fbpx
ಹೆಚ್ಚಿನ

ಜಗ್ಗೇಶ್ ರವರ ಹೊಸ ಕಲ್ಯಾಣ ಮಂಟಪದ ವಿಶೇಷತೆ ಏನು ಗೊತ್ತ

ಜಗ್ಗೇಶ್ ರವರ ಹೊಸ ಕಲ್ಯಾಣ ಮಂಟಪದ ವಿಶೇಷತೆ ಏನು ಗೊತ್ತ

 

ನವರಸ ನಾಯಕ ಜಗ್ಗೇಶ್ ರವರು ಮೈಸೂರಿನಲ್ಲಿ ಹೊಸ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಿದ್ದಾರೆ. ಇದಕ್ಕೆ ‘ಜಗ್ಗೇಶ್ ಕನ್ವೆನ್ಷನ್ ಹಾಲ್’ ಎಂದು ಹೆಸರು ಇಟ್ಟಿದ್ದಾರೆ.

 

 

ತಮ್ಮ ಫೇಸ್ಬುಕ್ ಖಾತೆಯಲ್ಲಿ ‘ಜಗ್ಗೇಶ್ ಕನ್ವೆನ್ಷನ್ ಹಾಲ್’ ಬಗ್ಗೆ ಹಂಚಿಕೊಂಡಿರುವ ನವರಸ ನಾಯಕ ಜಗ್ಗೆ “ಮೈಸೂರಿನಲ್ಲಿ ಮದುವೆ ಆರತಕ್ಷತೆ ಶುಭ ಸಮಾರಂಭಕ್ಕೆ ನನ್ನ ಕಲ್ಯಾಣ ಮಂಟಪ 1ಎಕರೆ ವಿಸ್ತಾರದಲ್ಲಿ..ಸುಸಜ್ಜಿತ 15ಕೊಠಡಿ,24ಘಂಟೆ ಬಿಸಿನೀರಿನ ವ್ಯವಸ್ಥೆ,50ಕಾರು ನಿಲುಗಡೆಗೆ ಸ್ಥಳ,10ಸಾವಿರ ಚದರಡಿ ಲಾನ್,ಅರಳಿಕಟ್ಟೆ,2,500ಜನಕ್ಕೆ ಅಡುಗೆ ಪಾತ್ರೆ ವ್ಯವಸ್ಥೆ,500ಜನ ಕೂರುವ ಮದುವೆ ಹಾಲ್,500ಜನ ಕೂರುವ ಡೈನಿಂಗ್ ಹಾಲ್,45ಕೆವಿ ವಿದ್ಯುತ್ ಜನರೇಟರ್, ಪೂಜೆಗೆ ಆಗಮ ಶಾಸ್ತ್ರದಿಂದ ನಿರ್ಮಾಣವಾದ ಬಲಮುರಿ ಗಣೇಶನ ದೇವಸ್ಥಾನ,ಮದುವೆ ಪೂಜೆ ಮಂಗಳಕಾರ್ಯಕ್ಕೆ ಪೂಜಾರಿಗಳು.. ವಾದ್ಯ ಹೂವಿನ ಅಲಂಕಾರದ ಜನ ಆರತಕ್ಷತೆಗೆ ಲಭ್ಯ,” ಎಂದು ಫೇಸ್ಬುಕ್ ಖಾತೆಯಲ್ಲಿ ಬರೆದಿದ್ದಾರೆ.

 

 

ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪರಮ ಭಕ್ತ ಎನ್ನುವುದು ಜಗ್ಗೇಶ ರನ್ನು ಬಲ್ಲವರಿಗೆ ಗೊತ್ತು. ಜಗ್ಗೇಶ್ ತಾವು ಮಾಡುವ ಎಲ್ಲಾ ಕೆಲಸದಲ್ಲೂ ರಾಯರ ಆಶೀರ್ವಾದ ಇರಬೇಕು ಎಂದು ಜಗ್ಗೇಶ್ ಇಚ್ಛೆ ಪಡುತ್ತಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top