fbpx
ಮನೋರಂಜನೆ

ಬೆಂಗಳೂರಿಗೆ ಆಗಮಿಸುವ ಪ್ರಧಾನಿ ಮೋದಿಗೆ ಸಿಗುತ್ತಿರುವ ವಿಶೇಷ ಉಡುಗೊರೆ ಏನು ಗೊತ್ತಾ?

ಬೆಂಗಳೂರಿಗೆ ಆಗಮಿಸುವ ಪ್ರಧಾನಿ ಮೋದಿಗೆ ಸಿಗುತ್ತಿರುವ ವಿಶೇಷ ಉಡುಗೊರೆ ಏನು ಗೊತ್ತಾ?

 

 

ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದ ಅಂಗವಾಗಿ ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಪರಾಹ್ನ 2 ಗಂಟೆಗೆ ಅರಮನೆ ಮೈದಾನದಲ್ಲಿ ಬೃಹತ್ ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮಕ್ಕೆ ಈಗಾಗಲೇ ಬೃಹತ್ ವೇದಿಕೆ ಸಜ್ಜುಗೊಂಡಿದ್ದು ಅರಮನೆ ಮೈದಾನದ ಸುತ್ತಮುತ್ತ ದೇಶದ ಪ್ರಧಾನಿ ಸ್ವಾಗತಕ್ಕೆ ಭರ್ಜರಿಯಾಗಿ ಶೃಂಗಾರ ಮಾಡಲಾಗಿದೆ..

 

 

 

ನರೇಂದ್ರ ಮೋದಿಯವರಿಗೆ ಕರ್ನಾಟಕದ ಜನತೆಯ ಪರವಾಗಿ ಭಾರತೀಯ ಜನತಾ ಪಾರ್ಟಿಯ ಕರ್ನಾಟಕದ ಮುಖಂಡರು ನಿರ್ಧರಿಸಿದ್ದಾರೆ. ಸಮಾರಂಭದಲ್ಲಿ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡುವ ಪ್ರಧಾನಿ ಮೋದಿಯವರನ್ನು ಸನ್ಮಾನಿಸುವ ಬಿಜೆಪಿ ಮುಖಂಡರು ನಾಡಪ್ರಭು ಕೆಂಪೇಗೌಡ ಪ್ರತಿಮೆಯ ಸ್ಮರಣಿಕೆಯನ್ನು ಮೋದಿಗೆ ನೀಡಲು ತೀರ್ಮಾನಿಸಿದ್ದಾರೆ. ಈ ಸ್ಮರಣಿಕೆ ಬಹಳ ವಿಶೇಷವಾಗಿ ತಯಾರಿಸಲಾಗಿದೆ ಎಂದು ಬಿಜೆಪಿಯವರ ಮಾತು.

ಬಿಜೆಪಿ ಬೆಂಗಳೂರು ಮಹಾನಗರ ಜಿಲ್ಲೆ ಅಧ್ಯಕ್ಷ ಪಿ.ಎನ್. ಸದಾಶಿವ ಅವರಿಗೆ ಕೆಂಪೇಗೌಡ ಪ್ರತಿಮೆಯ ಸ್ಮರಣಿಕೆಯ ಜವಾಬ್ದಾರಿಯನ್ನು ವಹಿಸಲಾಗಿದ್ದು ಸದಾಶಿವ ನೇತೃತ್ವದ ತಂಡವು ಮೋದಿಯವರಿಗೆ ಇದನ್ನ ನೀಡಿ ಸನ್ಮಾನ ಮಾಡಿ ಗೌರವಿಸಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top