fbpx
ಮನೋರಂಜನೆ

ಲೋಕಲ್ ಥಿಯೇಟರ್ ನಲ್ಲಿ ಮುಖ ಮುಚ್ಚಿಕೊಂಡು ಕದ್ದು ಸಿನಿಮಾ ನೋಡಿದ ಹರಿಪ್ರಿಯಾ!

ಲೋಕಲ್ ಥಿಯೇಟರ್ ನಲ್ಲಿ ಮುಖ ಮುಚ್ಚಿಕೊಂಡು ಕದ್ದು ಸಿನಿಮಾ ನೋಡಿದ ಹರಿಪ್ರಿಯಾ!

 

 

ಸಾಮನ್ಯವಾಗಿ ಸಿನಿಮಾ ನಟ ನಟಿಯರು ಸಿನಿಮಾ ನೋಡೋಕೆ ಒಂಟಿಯಾಗಿ ಥಿಯೇಟರ್’ಗಳಿಗೆ ಹೋಗೋದಿಲ್ಲ. ಅದರಲ್ಲೂ ಲೋಕಲ್ ಥಿಯೇಟರ್ಸ್ ಅಂದ್ರೆ ದೂರದ ಮಾತು. ಈಗ ಈ ಸಾಹಸವನ್ನು ನಟಿ ಹರಿಪ್ರಿಯಾ ಮಾಡಿ ಮುಗಿಸಿದ್ದಾರೆ. ಹೌದು ಬೆಂಗಳೂರಿನ ಲೋಕಲ್ ಥಿಯೇಟರ್ ಗೆ ಮುಖಮುಚ್ಚಿಕೊಂಡು ಹೋಗಿದ್ದ ಹರಿಪ್ರಿಯಾ ಸಿನಿಮಾವನ್ನುನೋಡಿಕೊಂಡು ಬಂದಿದ್ದಾರೆ! ಅಷ್ಟಕ್ಕೋ ಹರಿಪ್ರಿಯಾ ಹಿಂಗೇ ಮಾಡಿದ್ದು ಯಾಕೆ ಅಂತೀರಾ? ಮುಂದೆ ಓದಿ.

 

 

ನಟಿ ಹರಿಪ್ರಿಯಾ ತೆಲುಗು ನಟ ಬಾಲಕೃಷ್ಣ ಅವರ ಜೊತೆ ಟಾಲಿವುಡ್ ನಲ್ಲಿ ಜೈ ಸಿಂಹ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು ಆ ಚಿತ್ರ ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲೂ ಕೂಡ ಬಿಡುಗಡೆ ಹೊಂದಿದ್ದು ಚಿತ್ರದ ಬಗ್ಗೆ ಪ್ರೇಕ್ಷಕರ ಅಭಿಪ್ರಾಯವನ್ನು ನೇರವಾಗಿ ತಿಳಿದುಕೊಳ್ಳಲು ಹೀಗೆ ಲೋಕಲ್ ಥಿಯೇಟರ್ ಗೆ ಹೋಗಿ ಅಭಿಮಾನನಿಗಳ ಜೊತೆ ಮುಖ ಮುಚ್ಚಿಕೊಂಡು ಚಿತ್ರ ವೀಕ್ಷಣೆ ಮಾಡಿದ್ದಾರೆ.

 

 

ಮುಖಕ್ಕೆ ಮಾಸ್ಕ್‌, ಹೆಗಲ ಮೇಲೆ ಹೊದಿಕೆಯನ್ನು ಹೊದ್ದುಕೊಂಡು ಬೆಂಗಳೂರಿನಲ್ಲಿರುವ ಲೋಕಲ್‌ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದ ಹರಿಪ್ರಿಯಾ, ಚಿತ್ರ ವೀಕ್ಷಣೆಯ ಬಳಿಕ ತನ್ನ ಫೇಸ್ಬುಕ್ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಿರುವ ಹರಿಪ್ರಿಯಾ ಈ ಬಗ್ಗೆ ಖುಷಿ ವ್ಯಕ್ತಪಡಿಸಿದ್ದು “ಜೈಸಿಂಹ ಸಿನಿಮಾದ ಬಗ್ಗೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿದೆ ಅಂತ ತಿಳಿಯಲು ನಾನು ಬೇಷಾಮರೆಸಿಕೊಂಡು ಲೋಕಲ್ ಥಿಯೇಟರ್’ಗೆ ಬಂದಿದ್ದೇನೆ. ಈ ಹಿಂದೆ ಯಾವತ್ತೂ ಈ ರೀತಿಯ ಪ್ರಯತ್ನ ಮಾಡಿರಲಿಲ್ಲ. ನಿಜವಾಗ್ಲೂ ಆದರೆ ಖುಷಿಯಾಗುತ್ತಿದೆ. ಇನ್ನೂ ಮುಂದೆ ಇದೇ ರೀತಿಯಲ್ಲಿ ಬಂದು ಸಿನಿಮಾ ನೋಡಬೇಕೆಂದು ಆಸೆ ಆಗುತ್ತಿದೆ” ಎಂದು ಬರೆದುಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top