fbpx
ವಿಶೇಷ

ಸಿಕ್ಕರೆ ಒಂದು ಪ್ಲೇಟ್ ಸೈಲೆಂಟ್ ಆಗಿ ಬಾಯುರಿಸುತ್ತಾ ಬ್ಯಾಟಿಂಗ್ ಮಾಡೋ ಬಿರಿಯಾನಿ ಹೇಗೆ ಹುಟ್ಟಿತ್ತು ಗೊತ್ತಾ ?

ನಾನ್ ವೆಜ್ ಪ್ರಿಯರ ಮನೆಯಲ್ಲಿ ಮಟನ್, ಚಿಕನ್ ಇಲ್ಲದೇ ಹೋದರೇ ಹೇಗೆ ಹೇಳಿ, ನಾನ್ ವೆಜ್ ಅಂದ್ರೆ ಸಾಕು ಅದ್ರಲ್ಲೂ ಚಿಕನ್ ಅಂದ್ರೆ ಸಕು ಚಿಕನ್ ಪ್ರಿಯರ ಬಾಯಲ್ಲಿ ಸಹಜವಾಗಿಯೇ ನೀರೂರಿರುತ್ತದೆ!

 

 

ಇನ್ನು ಚಿಕನ್ ಬಿರಿಯಾನಿ ಸಿಕ್ಕಿ ಬಿಟ್ರೆ ಸ್ವರ್ಗಾನೆ ಸಿಕ್ಕಿದ ಹಾಗೆ ಒಂದು ಪ್ಲೇಟ್ ನೆಮ್ಮದಿಯಾಗಿ ಖಾಲಿ ಆಗಿ ಹೋಗುತ್ತೆ ಮೊಗಲ್ ಬಿರ್ಯಾನಿ ಹೈದೆರಾಬಾದ ಬಿರಿಯಾನಿ, ವೆಜ್ ಬಿರಿಯಾನಿ , ಎಗ್ ಬಿರಿಯಾನಿ , ಮಟನ್ ,ಕೈಮಾ ಬಿರಿಯಾನಿ ಹೀಗೆ ಎಷ್ಟೊಂದು ಬಿರಿಯಾನಿ ಹೇಗೆ ತರಹೇವಾರಿ ವಿಧಗಳು ಸಿಕ್ತವೆ.

 

ಆದರೆ ಮೊದಲು ಈ ಬಿರಿಯಾನಿ ಎಲ್ಲಿ ಹುಟ್ಟಿತು ಇದರ ವಿಶೇಷತೆಗಳು ಏನು ಬನ್ನಿ ಈಗ ತಿಳಿಯೋಣ ..

 

 

‘ಬಿರಿಯಾನಿ’ ಅನ್ನೋ ಪದ ಪರ್ಷಿಯನ್ ಭಾಷೆಯ ಪದ ‘ಬಿರಿಯಲ್ ‘ಅನ್ನೋ ಪದದಿಂದ ಹುಟ್ಟಿದಂತೆ , ‘ಬಿರಿಯಲ್ ‘ ಅಂದ್ರೆ ‘ಅಡುಗೆ ಮಾಡುವ ಮುನ್ನ ಎಣ್ಣೆಯಲ್ಲಿ ಹುರಿ’ ಎಂದು ಇನ್ನು ಪಾರಂಪರಿಕ ಬಿರಿಯಾನಿಯನ್ನು ಸಹ ಹೀಗೆಯೇ ತಯಾರಿಸಲಾಗುತ್ತದೆ ಮೊದಲು ಎಣ್ಣೆಯಲ್ಲಿ ಮಸಾಲೆಯನ್ನು ಹಾಗು ಮಸಾಲೆ ಪದಾರ್ಥಗಳನ್ನು ಅಕ್ಕಿಯನ್ನು ಚೆನ್ನಾಗಿ ಹುರಿದುಕೊಂಡು ನಂತ್ರ ಬಿರಿಯಾನಿ ಅಡುಗೆ ಮುಂದುವರಿಸುತ್ತಾರೆ .

 

 

1398 ನೇ ಇಸವಿಯಲ್ಲಿ ಮಾಡಲಾಗಿತ್ತಂತೆ ಟರ್ಕ್ ಮಂಗೋಲಿಯಾದ ಚಕ್ರವರ್ತಿ ಟಿಮೋಲ್ ತಯಾರಿಸಲು ಹೇಳಿದನು ಎನ್ನುವ ಉಲ್ಲೇಖಗಳು ಇವೆ , ಎಣ್ಣೆಯಲ್ಲಿ ಅಕ್ಕಿ ಮಸಾಲೆ ಪದಾರ್ಥಗಳು ಹಾಗು ಮಸಾಲೆಯನ್ನು ಬೆರೆಸಿ ತಯಾರಿಸಿದ್ದರು ಎಂದು ಹೇಳಲಾಗಿದೆ , ಕ್ರಿ .ಶ 2 ನೇ ಶತಮಾನದಲ್ಲಿ ಅರಬ್ ವರ್ತಕರು ವ್ಯಾಪಾರ ಮಾಡಲು ಭಾರತಕ್ಕೆ ಬಂದಾಗ ಇಲ್ಲಿಗೆ ಪರಿಚಯವಾಯಿತು ಎಂದು ಹೇಳಲಾಗುತ್ತದೆ .

 

 

ಮೊದಲಿಗೆ ತಮಿಳು ಪದ ‘ಒರು ಸೋರು’ ಎಂದು ಕರೆಯುತ್ತಿದ್ದ ಬಿರಿಯಾನಿ ನಂತ್ರದ ಕಾಲದಲ್ಲಿ ಮೊಘಲರ ಆಕ್ರಮಣವಾದ ಮೇಲೆ ಪಾರಂಪರಿಕ ಬಿರಿಯಾನಿ ರುಚಿಯನ್ನು ಮೊಘಲರು ಮತ್ತಷ್ಟು ಖ್ಯಾತಿ ಗೊಳಿಸಿದರು ಎಂದು ಹೇಳಲಾಗುತ್ತದೆ , ಕಾಲಾನಂತರದಲ್ಲಿ ರಾಣಿ ಮುಮ್ತಾಜ್ ತಮ್ಮ ಸೈನ್ಯದ ಸೈನಿಕರು ಯುದ್ಧ ಮಾಡಿ ಬಳಲಿದ್ದನ್ನು ಕಂಡು ಬಿರ್ಯಾನಿ ತಯಾರಿಸಿ ಬಡಿಸಿದ್ದಳು ಎಂಬ ಉಲ್ಲೇಖಗಳು ಇವೆ .

 

 

ಮೊಘಲರು ,ನಿಜಾಮರು ಹೀಗೆ ಇತರ ಇಸ್ಲಾಂ ಧರ್ಮದ ರಾಜರಿಂದ ಖ್ಯಾತಿ ಹೊಂದಿ ಇಂದು ಬಿರಿಯಾನಿ ರುಚಿ ಇಡೀ ಭಾರತದ ಉದ್ದಗಲಕ್ಕೂ ಹರಡಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top