fbpx
ಕಿರುತೆರೆ

ಬಿಗ್‌ಬಾಸ್ ಗೆದ್ದ ಚೆಂದನ್ ಹೆಗಲ ಮೇಲೆ ಬಿತ್ತು ಹೊಸ ಜವಾಬ್ದಾರಿ!

ಬಿಗ್‌ಬಾಸ್ ಗೆದ್ದ ಚೆಂದನ್ ಹೆಗಲ ಮೇಲೆ ಬಿತ್ತು ಹೊಸ ಜವಾಬ್ದಾರಿ!

 

 

ಸದ್ಯ ಬಿಗ್ ಬಾಸ್ ವಿಜೇತ ಶೆಟ್ಟಿ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ, ಒಂದು ಕಡೆ ಬಿಗ್ ಬಾಸ್ ಷೋ ಗೆದ್ದಿರುವ ಖುಷಿಯಲ್ಲಿದ್ದಾರೆ ಮತ್ತೊಂದು ತಮ್ಮ ಟಕೀಲ ಹಾಡು ಮಾಡಿರುವ ಸಾಧನೆ ಕಂಡು ಸಂತಸವಾಗಿದ್ದಾರೆ. ಒಂದು ಕಾಲದಲ್ಲಿ ಅವಕಾಶಗಳಿಗಾಗಿ ಆತೊರೆಯುತ್ತಿದ್ದ ಹುಡುಗನ ಕಾಲ ಬಳಿಗೆ ಇಂದು ಆಫರ್ ಗಳು ಬಂದು ಬೀಳುತ್ತಿವೆ. ಎಷ್ಟರ ಮಟ್ಟಿಗೆ ಎಂದರೆ ಎರಡು ಮೂರು ದಿನಗಳಲ್ಲೇ ಸುಮಾರು ಹತ್ತು ಕೋಟಿ ಆಫರ್ ಬರುವಷ್ಟು. ಇದನ್ನ ನಾವ್ ಹೇಳ್ತಿಲ್ಲ ಸ್ವತಃ ಚಂದನ್ ಶೆಟ್ಟಿಯವರೇ ಖಾಸಗಿ ಚಾನೆಲ್ ನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

 

 

ಹೀಗಿರುವಾಗ ಬಿಗ್ ಬಾಸ್ ಮನೆಯಿಂದ ಬಂದ ಕೂಡಲೇ ಚಂದನ್ ಶೆಟ್ಟಿಯವರ ಹೆಗಲ ಮೇಲೆ ಹೊಸದೊಂದು ಜವಾಬ್ದಾರಿ ಬಿದ್ದಿದೆ. ಚಂದನ್ ಶೆಟ್ಟಿಯವರು ಕಲರ್ಸ್ ಕನ್ನಡ ಚಾನೆಲ್ ನ ಮತ್ತೊಂದು ರಿಯಾಲಿಟಿ ಶೋವೊಂದರಲ್ಲಿ ಪಾಲ್ಗೊಳ್ಳಿದ್ದಾರಂತೆ. ಆದರೆ ಈ ಭಾರಿ ಸ್ಪರ್ಧಿಯಾಗಿ ಅಲ್ಲ ಬದಲಾಗಿ ತೀರ್ಪುಗಾರರಾಗಿ. ಕಲರ್ಸ್ ವಾಹಿನಿಯಲ್ಲಿ ಶುರು ಆಗಲಿರುವ ‘ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮಕ್ಕೆ ಚಂದನ್ ಶೆಟ್ಟಿ ತೀರ್ಪುಗಾರರಾಗುತ್ತಾರೆ.

 

 

ಈ ವಿಚಾರವನ್ನು ಕಾರ್ಯಕ್ರಮದ ನಿರೂಪಕನಾಗಿರುವ ಅಕುಲ್ ಬಾಲಾಜಿಯವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಅಲ್ಲಿಗೆ ಡ್ಯಾನ್ಸ್ ಫರ್ಫಾರ್ಮೆನ್ಸ್ ಗಳನ್ನ ಜಡ್ಜ್ ಮಾಡುವ ದೊಡ್ಡ ಜವಾಬ್ದಾರಿ ಚಂದನ್ ಹೆಗಲ ಮೇಲೆ ಬಿದ್ದಿದೆ. ‘ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮಕ್ಕೆ ‘ನಾಟ್ಯ’ ಮಯೂರಿ ಹಾಗೂ ನಟಿ ಶ್ರುತಿ ಹರಿಹರನ್ ತೀರ್ಪುಗಾರರಾಗಿ ಆಯ್ಕೆಯಾಗಿದ್ದು ಎರಡನೇ ಆವೃತ್ತಿಯ ಬಿಗ್ ಬಾಸ್ ಟ್ರೋಫಿಯನ್ನು ಗೆದ್ದುಕೊಂಡಿದ್ದ ಅಕುಲ್ ಬಾಲಾಜಿ ನಿರೂಪಣೆ ಮಾಡುತ್ತಿದ್ದಾರೆ. ಅಲ್ಲಿಗೆ ಇನ್ನು ಮುಂದೆ ಅಲ್ಲಿಗೆ ಇಬ್ಬರು ಬಿಗ್ ಬಾಸ್ ವಿಜೇತ ಅಭ್ಯರ್ಥಿಗಳನ್ನು ಒಂದೇ ಕಾರ್ಯಕ್ರಮದಲ್ಲಿ ನೋಡಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top