ್ವಾದಶ ಜ್ಯೋತಿರ್ಲಿಂಗಗಳು ಏರ್ಪಡಲು ಕಾರಣವೇನು ? ಹಾಗೆ ಈ ದ್ವಾದಶ ಜ್ಯೋತಿರ್ಲಿಂಗಗಳು ಏರ್ಪಡಲು ಕಾರಣಕರ್ತರು ಯಾರು ? ಎಂಬುದನ್ನು ಈಗ ತಿಳಿಯೋಣ.

 

ಶಿವಪುರಾಣದ ಪ್ರಕಾರ ಬ್ರಹ್ಮ ಹಾಗೂ ವಿಷ್ಣು ಇವರಿಬ್ಬರಲ್ಲಿ ತಮ್ಮನ್ನು ತಾವು ನಾನು ಹೆಚ್ಚು, ನಾನೇ ಹೆಚ್ಚು ಎಂದು ತಾವೇ ವಾದಿಸಿಕೊಳ್ಳಲು ಆರಂಭಿಸಿದ್ದರಂತೆ. ಈ ವಾದವು ಅತಿರೇಕಕ್ಕೆ ಹೋಗಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಈ ವಿವಾದಗಳಿಂದ ಸ್ವತಃ ಪರಮೇಶ್ವರನೇ ಅವರಿಬ್ಬರ ನಡುವಿನ ವಿವಾದ ಬಗೆಹರಿಸಲು, ತಾನೇ ಬಂದಿಳಿದನಂತೆ.

ಈಶ್ವರನ ಸಂಕಲ್ಪದಿಂದ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಒಂದು ಬೃಹತ್ ಆಕಾರದ ಜ್ಯೋತಿರ್ಲಿಂಗ ಏರ್ಪಟ್ಟಿತ್ತು. ಬ್ರಹ್ಮ ಹಾಗೂ ವಿಷ್ಣುವಿನ ಮಧ್ಯದಲ್ಲಿಯೇ ಅದು ಉದ್ಭವಿಸಿತ್ತಂತೆ, ಆಗ ಬ್ರಹ್ಮ ಮತ್ತು ವಿಷ್ಣು ಇಬ್ಬರೂ ಸೇರಿ ಆ ಜ್ಯೋತಿರ್ಲಿಂಗದ ಹತ್ತಿರ ಹೋಗುತ್ತಿದ್ದಂತೆಯೇ, ಅವರಿಬ್ಬರ ನಡುವಿನ ವಾದ ವಿವಾದಗಳು ತಾತ್ಕಾಲಿಕವಾಗಿ ಸ್ವಲ್ಪ ಕಡಿಮೆಯಾದಂತೆ ಅನ್ನಿಸಿತು. ಇನ್ನು ಆ ಮಹಾಲಿಂಗದ ತುದಿ, ಮೊದಲು ಕಂಡುಕೊಳ್ಳಬೇಕೆಂದು ಆಸಕ್ತಿ ಮತ್ತು ಇಚ್ಛೆ ಇಬ್ಬರಲ್ಲೂ ಹುಟ್ಟುತ್ತಿದ್ದಂತೆ, ಆದ್ದರಿಂದ ಬ್ರಹ್ಮನು ತಾನು ಹಂಸ ಪಕ್ಷಿಯ ರೂಪ ತಾಳಿ, ಲಿಂಗದ ಕೊನೆಯನ್ನು ನೋಡಲು ಹೋದರೆ, ವಿಷ್ಣುವು ವರಾಹ ರೂಪವನ್ನು ತಾಳಿ ಲಿಂಗದ ಮೊದಲನ್ನು ಕಂಡುಕೊಳ್ಳಲು ಹೋದನಂತೆ.

 

 

ಹಾಗೆ ಕಂಡುಕೊಳ್ಳಲು ಹೋದ ಶಿವಲಿಂಗದ ಬ್ರಹ್ಮ ಮತ್ತು ವಿಷ್ಣುವಿಗೆ ತುದಿ ,ಮೊದಲು ಗೋಚರವೇ ಆಗಲಿಲ್ಲವಂತೆ. ಅಷ್ಟರಲ್ಲಿ ಶಿವಲಿಂಗ ಕೆಳಗಡೆಯಿಂದ ಒಂದು ಕೇದಿಗೆ ಪುಷ್ಪವು ಹೊರ ಬರುವುದನ್ನು ಕಂಡನಂತೆ, ಅದನ್ನು ನಿಲ್ಲಿಸಿ ಬ್ರಹ್ಮ ತನ್ನ ಮತ್ತು ವಿಷ್ಣುವಿನ ವಿವಾದವನ್ನು ವಿವರಿಸಿ ತಿಳಿಸಿದಂತೆ. ನನಗೆ ಸುಳ್ಳು ಹೇಳಿ ಸಹಾಯ ಮಾಡಲು ಬೇಡಿಕೊಂಡನಂತೆ. ಅದೇ ಸಮಯದಲ್ಲಿ ಅಲ್ಲಿ ಕಾಮಧೇನು ಸಹ ಬಂದಿತಂತೆ ಅದಕ್ಕೂ ಸಹ ತಮ್ಮಿಬ್ಬರ ವಾದ ವಿವಾದದ ವಿವರಣೆಯನ್ನು ನೀಡಿ ನಮಿಬ್ಬರಲ್ಲಿ ಶಿವಲಿಂಗದ ಕೊನೆಯನ್ನು ನೋಡಿರುವುದಾಗಿ ಸುಳ್ಳು ಸಾಕ್ಷಿ ನೀಡಬೇಕೆಂದು ಬೇಡಿಕೊಂಡನಂತೆ.

 

 

ಬ್ರಹ್ಮನು ಈ ಜಗತ್ತಿನ ಸೃಷ್ಟಿಕರ್ತನಾಗಿದ್ದು ಈ ರೀತಿಯ ಸಹಾಯ ಕೋರುತ್ತಿರುವಾಗ ಕೇದಿಗೆ ಹಾಗೂ ಕಾಮಧೇನುಗಳ ಅಭ್ಯಂತರವಿಲ್ಲದೆ ಒಪ್ಪಿಕೊಂಡರಂತೆ, ಇನ್ನೂ ಹೀಗೆ ಎರಡು ಕೆಳಗಿಳಿದು ಬಂದ ನಂತರ ಅಲ್ಲಿ ವಿಷ್ಣು ಮತ್ತು ಬ್ರಹ್ಮನ ಹತ್ತಿರ ಹೋಗಿ, ತನಗೆ ಜ್ಯೋತಿರ್ಲಿಂಗದ ಮೊದಲು ಕಾಣಲಿಲ್ಲ ಕೊನೆಯೂ ಕಾಣಲಿಲ್ಲವೆಂದು ಹೇಳಿಕೊಂಡನಂತೆ. ಅದನ್ನು ಕೇಳಿದ ಬ್ರಹ್ಮ ತಾನು ಮಾತ್ರ ಲಿಂಗದ ಕೊನೆಯನ್ನು ನೋಡಿರುವುದಾಗಿ ಮತ್ತು ತನಗೆ ಸಾಕ್ಷಿ ಎಂಬಂತೆ ಕೇದಿಗೆಯನ್ನು ಹಾಗೂ ಕಾಮಧೇನುವನ್ನು ಸುಳ್ಳು ಸಾಕ್ಷಿ ಹೇಳಬೇಕೆಂದು ಪ್ರಸ್ತುತ ಪಡಿಸಿವೆ ಎಂದು ಕೇದಿಗೆ ಪುಷ್ಪ ಮತ್ತು ಕಾಮಧೇನು ಏನು ಹೇಳಿರಬಹುದು ಎಂದು ಊಹಿಸಿ ಒಂದು ಬಾರಿ ಸಾಕ್ಷಾತ್ ಸೃಷ್ಟಿಕರ್ತನೇ ಸುಳ್ಳು ನುಡಿದಿದ್ದಾನೆ , ಎಂದಾಗ ಅವು ಕೂಡ ಹಿಂಜರಿಯುತ್ತವೆ, ಕೇದಿಗೆ ಬ್ರಹ್ಮ ಹೇಳಿರುವುದು ನಿಜ, ಲಿಂಗದ ಕೊನೆಯ ಭಾಗದ ದರ್ಶನ ಬ್ರಹ್ಮನಿಗೆ ಆಗಿದೆ ಎಂದು ಹೇಳಿತಂತೆ. ಇನ್ನು ಇದು ನಿಜ ಎಂದು ತಲೆಯಾಡಿಸಿತಂತೆ ಕಾಮದೇನು.

 

 

ಆದರೆ ಕಾಮಧೇನುವಿಗೆ ಯಾಕೋ ? ಏನೋ ? ಗೊತ್ತಿಲ್ಲದೆ ಅನುಮಾನ ಉಂಟಾಯಿತಂತೆ, ಹೌದೆಂದು ತಲೆಯನ್ನು ಅಲ್ಲಾಡಿಸಿ, ಇಲ್ಲವೆಂದು ಬಾಲವನ್ನು ಸಹ ಅಡ್ಡವಾಗಿ ಅಲ್ಲಾಡಿಸಿತ್ತಂತೆ. ಇದನ್ನು ಗಮನಿಸಿದ ವಿಷ್ಣು ಬ್ರಹ್ಮ ಹೇಳುತ್ತಿರುವುದು ಸುಳ್ಳು ಎಂದು ಅರಿತುಕೊಂಡನು. ಅಷ್ಟರಲ್ಲಿ ಇದೆಲ್ಲವನ್ನು ಗಮನಿಸುತ್ತಿದ್ದ ಪರಮೇಶ್ವರನು ಕುಪಿತನಾಗಿ ಬ್ರಹ್ಮ ಸುಳ್ಳು ಹೇಳಿದ ಕಾರಣದಿಂದ ಆತನಿಗೆ ಭೂ ಲೋಕದಲ್ಲಿ ಎಲ್ಲಿಯೂ ದೇವಾಲಯ ಇಲ್ಲದಂತೆ, ಹಾಗೂ ಬ್ರಹ್ಮನಿಗೆ ಭೂಲೋಕದಲ್ಲಿ ಎಲ್ಲೂ ಕೂಡ ಶಿವನು ಬ್ರಹ್ಮನಿಗೆ ಪೂಜೆ, ಪ್ರಾರ್ಥನೆಗಳು ಸಲ್ಲದಂತೆ ಶಾಪವನ್ನು ನೀಡಿದನಂತೆ.
ನಂತರ ಭಗವಂತನಾದ ವಿಷ್ಣುವು ಸತ್ಯವನ್ನು ನುಡಿದ ಕಾರಣದಿಂದಾಗಿ ವಿಷ್ಣುವಿಗೆ ಸಮಸ್ತ ಭೂ ಲೋಕದಲ್ಲಿ ಪೂಜೆ, ಪ್ರಾರ್ಥನೆಗಳನ್ನು ಕೈಗೊಳ್ಳುವಂತೆ ಆಶೀರ್ವಾದವನ್ನು ಮತ್ತು ವರವನ್ನು ನೀಡಿದನಂತೆ ಶಿವನು.

 

 

ಆ ಅಖಂಡ ಜ್ಯೋತಿಯನ್ನು ಸೃಷ್ಟಿಸಿದ ಆ ಜ್ಯೋತಿರ್ಲಿಂಗ ಅನಂತವಾದದ್ದು ,ದಿವ್ಯವಾದದ್ದು, ಮತ್ತು ತುಂಬಾ ಶಕ್ತಿಶಾಲಿಯಾದದ್ದು, ಅಮೋಘವಾದದ್ದು, ಆ ಜ್ಯೋತಿರ್ ಲಿಂಗದಿಂದ ಹೊರಹೊಮ್ಮಿದ್ದ ಪ್ರದೇಶಗಳಲ್ಲಿ ಈಗ ದ್ವಾದಶ ಜ್ಯೋತಿರ್ಲಿಂಗಗಳು ಉದ್ಭವಿಸಿವೆ.

ಜ್ಯೋತಿರ್ಲಿಂಗಗಳು ಎಂದರೆ ಹನ್ನೆರಡು ಲಿಂಗಗಳು ಅಂದರೆ ದ್ವಾದಶ ಲಿಂಗಗಳು ಎಂದು ಅರ್ಥ . ಈ ಕ್ಷೇತ್ರಗಳ ದರ್ಶನ ಮಾತ್ರದಿಂದಲೇ ನಮಗೆ ಮೋಕ್ಷ ಪಡೆದುಕೊಳ್ಳಬಹುದು , ಎಂದು ಜನರಲ್ಲಿ ವಿಶ್ವಾಸ, ನಂಬಿಕೆ ಇದೆ. ಇನ್ನು ಈ ಕ್ಷೇತ್ರಗಳನ್ನು ಹೀಗೆ ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಈ ಕ್ಷೇತ್ರಗಳನ್ನು ದರ್ಶಿಸಿ ಪುನೀತರಾಗಬಹುದು. ಇನ್ನೂ ಹನ್ನೆರಡು ಜ್ಯೋತಿರ್ಲಿಂಗಗಳು ನೆಲೆಸಿರುವ ಪ್ರದೇಶಗಳು ಅಲ್ಲಿನ ದೈವದ ಹೆಸರಿನಿಂದಲೇ ಆ ಕ್ಷೇತ್ರಗಳು ಹೆಸರುವಾಸಿಯಾಗಿದೆ ಒಂದೊಂದು ಜ್ಯೋತಿರ್ಲಿಂಗಕ್ಕೆ ಒಂದೊಂದು ಪ್ರಾಶಸ್ತ್ಯ ಪ್ರಾಮುಖ್ಯತೆ ಇದೆ. ತನ್ನದೇ ಆದ ವಿಶೇಷತೆಗಳನ್ನು ಒಳಗೊಂಡಿವೆ. ಇಷ್ಟಕ್ಕೂ ಆ ಜ್ಯೋತಿರ್ಲಿಂಗಗಳು ಯಾವುವು ? ಎಲ್ಲಿವೆ ? ಎಲ್ಲಿ ನೆಲೆಸಿವೆ ? ಎನ್ನುವುದನ್ನು ತಿಳಿಯೋಣ..

 

 

ಗುಜರಾತ್ ನಲ್ಲಿ ಸೋಮನಾಥೇಶ್ವರನಾಗಿ, ಶ್ರೀಶೈಲದಲ್ಲಿ ಮಲ್ಲಿಕಾರ್ಜುನನಾಗಿ, ಉಜ್ಜೈನಿಯಲ್ಲಿ ಮಹಾಕಾಳೇಶ್ವರನಾಗಿ, ಮಧ್ಯ ಪ್ರದೇಶದಲ್ಲಿ ಓಂಕಾರೇಶ್ವರನಾಗಿ, ಹಿಮಾಲಯದಲ್ಲಿ ಕೇದಾರನಾಥೇಶ್ವರನಾಗಿ, ಮಹಾರಾಷ್ಟ್ರದಲ್ಲಿ ಭೀಮಾ ಶಂಕರನಾಗಿ, ವಾರಣಾಸಿಯಲ್ಲಿ ಕಾಶಿ ವಿಶ್ವೇಶ್ವರನಾಗಿ, ಮಹಾರಾಷ್ಟ್ರದಲ್ಲಿ ತ್ರಯಂಬಕೇಶ್ವರನಾಗಿ , ಜಾರ್ಖಂಡನ್ ದೇವಾಘರ್ ದಲ್ಲಿ ವೈದ್ಯನಾಥೇಶ್ವರನಾಗಿ, ದ್ವಾರಕ ನಗರದಲ್ಲಿ ನಾಗೇಶ್ವರನಾಗಿ, ತಮಿಳುನಾಡಿನಲ್ಲಿ ರಾಮೇಶ್ವರನಾಗಿ, ಔರಂಗಾಬಾದ್ ನಲ್ಲಿ ಗ್ರೇಷ್ಮೆಶ್ವರನಾಗಿ ನೆಲೆಸಿದ್ದಾನೆ. ಹೀಗಿದೆ ಆ ಪರಮೇಶ್ವನ ದ್ವಾದಶ ಜ್ಯೋತಿರ್ಲಿಂಗಗಳು ಉದ್ಭವಿಸಿದ ಕಥೆ.

ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳನ್ನು ಯಾರು ದರ್ಶನ ಮಾಡುತ್ತಾರೋ ? ಆ ಪರಮೇಶ್ವರನನ್ನು ಪೂಜಿಸಿ ಪ್ರಾರ್ಥಿಸುತ್ತಾರೋ ಆ ಶಿವಶಂಕರನ ಕೃಪಾಕಟಾಕ್ಷ ಪೂರ್ಣರೂಪವಾಗಿ ಅವರ ಮೇಲೆ ಇರುತ್ತದೆ. ತನ್ನ ಭಕ್ತಾದಿಗಳಿಗೆ ಶಿವನು ಅಷ್ಟಐಶ್ವರ್ಯ , ಆಯಸ್ಸು, ಆರೋಗ್ಯ, ಸಂಪತ್ತು ಭರಿತರಾಗಿ ಜೀವನವನ್ನು ಕರುಣಿಸುತ್ತಾನಂತೆ. ಶಿವನ ಭಕ್ತಾದಿಗಳು ನೆಮ್ಮದಿಯ ಜೀವನವನ್ನು ಸಾಗಿಸುತ್ತಾರೆ ಎಂದು ಭಕ್ತರಲ್ಲಿ ಇರುವ ನಂಬಿಕೆಯಾಗಿದೆ ಹಾಗೂ ಇದು ಸತ್ಯವೂ ಕೂಡ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top