fbpx
ಸಿನಿಮಾ

ಪ್ಯಾಡ್ ಮ್ಯಾನ್ ಚಿತ್ರ ವೀಕ್ಷಣೆ ಮಾಡಲಿರುವ ಪ್ರಧಾನಿ ಮೋದಿ.

ಪ್ಯಾಡ್ ಮ್ಯಾನ್ ಚಿತ್ರ ವೀಕ್ಷಣೆ ಮಾಡಲಿರುವ ಪ್ರಧಾನಿ ಮೋದಿ.

 

ಸಂಜಯ್ ಲೀಲಾ ಭನ್ಸಾಲಿ ರವರ ದೊಡ್ಡ ವಿವಾದ ಸೃಷ್ಟಿ ಮಾಡಿದ ಸಿನಿಮಾ ‘ಪದ್ಮಾವತ್’ ನೊಂದಿಗೆ ಬಾಕ್ಸ್ ಆಫೀಸ್ ನಲ್ಲಿ ಘರ್ಷಣೆ ತಡೆಯಲು ಬಾಲಿವುಡ್ ಚಿತ್ರ ನಟ ಅಕ್ಷಯ್ ಕುಮಾರ್ ರವರು ತಮ್ಮ ಪ್ಯಾಡ್ ಮ್ಯಾನ್ ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದರು.

 

 

ಪ್ಯಾಡ್ ಮ್ಯಾನ್ ಚಿತ್ರ ಮುಂದಿನ ಶುಕ್ರವಾರ ದಿನಾಂಕ 09 ರಂದು ದೇಶ್ಯಾದ್ಯಂತ ಬಿಡುಗಡೆ ಯಾಗಲಿದೆ. ಸಾಮಾಜಿಕ ಸಂದೇಶವನ್ನು ಹೊಂದಿರುವ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೋರಿಸಬೇಕೆಂಬ ಆಸೆ ಚಿತ್ರ ತಂಡಕ್ಕೆ ಇದೆ ಅಂತೆ. ಚಿತ್ರತಂಡ ಪ್ರಧಾನಿ ಮೋದಿ ಅವರಿಗೆ ಭೇಟಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದಾ ಕಾರ್ಯ ಪ್ರವರ್ತರಾಗಿರುವ ಪ್ರಧಾನಿಯವರು ಬಿಡುವು ಮಾಡಿಕೊಂಡು ಈ ಚಿತ್ರ ವೀಕ್ಷಣೆ ಮಾಡಲಿದ್ದಾರೆಯೇ ಎಂದು ಕಾಡು ನೋಡಬೇಕಾಗಿದೆ.

 

 

ಈ ಮೊದಲು ಬಾಲ್ಕಿ ನಿರ್ದೇಶನ ಮಾಡಿರುವ ಪ್ಯಾಡ್ ಮ್ಯಾನ್ ಚಿದ ಬಿಡುಗಡೆ ದಿನಾಂಕ ಜನವರಿ 25ಕ್ಕೆ ನಿಗದಿ ಮಾಡಿದ್ದರು. ಆದರೆ ಈಗ ಫೆಬ್ರವರಿ 9ಕ್ಕೆ ಬಿಡುಗಡೆ ಮಾಡಲಿ ನಿರ್ಧಾರ ಮಾಡಿದ್ದಾರೆ. ಪ್ಯಾಡ್ ಮ್ಯಾನ್ ಸಿನಿಮಾದಲ್ಲಿ ನಟ ಅಕ್ಷಯ್ ಕುಮಾರ್, ನಟಿ ಸೋನಮ್ ಕಪೂರ್, ರಾಧಿಕಾ ಆಪ್ಟೆ, ಸುಧೀರ್ ಪಾಂಡೆ ಸೇರಿದಂತೆ ಇನ್ನು ಹಲವಾರು ಜನ ಕಲಾವಿಧರು ಭಾಗವಹಿದ್ದಾರೆ.

 

 

ಅರುಣಾಚಲಂ ರಾಜ್ಯದ ಮುರುಗನಾಥನ್ ರವರ ಜೀವನ ಕಥೆ ಆಧಾರಿತ ಸಾಮಾಜಿಕ ಉದ್ಯಮಶೀಲತೆಯ ಬಗ್ಗೆ ಮತ್ತು ಸಾಮಾಜಿಕ ಕಾಳಜಿ ಹೊಂದಿರುವ, ಭಾರತೀಯರಲ್ಲಿ ಸಾಮಾಜಿಕ ಉದ್ಯಮಶೀಲತೆಗೆ ಪ್ರೇರಣೆ ನೀಡುವಂತಹ ಅದ್ಭುತ ಕಥಾ ಹಂದರ ಹೊಂದಿರುವ ಜೀವನ ಚರಿತ್ರೆಯುಳ್ಳ ಚಲನಚಿತ್ರವಿದು. ಈ ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಕಾಡು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top