fbpx
ಮನೋರಂಜನೆ

ಕಿಚ್ಚನ ಮಡದಿ ಮತ್ತು ಪುತ್ರಿಗೆ ಯಾವ ಬಿಗ್ ಬಾಸ್ ಸ್ಪರ್ಧಿ ಅಂದ್ರೆ ಇಷ್ಟ ಗೊತ್ತಾ?

ಕಿಚ್ಚನ ಮಡದಿ ಮತ್ತು ಪುತ್ರಿಗೆ ಯಾವ ಬಿಗ್ ಬಾಸ್ ಸ್ಪರ್ಧಿ ಅಂದ್ರೆ ಇಷ್ಟ ಗೊತ್ತಾ?

 

 

ಕನ್ನಡದ ಅತಿದೊಡ್ಡ ರಿಯಾಲಿಟಿ ಷೋ ಎಂದೆನಿಸಿಕೊಂಡಿರುವ ಬಿಗ್’ಬಾಸ್ ಕಾರ್ಯಕ್ರಮ ತನ್ನದೇ ಆದ ಅತಿದೊಡ್ಡ ವೀಕ್ಷಕ ವರ್ಗವನ್ನು ಹೊಂದಿದೆ, ಸದ್ಯ ಕಳೆದ ಐದು ಸೀಸನ್ ಗಳಿಂದಲೂ ಈ ಷೋ ಕರ್ನಾಟಕದ ಮನೆ ಮಾತಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ. ವಿಶೇಷ ಎಂದರೆ ಕಾರ್ಯಕ್ರಮದ ನಿರೂಪಕರಾಗಿರುವ ಕಿಚ್ಚ ಸುದೀಪ್ ಅವರ ಮನೆಯಲ್ಲೂ ಕೂಡ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅಭಿಮಾನಿಗಳು ಜೋರಾಗಿಯೇ ಇದ್ದಾರೆ.

 

 

ಸದ್ಯ ಮುಕ್ತಾಯವಾಗಿರುವ ಸೀಸನ್ 5 ಬಿಗ್ ಬಾಸ್ ಕಾರ್ಯಕ್ರವನ್ನು ಸುದೀಪ್ ಕುಟುಂಬದವರು ಕೂಡ ತಪ್ಪದೆ ವೀಕ್ಷಿಸುತ್ತಿದ್ದರು.. ಈ ಬಾರಿ ಸಾಮಾನ್ಯ ವ್ಯಕ್ತಿ ಕೋಟಾದಲ್ಲಿ ಭಾಗವಹಿಸಿದ್ದ ಮೈಸೂರಿನ ಕಂಗ್ಲಿಷ್ ರಾಣಿ ನಿವೇದಿತಾ ಗೌಡ ಅಂದರೆ ಕಿಚ್ಚ ಸುದೀಪ್ ಪತ್ನಿ ಪ್ರಿಯ ಮತ್ತು ಪುತ್ರಿಯಾದ ಸಾನ್ವಿಗೆ ಫೆವರೇಟ್ ಆಗಿದ್ದರಂತೆ.

ತನ್ನ ಇಂಗ್ಲಿಷ್ ಮಿಶ್ರಿತ ಕನ್ನಡ ಭಾಷೆಯನ್ನೂ ಮಾತನಾಡುವ ಶೈಲಿ ಮತ್ತು ತನ್ನ ನುಲಿತಗಳಿಂದಲೇ ವೀಕ್ಷರನ್ನು ತನ್ನತ್ತ ಸೆಳೆದುಕೊಂಡಿದ್ದ ನಿವೇದಿತಾ ಘಟಾನುಘಟಿಗಳನ್ನೇ ಹಿಂದಿಕ್ಕಿ 105 ದಿನಗಳ ಕಾಲ ಬಿಗ್‌ ಬಾಸ್‌ ಮನೆಯಲ್ಲೇ ಇದ್ದ ನಿವೇದಿತಾ ಫಿನಾಲೆವರೆಗೂ ಬಂದು 4ನೇ ಸ್ಥಾನ ಪಡೆದುಕೊಂಡಿದ್ದರು..ಫಿನಾಲೆಯಲ್ಲಿ ನಿವೇದಿತಾ ಗೆಲ್ಲಬೇಕು ಎಂದು ಸುದೀಪ್ ಮಡದಿ ಮತ್ತು ಮಗಳು ಅಂದುಕೊಂಡಿದ್ದರಂತೆ ಆದರೆ ನಾಲ್ಕನೇ ಸ್ಥಾನಕ್ಕೆ ಮನೆಯಿಂದ ಹೊರಬಂದಾಗ ತುಂಬಾ ಬೇಸರವಾಗಿತ್ತಂತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top