fbpx
ಮನೋರಂಜನೆ

ಉತ್ತಮ ಸಾಮಾಜಿಕ ಸಂದೇಶ ಹೊಂದಿರುವ ಪ್ಯಾಡ್ ಮ್ಯಾನ್ ಚಿತ್ರವನ್ನು ವೀಕ್ಷಿಸಲಿದ್ದಾರೆ ಪ್ರಧಾನಿ ಮೋದಿ.

ಉತ್ತಮ ಸಾಮಾಜಿಕ ಸಂದೇಶ ಹೊಂದಿರುವ ಪ್ಯಾಡ್ ಮ್ಯಾನ್ ಚಿತ್ರವನ್ನು ವೀಕ್ಷಿಸಲಿದ್ದಾರೆ ಪ್ರಧಾನಿ ಮೋದಿ.

 

 

ಮುಂದಿನ ಶುಕ್ರವಾರ ರಿಲೀಸ್ ಆಗುತ್ತಿರುವ ನಟ ಅಕ್ಷಯ್ ಕುಮಾರ್ ನಟನೆಯ ಮುಂದಿನ ಚಿತ್ರ ಪ್ಯಾಡ್ ಮ್ಯಾನ್ ಚಿತ್ರ ಬಾಲಿವುಡ್ ಅಂಗಳದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಒಂದು ರೇಂಜಿನ ಟಾಕ್ ಕ್ರಿಯೇಟ್ ಮಾಡಿದೆ. ಈಗ ಪ್ರತಿಯೊಬ್ಬರೂ ಈ ಚಿತ್ರದ ಬಗ್ಗೆ ಮಾತನಾಡುತ್ತಿದ್ದು ಈಗಾಗಲೇ ಅನೇಕರು ಇದನ್ನು ವೀಕ್ಷಿಸಲು ತಮ್ಮ ಟಿಕೆಟ್ ಗಳನ್ನ ಬುಕ್ ಮಾಡಿಕೊಂಡಿದ್ದಾರೆ. ಹೆಚ್ಚೇನೂ ಪ್ರಚಾರವನ್ನು ಮಾಡದಿದ್ದರೂ ಮೌತ್ ಟಾಕ್ ಮೂಲಕವೇ ಹೆಚ್ಚು ಹೆಸರಾಗುತ್ತಿರುವ ಈ ಚಿತ್ರದ ನಾಯಕ ಅಕ್ಷಯ್ ಕುಮಾರ್ ಚಿತ್ರಕ್ಕೆ ವಿಶೇಷ ಪ್ರಚಾರ ನೀಡಲು ಮುಂದಾಗಿದ್ದಾರೆ.

 

 

ಸದ್ಯ ಅಕ್ಷಯ್ ಕುಮಾರ್ ಅವರು ದೆಹಲಿಗೆ ತೆರಳಿ ದೇಶದ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದಾರೆ. ಹೌದು ಮಹಿಳೆಯರ ಕುರಿತಾದ ಗಂಭೀರ ವಿಷ್ಯದ ಬಗ್ಗೆ ಉತ್ತಮ ಸಾಮಾಜಿಕ ಸಂದೇಶವನ್ನು ಹೊಂದಿರುವ ಪ್ಯಾಡ್ ಮ್ಯಾನ್ ಚಿತ್ರವನ್ನು ನರೇಂದ್ರ ಮೋದಿಯವರಿಗೆ ತೋರಿಸಲು ಚಿತ್ರತಂಡ ಪ್ಲಾನ್ ಮಾಡಿದ್ದು ಅದಕ್ಕಾಗಿ ಅಕ್ಷಯ್ ಕುಮಾರ್ ನರೇಂದ್ರ ಮೋದಿ ಅವರ ಜೊತೆ ಸಮಾಲೋಚನೆ ನಡೆಸಿದ್ದಾರೆ.

 

 

ಬಾಲಿವುಡ್ ಖ್ಯಾತ ನಿರ್ದೇಶಕ ಆರ್.ಬಾಲ್ಕಿ ನಿರ್ದೇಶನದ ಈ ಚಿತ್ರವು ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್’ಗಳನ್ನು ಸಂಶೋಧಿಸಿದ ಅರುಚಲಮ್ ಮುರುಗನಾಥಮ್ ಅವರ ಜೀವನದ ಆಧಾರಿತ ಕತೆಯಾಗಿದ್ದು ಚಿತ್ರದಲ್ಲಿ ಅಕ್ಷಯ್ ಕುಮಾರ್, ಸೋನಮ್ ಕಪೂರ್, ರಾಧಿಕಾ ಆಪ್ಟೆ, ಸುಧೀರ್ ಪಾಂಡೆ ಸೇರಿ ಹಲವಾರು ಕಲಾವಿದರು ನಟಿಸಿದ್ದಾರೆ. ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ನಟಿಸಿದ್ದು ಚಿತ್ರ ಫೆಬ್ರವರಿ 09 ರಂದು ತೆರೆಗೆ ಬರುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top