fbpx
ಹೆಚ್ಚಿನ

ಜೀವನದಲ್ಲಿ ನಾವು ಈ 4 ಅಮೂಲ್ಯ (ಅಭ್ಯಾಸ) ರತ್ನಗಳನ್ನು ಅಳವಡಿಸಿಕೊಂಡರೆ ಖಂಡಿತವಾಗಿಯೂ ನಮ್ಮ ಜೀವನವೇ ಬದಲಾಗುತ್ತದೆ ಅಂತೇ ಏನದು ಮುಂದೆ ಓದಿ

ಜೀವನದಲ್ಲಿ ನಾವು ಈ 4 ಅಮೂಲ್ಯ (ಅಭ್ಯಾಸ) ರತ್ನಗಳನ್ನು ಅಳವಡಿಸಿಕೊಂಡರೆ ಖಂಡಿತವಾಗಿಯೂ ನಮ್ಮ ಜೀವನವೇ ಬದಲಾಗುತ್ತದೆ ಅಂತೇ ಏನದು ಮುಂದೆ ಓದಿ

 

ನಮ್ಮ ಜೀವನದಲ್ಲಿ ನಾವು ಈ ನಾಲ್ಕು ಅಮೂಲ್ಯ (ಅಭ್ಯಾಸ) ರತ್ನಗಳನ್ನು ನಾವು ಖಂಡಿತವಾಗಿಯೂ ಅಳವಡಿಸಿಕೊಂಡರೆ ನಮ್ಮ ಜೀವನವೇ ಬದಲಾಗುತ್ತದೆ ಎನ್ನುವ ನಂಬಿಕೆ.
ನಮ್ಮ ಜೀವನದಲ್ಲಿ ನಾವು ಈ ನಾಲ್ಕು ಅಭ್ಯಾಸಗಳನ್ನು ಅಳವಡಿಸಿಕೊಂಡು ನಮ್ಮ ಜೀವನದಲ್ಲಿ ನಡೆದರೆ ಸುಖ ಸಂತೋಷ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಮತ್ತು ನಮ್ಮ ಬದುಕಿನಲ್ಲಿ ಖುಷಿಯೊಂದಿಗೆ ಗೆಲುವು ಸಹ ನಿಮ್ಮ ನಮ್ಮದಾಗುತ್ತದೆ. ಆ ನಾಲ್ಕು ರತ್ನಗಳು ಯಾವುವೆಂದರೆ.

ಮೊದಲ ರತ್ನ- ಕ್ಷಮೆ.
ಎರಡನೇ ರತ್ನ -ಮರೆವು.
ಮೂರನೇ ರತ್ನ- ವಿಶ್ವಾಸ.
ನಾಲ್ಕನೇ ರತ್ನ- ವೈರಾಗ್ಯ.

ಈ ನಾಲ್ಕು ಅಮೂಲ್ಯ ರತ್ನಗಳನ್ನು ಪ್ರಯತ್ನಗಳು ನಮ್ಮಲ್ಲಿದ್ದರೆ ಈ ಲೋಕವನ್ನೇ ನಾವು ಜಯಿಸಬಹುದು:

 

 

1. ಕ್ಷಮೆ.
ನಮ್ಮಲ್ಲಿರಬೇಕಾದ ಮೊದಲ ರತ್ನ ಕ್ಷಮೆ. ನಮಗೆ ಯಾರು ಏನೇ ಹೇಳಲಿ ಅವರ ಮಾತನ್ನು ಎಂದಿಗೂ ಮನಸ್ಸಿಗೆ ತೆಗೆದುಕೊಳ್ಳಬಾರದು ಮತ್ತು ಅದಕ್ಕಾಗಿ ಎಂದಿಗೂ ಅವರ ಮೇಲೆ ಸೇಡಿನ ಭಾವನೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. ಅವರನ್ನು ಕ್ಷಮಿಸಿ ಬಿಡಬೇಕು.

 

 

2. ಮರೆವು.
ನಮ್ಮಲ್ಲಿ ಇರಬೇಕಾಗಿರುವ ಎರಡನೇ ರತ್ನ ಮರೆವು. ನಾವು ಇನ್ನೊಬ್ಬರಿಗೆ ಮಾಡಿದ ಉಪಕಾರವನ್ನು ಮರೆತುಬಿಡಬೇಕು. ಎಲ್ಲರಲ್ಲಿಯೂ ಹೇಳಿಕೊಂಡು ತಿರುಗಾಡಬಾರದು. ಎಂದಿಗೂ ಆ ಉಪಕಾರಕ್ಕೆ ನಾವು ಪ್ರತಿಫಲವನ್ನು ಯಾವುದೇ ಕಾರಣಕ್ಕೂ ಅಪೇಕ್ಷಿಸದೆ ಇರುವುದೇ ಒಳ್ಳೆಯದು.

 

 

3. ವಿಶ್ವಾಸ .
ನಮ್ಮಲ್ಲಿರಬೇಕಾದ ಮೂರನೇ ರತ್ನೆ ವಿಶ್ವಾಸ. ಸದಾ ನಮ್ಮ ಪ್ರಯತ್ನ ಮತ್ತು ಆ ಪರಮಾತ್ಮನಲ್ಲಿ ಅಚಲವಾದ ವಿಶ್ವಾಸವನ್ನು ಇಡಬೇಕು. ಇದೇ ಸಫಲತೆಯ ಸೂತ್ರ. ನಾವು ಯಾವುದೇ ಕೆಲಸ ಮಾಡಿದರೂ ಮನಸ್ಸಿಟ್ಟು’ ವಿಶ್ವಾಸವಿಟ್ಟು ಮತ್ತು ನಂಬಿಕೆಯಿಟ್ಟು ಮಾಡಬೇಕು. ಹಾಗೆ ಯಾರನ್ನಾದರೂ ಒಂದು ಕೆಲಸಕ್ಕೆ ಸೇರಿಸಿಕೊಂಡರೆ ಅವರ ಮೇಲೆಯೂ ಸಹ ವಿಶ್ವಾಸವನ್ನು ಇಡಬೇಕು. ಇಲ್ಲದೇ ಹೋದರೆ ಜೀವನವೇ ಸಂಶಯವಾಗಿ ಕಷ್ಟಕರವಾಗುತ್ತದೆ.

 

 

4.ವೈರಾಗ್ಯ .
ನಮ್ಮಲ್ಲಿರ ಬೇಕಾಗಿರುವ ನಾಲ್ಕನೇ ರತ್ನ ವೈರಾಗ್ಯ “ಜಾತಸ್ಯ ಮರಣಂ ಧ್ರುವಂ”. ಹುಟ್ಟಿದ ಪ್ರತಿಯೊಬ್ಬನೂ ಸಾಯಲೇಬೇಕು ಎನ್ನುವ ಮಾತನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಅದರಂತೆಯೇ ಸಮಯವನ್ನು ವ್ಯರ್ಥ ಮಾಡದೆ ಜೀವನವನ್ನು ಆನಂದದ ಅನುಭೂತಿ ಪಡೆಯುತ್ತಾ ವರ್ತಮಾನದಲ್ಲಿ ಬದುಕುವುದು ಇದೇ ಜೀವನದ ನಿಜವಾದ ಸಾರ್ಥಕತೆ. ಹಿಂದೆ ನಮ್ಮ ಜೀವನದಲ್ಲಿ ನಡೆದದ್ದನ್ನು ಮರೆಯಬೇಕು ನಾಳೆಯ ಬಗ್ಗೆ ಚಿಂತೆ ಮಾಡಬಾರದು ಇಂದಿನ ಸಮಯವನ್ನು ಖುಷಿಯಾಗಿ ಕಳೆಯಬೇಕು.

ಈ ನಾಲ್ಕು ಅಭ್ಯಾಸಗಳನ್ನು ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಂಡರೆ ಸದಾ ಕಾಲ ಯಾವಾಗಲೂ ಸಂತೋಷವಾಗಿ ನೆಮ್ಮದಿಯಿಂದ ಜೀವನದ ಕಾಲವನ್ನು ಕಳೆಯಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top