fbpx
ಸಮಾಚಾರ

ಪ್ರಧಾನಿ ಮೋದಿಗೆ ವಿಶೇಷ ಸ್ವಾಗತ ಕೋರಿದ ಸಿಎಂ ಸಿದ್ದರಾಮಯ್ಯ!

ಪ್ರಧಾನಿ ಮೋದಿಗೆ ವಿಶೇಷ ಸ್ವಾಗತ ಕೋರಿದ ಸಿಎಂ ಸಿದ್ದರಾಮಯ್ಯ!

 

 

ಇಂದು ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾವೇಶ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಸ್ವಾಗತ ಕೋರಿದ್ದಾರೆ.

 

 

“ತಂತ್ರಜ್ಞಾನ, ಹೂಡಿಕೆ, ಸಂಶೋಧನಾ ಕ್ಷೇತ್ರ, ಅಭಿವೃದ್ಧಿ ನೀತಿಗಳಲ್ಲಿ ದೇಶದಲ್ಲೇ ನಂ.1 ರಾಜ್ಯವಾಗಿರುವ ನಮ್ಮ ಕರ್ನಾಟಕಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ರಾಜ್ಯದ ಜನತೆಯ ಪರವಾಗಿ ಸ್ವಾಗತ ಕೋರುತ್ತೇನೆ. ವಿವಿಧ ಕ್ಷೇತ್ರಗಳಲ್ಲಿ ಪ್ರಥಮ ಸ್ಥಾನವನ್ನು ಹೊಂದಿರುವ ಕರ್ನಾಟಕದ ಯಶಸ್ಸು ಭಾರತವನ್ನು ಹೆಮ್ಮೆಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ.” ಎಂದು ಟ್ವೀಟ್’ನಲ್ಲಿ ಹೇಳಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ “ನಮ್ಮ ಬೆಂಗಳೂರಿಗೆ ಇಂದು ಆಗಮಿಸುತ್ತಿರುವ ಪ್ರಧಾನಿ ಅವರೇ ನಿಮಗೆ ಭವ್ಯ ಸ್ವಾಗತ. ಸಂದರ್ಭದಲ್ಲಿ ನೀವು ನಮ್ಮ ರಾಜ್ಯದ ಜನತೆಯ ಮಹದಾಯಿ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡಲು ನಮಗೆ ಸಹಕಾರ ನೀಡಬೇಕೆಂದು ರಾಜ್ಯದ ಜನತೆಯ ಪರವಾಗಿ ಕೇಳಿಕೊಳ್ಳುತ್ತೇನೆ” ಎಂದಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top