fbpx
ಮನೋರಂಜನೆ

ಯೋಗರಾಜ್ ಭಟ್ರ ಮುಂದಿನ ಚಿತ್ರದ ನಾಯಕ ನಾಯಕಿಯರು ಇವರೇ ನೋಡಿ!

ಯೋಗರಾಜ್ ಭಟ್ರ ಮುಂದಿನ ಚಿತ್ರದ ನಾಯಕ ನಾಯಕಿಯರು ಇವರೇ ನೋಡಿ!

 

 

ಎಬಡ ತಬಡ ಎಂಬ ವಿಭಿನ್ನ ಸಾಲುಗಳನ್ನು ಗೀಚುವ ನಿರ್ದೇಶಕ ಚಿತ್ರಗಳನ್ನೂ ಕೂಡ ಅಷ್ಟೇ ವಿಭಿನ್ನವಾಗಿ ಮಾಡೋದಕ್ಕೆ ಫೇಮಸ್ಸು ಇಂಥ ಭಟ್ರು ಮುಗುಳುನಗೆ ಚಿತ್ರದ ನಂತರ ಅದೇಕೋ ಸೈಲೆಂಟಾದಂತಿದ್ದಾರಲ್ಲಾ ಅಂತ ಅನೇಕರಿಗೆ ಅನ್ನಿಸಿದ್ದರೆ ಅಚ್ಚರಿಯೇನಿಲ್ಲ. ಆದರೆ ಭಟ್ಟರು ಹೀಗೆ ಸೈಲೆಂಟಾಗಿದ್ದಾರೆಂದರೆ ಯಾವುದೋ ಕಾಮಗಾರಿ ಪ್ರಗತಿಯಲ್ಲಿದೆ ಅಂತಲೇ ಅರ್ಥ. ಅಂದಹಾಗೆ ಭಟ್ಟರ ಸೈಲೆಂಟ್ ಕಾಮಗಾರಿ ಇದೀಗ ಅಂತಿಮ ಹಂತ ತಲುಪಿದೆ. ಅದರ ಭಾಗವಾಗಿ ಅವರ ಹೊಸಾ ಚಿತ್ರ ಸಂಕ್ರಾಂತಿ ಹಬ್ಬದ ಆಸುಪಾಸಲ್ಲೇ ಶುರುವಾಗಲಿದೆ!

 

 

ಯೋಗರಾಜ ಭಟ್ಟರು ಇದುವರೆಗೂ ಸ್ಟಾರ್ ನಟರನೇಕರ ಜೊತೆ ಚಿತ್ರ ಮಾಡಿದ್ದಾರೆ. ಆದರೆ ಈ ಸಲ ಮಾತ್ರ ಅವರು ಮತ್ತೆ ಹೊಸಬರನ್ನು ತಮ್ಮ ಗರಡಿಗೆ ಸೇರಿಸಿಕೊಂಡು ಪಂಚತಂತ್ರ ಎಂಬ ಹೆಸರಿನಲ್ಲಿ ಹೊಸಾ ಥರದ್ದೊಂದು ಚಿತ್ರ ಮಾಡೋ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಹೊಸಾ ಚಿತ್ರದ ಯಾವೊಂದು ಮಾಹಿತಿಯನ್ನೂ ಹೊರ ಹಾಕದ ಭಟ್ಟರು ಚಿತ್ರದ ನಾಯಕ ಮತ್ತು ನಾಯಕಿಯನ್ನು ಈಗಾಗಲೇ ಪಕ್ಕಾ ಮಾಡಿಕೊಂಡಿದ್ದಾರೆ. ಈ ಹಿಂದೆ ಕಾಲ್ ಕೇಜಿ ಪ್ರೀತಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿಹಾಲ್ ಭಟ್ಟರ ಹೊಸಾ ಚಿತ್ರದ ನಾಯಕಿಯಾದರೆ, ಅಕ್ಷರಾ ಗೌಡ ಎಂಬಾಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ ಎನ್ನಲಾಗಿದೆ.

 

 

ಈ ಚಿತ್ರದಲ್ಲಿ ನಾಯಕಿಯದ್ದು ಹಾಟ್ ಮತ್ತು ಬಿಂದಾಸ್ ಪಾತ್ರವಂತೆ. ಅದಕ್ಕಾಗಿ ಕಾಲಾಂತರಗಳಿಂದಲೂ ಶೋಧ ಕಾರ್ಯದಲ್ಲಿ ಮಗ್ನರಾಗಿದ್ದ ಭಟ್ಟರು ಕಡೆಗೂ ಅಕ್ಷರಾಳನ್ನು ಹುಡುಕಿ ಪಕ್ಕಾ ಮಾಡಿಕೊಂಡಿದ್ದಾರೆ. ಬೆಂಗಳೂರು ಹುಡುಗಿಯಾಗಿದ್ದುಕೊಂಡು ಮಾಡೆಲಿಂಗ್ ಲೋಕದಲ್ಲಿ ಸಕ್ರಿಯಳಾಗಿದ್ದ ಅಕ್ಷರಾ ಈ ಚಿತ್ರದ ಮೂಲಕವೇ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾಳೆ. ಅಂತೂ ಭಟ್ಟರು ಈ ಬಾರಿ ಹೊಸಬರ ಜೊತೆ ಸೇರಿಕೊಂಡು ಭರ್ಜರಿಯಾದೊಂದು ಚಿತ್ರ ಕೊಡುವ ತಯಾರಿ ನಡೆಸಿದ್ದಾರೆ. ಭಟ್ಟರು ಹೀಗೆ ಏಕಾಏಕಿ ಹೊಸಬರ ತಂಡ ಕಟ್ಟಿಕೊಂಡಿದ್ದು ಗಾಂಧಿನಗರದ ಮಂದಿಯನ್ನೇ ಅಚ್ಚರಿಗೀಡು ಮಾಡಿರೋದಂತೂ ಸತ್ಯ. ಆದರೆ ಏನೇ ಮಾಡಿದರೂ ಹೊಸತನದೊಂದಿಗೆ ಮಾಡೋ ಭಟ್ಟರ ಈ ಚಿತ್ರದ ಬಗ್ಗೆ ಕನ್ನಡ ಪ್ರೇಕ್ಷಕರಿಗೊಂದು ಕುತೂಹಲ ಇದ್ದೇ ಇದೆ!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top