fbpx
ಹೆಚ್ಚಿನ

ಅಯೋಧ್ಯ ರಾಮ ಮಂದಿರ ನಿರ್ಮಾಣ ವಿರೋಧಿಸುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ: ವಸೀಂ ರಿಜ್ವಿ

ಅಯೋಧ್ಯ ರಾಮ ಮಂದಿರ ನಿರ್ಮಾಣ ವಿರೋಧಿಸುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ: ವಸೀಂ ರಿಜ್ವಿ

ಸದಾ ಒಂದಿಲ್ಲ ಒಂದು ವಿವಾದಿತ ಹೇಳಿಕೆ ನೀಡಿ ಮಾಧ್ಯಮದಲ್ಲಿ ಸುದ್ದಿಯಲ್ಲಿರುವ ಉತ್ತರಪ್ರದೇಶ ಶಿಯಾ ವಕ್ಫ್‌ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ಈಗ ಮತ್ತೊಮ್ಮೆ ವಿವಾಧಿತ ಹೇಳಿಕೆ ನೀಡಿ ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 

 

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿರೋಧಿಸುವಂತಹ ಮುಸ್ಲಿಮರು ಪಾಕಿಸ್ತಾನ ಅಥವಾ ಬಾಂಗ್ಲಾ ದೇಶಕ್ಕೆ ಹೋಗಬೇಕು ಎಂದು ಉತ್ತರಪ್ರದೇಶ ರಾಜ್ಯದ ಶಿಯಾ ವಕ್ಫ್‌ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ಹೇಳಿಕೆ ನೀಡಿದ್ದಾರೆ.

 

 

ಅಯೋಧ್ಯೆಗೆ ಭೇಟಿ ನೀಡಿ, ನಂತರ ರಾಮ ಜನ್ಮಭೂಮಿಯ ಮುಖ್ಯ ಅರ್ಚಕರಾಗಿರುವ ಆಚಾರ್ಯ ಸತ್ಯೇಂದ್ರ ದಾಸ್ ಅವರ ಭೇಟಿ ಮಾಡಿದರು ನಂತರ ಮಾಧ್ಯಮದ ಸುದ್ದಿ ಘೋಷ್ಠಿಯಲ್ಲಿ ಮಾತನಾಡಿದ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿರೋಧಿಸುವಂತಹ ಮುಸ್ಲಿಮರು ಪಾಕಿಸ್ತಾನ ಅಥವಾ ಬಾಂಗ್ಲಾ ದೇಶಕ್ಕೆ ಹೋಗಬೇಕು ಎಂಬ ಹೇಳಿಕೆ ನೀಡಿದರು. ಮಸೀದಿಯ ಹೆಸರಲ್ಲಿ ಜಿಹಾದ್‌ ವನ್ನು ಹರಡುತ್ತಿರುವವರು ಸಿರಿಯಾದ ಐಸಿಸ್‌ ಮುಖಂಡ ಅಬು ಬಕರ್ ಬಾಗ್ಧಾದಿಯ ಪಡೆಯನ್ನು ಸೇರಿಕೊಳ್ಳಬೇಕೆಂದು ಎಂದು ವಸೀಂ ರಿಜ್ವಿ ಹೇಳಿದರು.

 

 

ಈ ಹೇಳಿಕೆ ಖಂಡಿಸಿ ಹಲವೆಡೆ ವಿರೋಧ ವ್ಯಕ್ತವಾಗಿದೆ. ವಸೀಂ ರಿಜ್ವಿ ವಿರುದ್ಧ ಸಿಐಡಿಗಳು ದೋಷಾರೋಪ ಪಟ್ಟಿ ಸಲ್ಲಿಸಿವೆ, ಇವರನ್ನು ಕೂಡಲೇ ಬಂಧಿಸಿ ಎಂದು ಶಿಯಾ ಉಲೇಮ ಮಂಡಿಲಿ ಮೌಲಾನಾ ಇಫ್ತಿಕಾರ್ ಹುಸೇನ್ ಇನ್‌ಕ್ವಿಲಾಬಿ ಹೇಳಿಕೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top