fbpx
ಭವಿಷ್ಯ

ಫೆಬ್ರವರಿ 04 : ನಾಳೆ ಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ೦೪ ಫೆಬ್ರವರಿ ೨೦೧೮
ಸೂರ್ಯೋದಯ : ೦೬:೪೮
ಸೂರ್ಯಾಸ್ತ : ೧೮:೧೮
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾಘ
ಪಕ್ಷ : ಕೃಷ್ಣ ಪಕ್ಷ
ತಿಥಿ : ಚೌತಿ – ೦೮:೫೭ ವರೆಗೆ
ನಕ್ಷತ್ರ : ಉತ್ತರ ಫಾಲ್ಗುಣಿ – ೧೦:೨೮ ವರೆಗೆ
ಯೋಗ : ಸುಕರ್ಮ – ೧೩:೫೮ ವರೆಗೆ
ಪ್ರಥಮ ಕರಣ : ಬಾಲವ
ಸೂರ್ಯ ರಾಶಿ : ಮಕರ
ಅಭಿಜಿತ್ ಮುಹುರ್ತ : ೧೨:೧೦ – ೧೨:೫೬
ದುರ್ಮುಹೂರ್ತ : ೧೬:೪೬ – ೧೭:೩೨
ಅಮೃತಕಾಲ : ೨೮:೨೦+ – ೨೯:೫೫+

ರಾಹು ಕಾಲ: ೧೬:೫೨ – ೧೮:೧೮
ಗುಳಿಕ ಕಾಲ: ೧೫:೨೫ – ೧೬:೫೨
ಯಮಗಂಡ: ೧೨:೩೩ – ೧೩:೫೯

 

ಮೇಷ (Mesha)

ಸದಾ ಪರರ ಹಿತವನ್ನು ಬಯಸುವ ನೀವು ಇಂದು ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಪರರನ್ನು ಅವಲಂಬಿಸಬೇಕಾಗುವುದು. ಮನೆ ಸದಸ್ಯರನ್ನು ಪ್ರೀತಿ ವಿಶ್ವಾಸದಿಂದ ಗೆದ್ದಲ್ಲಿ ಜಗತ್ತನ್ನೇ ಗೆದ್ದ ಅನುಭವವಾಗುವುದು.

 

 

ವೃಷಭ (Vrushabha)

ಕೌಟುಂಬಿಕ ಜೀವನದಲ್ಲಿ ಮನಸ್ತಾಪಗಳು ಕಂಡುಬಂದರೂ ಅದು ಕೇವಲ ಕ್ಷಣಿಕ. ಪುನಃ ಪತಿ-ಪತ್ನಿಯರು ಒಮ್ಮತದಿಂದ ಈ ದಿನವನ್ನು ಕಳೆಯುವಿರಿ. ಇದಕ್ಕೆ ಮಕ್ಕಳ ಸಲಹೆಯೂ ಪೂರಕವಾಗಿರುವುದು.

 

ಮಿಥುನ (Mithuna)

ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಗುರುವಿನ ಶುಭ ಸಂಚಾರದಿಂದಾಗಿ ಹಣವನ್ನು ಇಂದು ಉಳಿತಾಯ ಮಾಡಬಲ್ಲಿರಿ. ಬ್ಯಾಂಕಿನ ವ್ಯವಹಾರಗಳನ್ನು ಇಂದು ಪೂರೈಸಿಕೊಳ್ಳುವುದು ಉತ್ತಮ.

 

ಕರ್ಕ (Karka)

ಅಧಿಕ ತಿರುಗಾಟದಿಂದ ದೇಹಾಲಸ್ಯ, ಅಕಾಲ ಭೋಜನ, ಸಂಗಾತಿಯ ಮುನಿಸು, ಕಾರ್ಯಕ್ಷೇತ್ರದಲ್ಲಿ ಕೆಲಸಗಾರರ ಅಸಹಕಾರ, ಗುರುವಿನ ಸ್ಮರಣೆ ನಿರಂತರ ಮಾಡಿರಿ. ಬರಬೇಕಾಗಿದ್ದ ಹಣವು ಇಂದು ನಿಮ್ಮ ಕೈಸೇರುವುದು.

 

ಸಿಂಹ (Simha)

ಬಂಧುಗಳೊಡನೆ ವಿನಾಕಾರಣ ಮನಸ್ತಾಪ ಮಾಡಿಕೊಳ್ಳುವಿರಿ. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವಿರಿ. ವ್ಯಾಪಾರ, ವ್ಯವಹಾರದಲ್ಲಿ ನಷ್ಟ ತೋರುವ ಸಾಧ್ಯತೆಯಿದ್ದು ಬಹು ಚಾಣಾಕ್ಷತನದಿಂದ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಕೌಟುಂಬಿಕವಾಗಿ ನೆಮ್ಮದಿಯ ದಿನ.

 

ಕನ್ಯಾರಾಶಿ (Kanya)

ಪಾಲುದಾರಿಕೆಯ ವ್ಯವಹಾರದಲ್ಲಿನ ಮಹತ್ವದ ಪತ್ರಕ್ಕೆ ಸಹಿ ಹಾಕುವಿರಿ. ಬಂಧುವರ್ಗದವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿಕೊಳ್ಳುವಿರಿ. ನಿಂತು ಹೋಗಿರುವ ಕೆಲಸದ ಬಗ್ಗೆ ಚಿಂತೆ ಬೇಡ. ಆರ್ಥಿಕ ಸಂಕಷ್ಟದಿಂದ ಪಾರಾಗುವಿರಿ.

 

ತುಲಾ (Tula)

ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಲಾಭ ಹೊಂದುವಿರಿ. ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ. ಕೋರ್ಟು ಕಚೇರಿ ಕೆಲಸಗಳು ನಿಮ್ಮಂತೆ ಆಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

 

ವೃಶ್ಚಿಕ (Vrushchika)

ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ದೊರೆಯುವುದು. ಬಂಡವಾಳ ಹೂಡಿದ್ದ ವ್ಯಾಪಾರ ಲಾಭ ತರಲಿದೆ. ಬರಬೇಕಾಗಿದ್ದ ಹಣ ಕೈಸೇರುವುದು. ಆದಾಯದ ಮೂಲ ಹೆಚ್ಚಾಗಿದ್ದರೂ ಮಿತಿ ಮೀರುವ ಖರ್ಚು ತಪ್ಪಿದ್ದಲ್ಲ. ನೂತನ ಕಾರ್ಯಭಾರ ವಹಿಸಿಕೊಳ್ಳುವಿರಿ.

 

ಧನು ರಾಶಿ (Dhanu)

ಈ ದಿನ ಅನಿರೀಕ್ಷಿತವಾಗಿ ಕೆಳಿಬರಲಿರುವ ಸುದ್ದಿ ನಿಮಗೆ ಆನಂದವನ್ನು ಉಂಟುಮಾಡುವುದು. ಹಠದಿಂದ ಹಿಡಿದ ಕಾರ್ಯ ಸಾಧಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಾಣಲಿದೆ.

 

ಮಕರ (Makara)

ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ಯಶಸ್ಸು ಹೊಂದುವಿರಿ. ಅಧ್ಯಯನದಲ್ಲಿ ಆಸಕ್ತಿ ಮೂಡಲಿದೆ. ಮಗಳಿಗೆ ಕಂಕಣಭಾಗ್ಯ ಕೂಡಿ ಬರುವುದು. ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ದೊರೆಯಲಿದೆ. ಕಟ್ಟಡ ಕೆಲಸ ಪೂರ್ಣಗೊಳ್ಳುವುದು. ಪ್ರೀತಿ ಪಾತ್ರರೊಂದಿಗೆ ವಿಷಯಗಳನ್ನು ಹಂಚಿಕೊಳ್ಳುವಿರಿ.

 

ಕುಂಭರಾಶಿ (Kumbha)

ಮನೆಯಲ್ಲಿನ ಕೆಲಸದ ಒತ್ತಡದಿಂದ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಸಂಭವ. ಸೂಕ್ತ ವೈದ್ಯರಿಂದ ತಪಾಸಣೆ ಮಾಡಿಸಿ. ನವಗ್ರಹ ಆರಾಧನೆಯಿಂದ ಒಳಿತಾಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ತೋರುವುದು. ಹಣಕಾಸಿನ ವಿಷಯದಲ್ಲಿ ಸ್ನೇಹಿತರು ಸಹಾಯ ಮಾಡುವರು.

 

ಮೀನರಾಶಿ (Meena)

ಈ ದಿನ ಉಪಕಾರ ಮಾಡುವ ಮೂಲಕ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಆನಗತ್ಯ ತಿರುಗಾಟಕ್ಕೆ ಕಡಿವಾಣ ಹಾಕುವುದು ಒಳಿತು. ಕೈಗೆ ಬಂದ ಆಸ್ತಿ ತಪ್ಪಿಹೋಗದಂತೆ ನೋಡಿಕೊಳ್ಳಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top