fbpx
ಮನೋರಂಜನೆ

ಮೋದಿ ವಿರುದ್ಧ ಬೆಂಗಳೂರು ಬಂದ್ ಮಾಡಲು ಬೆಂಬಲ ಸೂಚಿಸಿದ ಬಿಗ್’ಬಾಸ್ ಸೀಸನ್-5 ಸ್ಪರ್ಧಿ.

ಮೋದಿ ವಿರುದ್ಧ ಬೆಂಗಳೂರು ಬಂದ್ ಮಾಡಲು ಬೆಂಬಲ ಸೂಚಿಸಿದ ಬಿಗ್’ಬಾಸ್ ಸೀಸನ್-5 ಸ್ಪರ್ಧಿ.

 

 

ಬಿಜೆಪಿ ಪಕ್ಷದ ಸಮಾರಂಭಕ್ಕಾಗಿ ಬೆಂಗಳೂರಿಗೆ ಇಂದು ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ರಾಜ್ಯಕ್ಕೆ ಮಹದಾಯಿ ವಿಷಯದಲ್ಲಿ ಮಹಾಮೌನ ವಹಿಸಿರುವ ಮೋದಿ ಅವರ ಈ ನಡೆಯನ್ನು ಖಂಡಿಸಿ ಅವರು ಬರುವ ದಿನ ಬಂದ್ ಮಾಡುವುದಾಗಿ ಕೆಲವು ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದವು. ಆದರೆ ನಂತರ ಬಂದ್ ಕೈಬಿಟ್ಟು ಕರಾಳ ದಿನವನ್ನಾಗಿ ಆಚರಣೆ ಮಾಡುವುದಾಗಿ ಹೇಳಿದ್ದವು. ಈಗ ಬಿಗ್ ಬಾಸ್ ಕನ್ನಡ ಸೀಸನ್ 5 ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಸಮೀರ್ ಆಚಾರ್ಯ ಮೋದಿ ಬರುವ ದಿನ ಬೆಂಗಳೂರು ಬಂದ್ ಮಾಡುವುದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿಕೆ ಕೊಟ್ಟಿದ್ದ್ದಾರೆ.

 

 

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮೀರಾಚಾರ್ಯ “ನಾನು ರೈತರ ಕುಟುಂಬದಲ್ಲಿ ಹುಟ್ಟಿಲ್ಲ ಆದರೆ ರೈತರ ಕಷ್ಟಗಳನ್ನು ಹತ್ತಿರದಿಂದ ಕಂಡಿದ್ದೇನೆ. ಉತ್ತರ ಕರ್ನಾಟಕದ ಜನ ನೀರಲ್ಲದೆ ಕಂಗೆಡುತ್ತಿದ್ದಾರೆ. ಕಳೆದ ಮೋದಿ ಅವರು ಬೆಳಗಾವಿಗೆ ಬಂದಿದ್ದಾಗ ಅವರನ್ನು ಭೇಟಿ ಮಾಡಲು ಪೊಲೀಸರು ಅವಕಾಶ ಕೊಟ್ಟಿರಲಿಲ್ಲ.. ಮಹದಾಯಿ ಹೋರಾಟ ಮಾಡಲೆಂದೇ ನಾನು ಬಿಗ್ ಬಾಸ್ ಮನೆಗೆ ಹೋಗಿದ್ದೆ ನಾನು ಬಿಗ್ ಬಾಸ್ ಮನೆಯಲ್ಲಿದ್ದಾಗ ಪದೇ ಪದೇ ಮಹದಾಯಿ ವಿಚಾರವನ್ನು ಪ್ರಸ್ತಾಪಿಸುತ್ತಿದ್ದೆ ಆದರೆ ಚಾನೆಲ್’ನವರು ಅವುಗಳನ್ನು ಪ್ರಸಾರ ಮಾಡಿಲ್ಲ.”

 

 

“ಏನೇ ಆದರೂ ಮಹದಾಯಿ ಹೋರಾಟವನ್ನು ಮಾತ್ರ ನಾನು ಕೈ ಬಿಡುವುದಿಲ್ಲ, ಕರ್ನಾಟಕದ ರೈತರ ಬಗ್ಗೆ ಮಲತಾಯಿ ದೋರಣೆ ಹೊಂದಿರುವ ಕೇಂದ್ರ ಸರ್ಕಾರದ ವಿರುದ್ಧ ಉಗ್ರವಾಗಿ ಹೋರಾಟ ಮಾಡಿಯೇ ತೀರುತ್ತೇನೆ. ಮಯೋದಿ ಬರುವ ದಿನ ಬೆಂಗಳೂರು ಬಂದ್ ಗೆ ಕರೆ ನೀಡಿರೋದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಮಹದಾಯಿ ನೀರು ಪಡೆಯುವವರೆಗೂ ಈ ಹೋರಾಟಕ್ಕೆ ನಾನು ಸಾಥ್ ನೀಡುತ್ತೇನೆ” ಎಂದು ಹೇಳಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top