fbpx
ಸಿನಿಮಾ

ಚಂದನ್ ಶೆಟ್ಟಿ, ಟೀಮ್ ಆಲ್ ಓಕೆ ಮಧ್ಯೆ ಆಗ್ತಿರೋ ಟ್ರೊಲ್ಸ್ ನೋಡುದ್ರೆ ಬಿದ್ದು ಬಿದ್ದು ನಗ್ತೀರಾ

 

 

ಸೋಷಿಯಲ್ ಮೀಡಿಯಾಗಳಲ್ಲಿ ‘ನನಗನಿಸಿದ್ದು’ ಎಂಬ ರ್ಯಾಪ್ ಸಾಂಗ್ ಒಂದು ಜೋರಾಗಿ ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿರುವ ಸಾಲುಗಳ ಸಾಹಿತ್ಯ ನೇರವಾಗಿ ಚಂದನ್ ಶೆಟ್ಟಿಯವರ ವ್ಯಕ್ತಿತ್ವಕ್ಕೆ ಅನ್ವಯಿಸುತ್ತಿದ್ದು ಅವರಿಗೆ ಟಾಂಗ್ ಕೊಡಲೆಂದೇ ಈ ಹಾಡನ್ನು ಮಾಡಲಾಗಿದೆ ಎಂದು ಚಂದನ್ ಬೆಂಬಲಿತ ಟ್ರಾಲ್ ಪೇಜ್’ಗಳು ಈ ಹಾಡನ್ನು ಮಾಡಿರುವ ‘ಆಲ್ ಓಕೆ’ ತಂಡದ ರ್ಯಾಪ್ ಸಿಂಗರ್ ಆದ ರಾಹುಲ್ ಅನ್ನು ಯದ್ವಾ ತದ್ವ ಟ್ರೊಲ್ ಮಾಡುತ್ತಿದ್ದಾರೆ.

 

 

 

ಈ ಹಾಡಿನ ಸಾಹಿತ್ಯದಲ್ಲಿ ಪ್ರತಿ ಹಂತದಲ್ಲೂ ಚಂದನ್’ಗೆ ಅನ್ವಯಯಾಗುವಂತೆ ಬರೆಲಾಗಿದೆ ಎಂಬುದು ಚಂದನ್ ಶೆಟ್ಟಿಯವರ ಅಭಿಮಾನಿಗಳ ನೇರ ಆರೋಪವಾಗಿದೆ. “ರ್ಯಾಪ್ ಮಾಡಕ್ಕೆ ಬರೋರೆಲ್ಲಾ ರ್ಯಾಪರ್ ಆಗೋದಿಲ್ಲ,ರ್ಯಾಪ್ ಬಗ್ಗೆ ತಲೆಬುಡ ಗೊತ್ತಿಲ್ಲದಿದ್ದರೂ ಬಾಯಿಗೆ ಬಂದಂಗೆ ಏನೇನೋ ಹೇಳೋದೆಲ್ಲಾ ರ್ಯಾಪ್,, ರ್ಯಾಪರ್ ಅಂತ ಶೋಕಿ ಮಾಡೋರು ಬರಿ ನೇಮು, ಫೇಮು ಸ್ಟಾರ್ ಗಿರಿಗಾಗಿ ಗಿಮಿಕ್ಸ್ ಮಾಡ್ತಿದ್ದಾರೆ , ನಿಜವಾದ ಪ್ರತಿಭೆಗಳಿಗೆ ಒಳ್ಳೆಯ ಪ್ರೋತ್ಸಾಹ ಸಿಗುತ್ತಿಲ್ಲ. ಕಷ್ಟ ಪಡೋರು ಇಲ್ಲೆಯೇ ಇರ್ತರೆ ಆದರೆ ಪುಕ್ಕಟೆ ಕ್ರೆಡಿಟ್ ತಗೋಳೋದೆ ಈಗ ಟ್ರೆಂಡ್ ಆಗಿದೆ” ಎನ್ನುವುದು ಈ ಹಾಡಿನಲ್ಲಿರುವ ಕೆಲವು ಸಾಲುಗಳು. ಅಲ್ಲದೆ ಹಾಡಿನ ಕೊನೆಯಲ್ಲಿ ಗೋಡೆಯ ಮೇಲೆ CRAP ಎಂಬ ಬರೆದಿದ್ದು ಆ ಪದದಿಂದ ‘C’ ಅಕ್ಷರವನ್ನು ಒಡೆದು ಹಾಕುತ್ತಾರೆ. ಇಲ್ಲಿ ‘C’ ಎನ್ನುವುದು ಚಂದನ್ ಶೆಟ್ಟಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದೆ ಎಂದು ಅನಿಸುವುದಂತೂ ನಿಜ.

ಆ ಹಾಡನ್ನು ಒಮ್ಮೆ ನೋಡಿ ಬಿಡಿ.

 

ಹಾಡಿನ ಸಾಹಿತ್ಯದಿಂದ ಕೋಪಗೊಂಡ ಚಂದನ್ ಅಭಿಮಾನಿಗಳು ಫೇಸ್ಬುಕ್ ನಲ್ಲಿ ವಿವಾದವನ್ನು ಹುಟ್ಟುಹಾಕುತ್ತಿದ್ದುದನ್ನು ಗಮನಿಸಿದ ಆಲ್ ಓಕೆ ತಂಡದ ಮುಖ್ಯಸ್ಥ ಓಕೆ ತಂಡ ಫೇಸ್‌ಬುಕ್‌ ಲೈವ್ ಬಂದು ಸ್ಪಷ್ಟನೆ ಕೊಟ್ಟಿದ್ದಾರೆ .

 

 

ಚಂದನ್ ಶೆಟ್ಟಿ ಯವರನ್ನು ಮೊದಲ ಬಾರಿಗೆ ನೋಡುತ್ತಿಲ್ಲ ಬದಲಾಗಿ ಹಲವಾರು ಬಾರಿ ಭೇಟಿಯಾಗಿದ್ದೇವೆ ಅವರು ಬಿಗ್ ಬಾಸ್ ಗೆದ್ದಾಗಲೂ ಸಹ ನನ್ನ ವಾಲ್ ಮೇಲೆ ಅವರಿಗೆ ಶುಭಾಶಯ ಹೇಳಿ ಸ್ಟೇಟಸ್ ಒಂದನ್ನು ಹಾಕಿದ್ದೇನೆ .

ಭಾರತದಲ್ಲಿ ಅನೇಕ ಜನ ಫೇಕ್ ರ್ಯಾಪರ್ ಇದ್ದಾರೆ ,ತಲೆ ಬುಡ ಗೊತ್ತಿಲ್ಲದೇ ರಾಪ್ ಮಾಡುತ್ತಾರೆ ನಾವು ಅವರಿಗೆ ಇಂಡೈರೆಕ್ಟ್ ಆಗಿ ಹೇಳುವ ಪ್ರಯತ್ನ ಮಾಡಿದ್ದೇವೆ ಬದಲಾಗಿ ನೀವು ಚಂದನ್ ಶೆಟ್ಟಿ ಗೆ ಹೇಳಿದ್ದು ಅಂತ ಯಾಕೆ ಅಂದುಕೊಳ್ಳುತ್ತೀರಾ ?

ನಾವು ಒಳ್ಳೆ ಸ್ನೇಹಿತರು ಅಂತ ಸ್ಪಷ್ಟನೆ ಕೊಟ್ಟಿದ್ದಾರೆ , ಆದರೂ ಹಾಡು ಬಿಡುಗಡೆಯಾದ ದಿನದಿಂದ ಟ್ರೊಲ್ ಪೇಜ್ ಗಳು ಟ್ರೊಲ್ ಮಾಡೋದು ನಿಲ್ಸಿಲ್ಲ

 

 

 

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top