fbpx
ಸಿನಿಮಾ

ಅಮಿರ್ ಖಾನ್ ಕೈಯಲ್ಲಿ ಸ್ಯಾನಿಟರಿ ಪ್ಯಾಡ್ ಯಾಕೆ ಹಿಡಿದಿದ್ದಾರೆ ಗೊತ್ತ

ಅಮಿರ್ ಖಾನ್ ಕೈಯಲ್ಲಿ ಸ್ಯಾನಿಟರಿ ಪ್ಯಾಡ್ ಯಾಕೆ ಹಿಡಿದಿದ್ದಾರೆ ಗೊತ್ತ

 

ಕೆಲವು ವರ್ಷದ ಹಿಂದೆ ಎಎಲ್‌ಎಸ್ ಎಂಬ ರೋಗದ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಐಸ್ ಬಕೆಟ್ ಚಾಲೆಂಜ್ ಎಂಬ ವಿನೂತನ ಆಂದೋಲನ ವಿಶ್ವದಾದ್ಯಂತ ಪ್ರಸಿದ್ದಿ ಪಡೆದಿತ್ತು. ಈಗ ಮಹಿಳೆಯರ ಸ್ಯಾನಿಟರಿ ನ್ಯಾಪ್‌ಕೀನ್ ಉಪಯೋಗದ ಕುರಿತು ಅರಿವು ಮೂಡಿಸುವ ಸಲುವಾಗಿ ಪ್ಯಾಡ್ ಮನ್ ಚಾಲೆಂಜ್ ಎಂಬ ವಿನೂತನ ಚಾಲೆಂಜ್ ಒಂದನ್ನು ನಟ ಅಕ್ಷಯ್ ಕುಮಾರ್ ಹಾಗು ಅವರ ಪತ್ನಿ ಟ್ವಿಂಕಲ್ ಖನ್ನಾ ಅವರು ಪ್ರಾರಂಭ ಮಾಡಿದ್ದಾರೆ.

 

 

ಬಾಲಿವುಡ್‌ನ ನಟ ಅಮಿರ್ ಖಾನ್‌, ಅಕ್ಷಯ್‌ ಕುಮಾರ್‌, ನಟಿ ಅಲಿಯಾ ಭಟ್‌, ಟ್ವಿಂಕಲ್‌ ಖನ್ನಾ, ಸೋನಂ ಕಪೂರ್‌, ರಾಧಿಕಾ ಆಪ್ಟೆ, ಶಬಾನಾ ಆಜ್ಮಿ ಸೇರಿ ಅನೇಕ ನಟ ನಟಿಯರು ಹಾಗು ಗಣ್ಯರು ಸ್ಯಾನಿಟರಿ ನ್ಯಾಪ್ಕಿನ್‌ ಹಿಡಿದುಕೊಂಡು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

 

 

ಅಮಿರ್ ಖಾನ್ ತಮ್ಮ ಕೈಯಲ್ಲಿ ಸ್ಯಾನಿಟರಿ ಪ್ಯಾಡ್ ಹಿಡಿದ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಮಾಡಿದ್ದಾರೆ… ದೇಶ್ಯಾದ್ಯಂತ ಈ ಚಿತ್ರ ವೈರಲ್ ಆಗಿದೆ. ಸ್ಯಾನಿಟರಿ ಪ್ಯಾಡ್ ಬಳಕೆಯ ಕುರಿತು ಅರಿವು ಮೂಡಿಸುವ ದೃಷ್ಟಿಯಲ್ಲಿ ಪ್ಯಾಡ್ ಮ್ಯಾನ್ ಚಾಲೆಂಜ್ ಅಭಿಯಾನ ಪ್ರಾರಂಭವಾಗಿದೆ. ಅಮಿರ್ ಖಾನ್ ಅವರು ಪ್ಯಾಡ್ ಮ್ಯಾನ್ ಚಾಲೆಂಜ್ ಸ್ವೀಕಾರ ಮಾಡುವತೆ ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಹಾಗು ಸಲ್ಮಾನ್ ಖಾನ್ ಅವರನ್ನು ಟ್ವಿಟರ್ ನಲ್ಲಿ ಟ್ಯಾಗ್ ಮಾಡಿದ್ದಾರೆ. ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಹಾಗು ಸಲ್ಮಾನ್ ಖಾನ್ ಕೂಡ ಪದ ಹಿಡಿದುಕೊಂಡು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top