fbpx
ದೇವರು

ಮಾರೀಚ ಮತ್ತು ಸುಬಾಹು ರಾಕ್ಷಸರ ತೊಂದರೆಯಿಂದ ವಿಶ್ವಾಮಿತ್ರರ ಯಜ್ಞದ ರಕ್ಷಣೆ ಕಾರ್ಯವನ್ನು ಮಾಡಿದ ರಾಮ ಲಕ್ಷ್ಮಣರು

ಮಾರೀಚ ಮತ್ತು ಸುಬಾಹು ರಾಕ್ಷಸರ ತೊಂದರೆಯಿಂದ ವಿಶ್ವಾಮಿತ್ರರ ಯಜ್ಞದ ರಕ್ಷಣೆ ಕಾರ್ಯವನ್ನು ಮಾಡಿದ ರಾಮ ಲಕ್ಷ್ಮಣರು

ತಾಟಕಿಯ ವಧೆಯನ್ನು ಮಾಡಿದ ಕಾರಣದಿಂದಾಗಿ ವಿಶ್ವಾಮಿತ್ರರಿಗೆ ಬಹಳ ಸಂತೋಷವಾಯಿತು. ಮರುದಿನ ಸ್ನಾನ ಸಂಧ್ಯಾ ವಂದನೆಗಳನ್ನು ನೆರವೇರಿಸಿದ ನಂತರದಲ್ಲಿ ರಾಮ ಲಕ್ಷ್ಮಣರಿಗೆ ವಿಶ್ವಾಮಿತ್ರರು ಅನೇಕ ದಿವ್ಯಾಸ್ತ್ರ ಮಂತ್ರಗಳನ್ನು ಉಪದೇಶ ಮಾಡಿದರು. ಆ ಅಸ್ತ್ರಗಳಲ್ಲಿ ವರುಣಾಸ್ತ್ರ, ಇಂದ್ರಾಸ್ತ್ರ, ಬ್ರಹ್ಮಾಸ್ತ್ರ, ಅಗ್ನಿಅಸ್ತ್ರ ,ವಾಯುವ್ಯಾಸ್ತ್ರಗಳು ಮುಖ್ಯವಾಗಿದ್ದವು.

 

 

ಈ ಮಂತ್ರಗಳನ್ನು ಉಪದೇಶ ಮಾಡಿದಾಗ ಆಯಾ ದೇವತೆಗಳು ಪ್ರತ್ಯಕ್ಷರಾಗಿ ನಿಂತಾಗ ಶ್ರೀರಾಮನು ದೇವತೆಗಳಿಗೆ ವಂದಿಸಿದನು. ಯುದ್ಧದ ಸಮಯ ಬಂದಾಗ ನೀವು ಸಹಾಯ ಸಲ್ಲಿಸಿರಿ ಎಂದು ಕೇಳಿಕೊಂಡರು. ಈ ಅಸ್ತ್ರಗಳಿಂದಾಗಿ ಮಳೆ ಬರಿಸುವುದು ಬಿರುಗಾಳಿ ಎಬ್ಬಿಸುವುದು ಬೆಂಕಿ ತಯಾರಿಸುವುದು ಎಲ್ಲವೂ ರಾಮನಿಗೆ ಸಾಧ್ಯವಾಯಿತು.

 

 

ರಾಮನು ವಿಶ್ವಾಮಿತ್ರರಿಗೆ ರಾಕ್ಷಸರು ಯಾವ ದಿಕ್ಕಿನಿಂದ ಬಂದು ತೊಂದರೆ ಕೊಡುತ್ತಾರೆ ತಿಳಿಸಿರಿ ಎಂದಾಗ ವಿಶ್ವಾಮಿತ್ರರು ಸಿದ್ಧಾಶ್ರಮದ ಬಗ್ಗೆ ತಿಳಿಸಿದರು. ಹಿಂದೆ ಮಹಾವಿಷ್ಣು ತಪಸ್ಸು ಮಾಡಿದ ಸ್ಥಳವಿದು, ಬಲಿಯು ಪ್ರತಾಪಶಾಲಿಯಾಗಿದ್ದಾಗ ಅವನು ಬಂದು ಯಜ್ಞ ಮಾಡಿದನು. ದೇವೇಂದ್ರನು ಯಜ್ಞಕ್ಕೆ ತಡೆಯುಂಟು ಮಾಡಲು ನಿಶ್ಚಯಿಸಿದನು. ಬಲಿಯು ತಾನೇ ಶ್ರೇಷ್ಠ ದಾನಿಯೆಂದು ಅಹಂಕಾರಿಯಾಗಿದ್ದನು. ಆಗ ವಿಷ್ಣುವು ಕಶ್ಯಪನ ಮಗ ವಾಮನನಾಗಿ ಜನಿಸಿದನು. ಕುಳ್ಳ ವ್ಯಕ್ತಿಯಾಗಿ ಬಂದು ಬಲಿಯ ಯಜ್ಞ ಶಾಲೆಯಲ್ಲಿ ಮೂರು ಪಾದಾದಷ್ಟು ಸ್ಥಳವನ್ನು ಕೇಳಿದನು.ಬಲಿಯೂ ಕೊಡಲು ಸಿದ್ಧನಾದಾಗ ವಾಮನನು ತ್ರಿವಿಕ್ರಮನಾಗಿ ಬಂದು ಒಂದು ಪಾದದಿಂದ ಭೂಮಿಯನ್ನು, ಇನ್ನೊಂದು ಪಾದದಿಂದ ಪಾತಾಳವನ್ನು, ವ್ಯಾಪಿಸಿ ನಿಂತನು ಮೂರನೇ ಪಾದವನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಬಲಿಯನ್ನು ಪಾತಾಳಕ್ಕೆ ತಳ್ಳಿದನು.

 

 

 

ಮೂರು ಪಾದಗಳಿಂದ ಮೂರು ಲೋಕವನ್ನು ವ್ಯಾಪಿಸಿದ ಮಾಮನ ಎಲ್ಲವನ್ನೂ ದಾನ ಪಡೆದಾಗ ಬಲಿಯೂ ಬಂಧಿಸಿದವರನ್ನೆಲ್ಲರನ್ನು ಬಿಡುಗಡೆ ಮಾಡಿದನು. ಹೀಗೆ ಹಿಂದೆ ವಿಷ್ಣುವು ಇದ್ದ ಸ್ಥಳದಲ್ಲಿಯೇ ನನ್ನ ಆಶ್ರಮವಿದೆ. ನಾನು ಯಜ್ಞವನ್ನು ಆರಂಭಿಸುತ್ತೇನೆ, ಆಗ ಬರುವ ರಾಕ್ಷಸರನ್ನು ನೀವು ಕೊಳ್ಳಬೇಕು ಎಂದು ವಿಶ್ವಾಮಿತ್ರನ ಹೇಳಿದನು.

ವಿಶ್ವಾಮಿತ್ರರು ಯಜ್ಞ ದೀಕ್ಷೆ ಹೊಂದಿ ಯಜ್ಞವನ್ನು ಆರಂಭಿಸಿದರು. ರಾಮಲಕ್ಷ್ಮಣರು ಬಿಲ್ಲು ಬಾಣಗಳನ್ನು ಧರಿಸಿ ಯಜ್ಞದ ರಕ್ಷಣೆಯ ಕಾರ್ಯವನ್ನು ಆರಂಭಿಸಿದರು. ವಿಶ್ವಾಮಿತ್ರರು ಇಂದಿನಿಂದ ಆರು ದಿವಸ ಯಜ್ಞ ನಡೆಯುವುದು. ಆ ಕಾಲದಲ್ಲಿ ಮೌನವಾಗಿರುತ್ತಾರೆ. ನೀವು ಜಾಗೃತರಾಗಿದ್ದು ರಕ್ಷಿಸಿರಿ ಎಂದು ಶಿಷ್ಯರು ತಿಳಿಸಿದರು. ರಾಮಲಕ್ಷ್ಮಣರು ಹಗಲು ರಾತ್ರಿ ಕಾವಲು ಕಾದರು.

 

 

ಯಜ್ಞದ ಮುಕ್ತಾಯದ ಸಮಯ ಸಮೀಪಿಸುತ್ತಿದ್ದಂತೆ ಯಜ್ಞ ಕುಂಡದಲ್ಲಿ ಉರಿ ಕಾಣಿಸಿತು, ಬಿರುಗಾಳಿ ಬೀಸಲಾರಂಭಿಸಿತು, ಭಯಂಕರ ಶಬ್ದ ಕೇಳಿತು, ಕಾರ್ಮೋಡಗಳು ಕವಿದು ರಕ್ತದ ಮಳೆ ಸುರಿಯಲಾರಂಭಿಸಿತು. ಮಾರೀಚ ಮತ್ತು ಸುಬಾಹು ಇತ್ತ ಕಡೆಗೆ ಬರುತ್ತಿದ್ದರು.ರಾಮನು ನೂರಾರು ಬಾಣಗಳಿಂದ ಬಾಣಗಳ ಚಪ್ಪರವನ್ನೇ ಏರ್ಪಡಿಸಿದನು. ಮಾರೀಚನ ಮೇಲೆ ಮಾನವಾಸ್ತ್ರ ಪ್ರಯೋಗಿಸಿದನು. ಅವನು ಎಚ್ಚರ ತಪ್ಪಿದನು. ದೂರ ಸಮಯದಲ್ಲಿ ಹೋಗಿ ಬಿದ್ದನು.

ಆಜ್ಞೆಯಾಸ್ತ್ರಾದಿಂದ ಸುಬಾಹು ಮರಣ ಹೊಂದಿದನು. ಬೇರೆ ಯಾರೂ ತೊಂದರೆ ಉಂಟು ಮಾಡಲು ಬರಲಿಲ್ಲ. ಋಷಿಗಳು ಯಜ್ಞವನ್ನು ಸರಾಗವಾಗಿ ಮುಗಿಸಿದರು. ವಿಶ್ವಾಮಿತ್ರರು ರಾಮನನ್ನು ಪ್ರೀತಿಯಿಂದ ಆಶೀರ್ವದಿಸಿ ನನ್ನ ಅಪೇಕ್ಷೆಯನ್ನು ಈಡೇರಿಸಿದೆ ಎಂದು ಸಡಗರ ಸಂಭ್ರಮದಿಂದ ಇದ್ದರು. ರಾಮನ ಪರಾಕ್ರಮದ ಸಂಗತಿ ಎಲ್ಲ ಕಡೆಗಳಲ್ಲಿ ಪ್ರಸ್ಸಿದ್ದವಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top