fbpx
ಬಿಗ್ ಬಾಸ್

“ಬಿಗ್ ಬಾಸ್ ಸ್ಕ್ರಿಪ್ಟೆಡ್ ಅಲ್ಲ ಅದು ಫುಲ್ಲಿ ಎಡಿಟೆಡ್” ಷೋ ಬಗ್ಗೆ ಜೆಕೆ ಅಸಮಾಧಾನ!

“ಬಿಗ್ ಬಾಸ್ ಸ್ಕ್ರಿಪ್ಟೆಡ್ ಅಲ್ಲ ಅದು ಫುಲ್ಲಿ ಎಡಿಟೆಡ್” ಷೋ ಬಗ್ಗೆ ಜೆಕೆ ಅಸಮಾಧಾನ!

 

 

ಕಡೇವರೆಗೂ ಗೆಲ್ಲುವ ನಿರೀಕ್ಷೆ ಹೊಮ್ಮಿಸಿ ಮೂರನೇ ಸ್ಥಾನದೊಂದಿಗೆ ಹೊರ ಬಿದ್ದ ಜಯಕಾರ್ತಿಕ್ ಈಗ ಯಾವ ಮನಸ್ಥಿತಿ ಹೊಂದಿದ್ದಾರೆ. ಹೊರ ಬಂದ ಮೇಲೆ ಜನರ ಪ್ರತಿಕ್ರಿಯೆ ಹೇಗಿದೆ? ತಮ್ಮನ್ನು ಬಿಗ್‌ಬಾಸ್ ಮಂದಿ ಹೊರ ಜಗತ್ತಿಗೆ ತೋರಿಸಿದ ರೀತಿಯ ಬಗ್ಗೆ ಅವರು ಏನಂತಾರೆ? ಬಿಗ್‌ಬಾಸ್ ಮನೆಯೊಳಗೆ ಎಲ್ಲವನ್ನೂ ಒಂದು ನಗುವಿನ ಮೂಲಕವೇ ಎದುರುಗೊಳ್ಳುತ್ತಿದ್ದ ಜೆಕೆ ಈಗಲೂ ಅದೇ ಮನಸ್ಥಿತಿ ಹೊಂದಿದ್ದಾರಾ? ಇಂಥಾ ಅನೇಕಾನೇಕ ಪ್ರಶ್ನೆಗಳು ಜೆಕೆಯನ್ನು ಮೆಚ್ಚಿಕೊಳ್ಳೋ ಜನರನ್ನು ಕಾಡುತ್ತಲೇ ಇವೆ. ಇದೆಲ್ಲವನ್ನು ಪರಿಗಣಿಸುತ್ತಲೇ ಹುಡುಕಾಡಿದರೆ ಎದುರುಗೊಳ್ಳೋದು ಪಕ್ಕಾ ಡಿಸ್ಟರ್ಬ್ ಮೂಡಿನಲ್ಲಿರೋ ಜೆಕೆ!

ದಿನದ 24 ಗಂಟೆಯಲ್ಲಿ ನಡೆದಿದ್ದರಲ್ಲಿ ನಾನು ಮತ್ತು ಶ್ರುತಿ ಕ್ಲೋಸ್‌ ಆಗಿದ್ದ ದೃಶ್ಯಗಳನ್ನಷ್ಟೇ ಹೆಚ್ಚಾಗಿ ತೋರಿಸಿದ್ದಾರೆ. ಇದರಿಂದ ನಮ್ಮಿಬ್ಬರಿಗೂ ಬಹಳ ತೊಂದರೆಯಾಗಿದೆ. ಬಿಗ್‌ಬಾಸ್‌ ಒಂದು ಸ್ಕ್ರಿಪ್ಟೆಡ್‌ ಷೋ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅದು ಸ್ಕ್ರಿಪ್ಟೆಡ್‌ ಅಲ್ಲ, ಫುಲ್ಲಿ ಎಡಿಟೆಡ್‌ ಎಂದು ನಾನು ಹೇಳುತ್ತೇನೆ. ತಮಗೆ ಏನು ಬೇಕೋ ಅದನ್ನು ಮಾತ್ರ ನೀಟಾಗಿ ಎಡಿಟ್ ಮಾಡಿಕೊಂಡಿದ್ದಾರೆ. ನನ್ನ ವಿಚಾರದಲ್ಲಿ ನಾನು ಯಾವಾಗಲು ಬೆಡ್ ರೂಮ್ ನಲ್ಲಿ ಮಲಗಿದ್ದ ದೃಶ್ಯಗಳನ್ನೇ ತೋರಿಸಿ ಜನರಲ್ಲಿ ಜೇಕೆ ಸೋಮಾರಿ ಎಂಬ ಭಾವನೆ ಬಿತ್ತಿಸಿದ್ದಾರೆ.” ಎಂದು ಜೇಕೆ ಷೋ ಆಯೋಜಕರ ಬಗ್ಗೆ ನಿಷ್ಠುರವಾಗಿ ಮಾತನಾಡಿದ್ದಾರೆ.

 

 

ಹೌದು, ಜೆಕೆ ಬೇಸರಗೊಂಡಿದ್ದಾರೆ. ಎಷ್ಟರ ಮಟ್ಟಿಗೆಂದರೆ, ತಾನು ಬಿಗ್‌ಬಾಸ್ ಶೋಗೆ ಹೋಗಿ ತಪ್ಪು ಮಾಡಿಬಿಟ್ಟೆ ಅಂತ ಹಳ ಹಳಿಸುವಷ್ಟರಮಟ್ಟಿಗೆ. `ಏನೋ ಅಂದ್ಕೊಂಡು ಬಿಗ್‌ಬಾಸ್ ಮನೆಯೊಳಗೆ ಹೋದರೆ, ಅಲ್ಲಿ ಅವರಿಗೆ ಬೇಕಾದಂತೆ ಟ್ರ್ಯಾಪ್ ಮಾಡ್ತಾರೆ. ಅವರಿಗೆ ಬೇಕಾದದ್ದನ್ನೇ ಕ್ರಿಯೇಟ್ ಮಾಡಿ ಎಲ್ಲೋ ಒಂದು ಕಡೆ ನಮ್ಮ ಅಸಲೀ ವ್ಯಕ್ತಿತ್ವವನ್ನೇ ಮರೆಮಾಚುತ್ತಾರೆ. ಹೊರಗೆ ಬಂದ ಮೇಲೆ ಬರುತ್ತಿರೋ ಕೆಲ ಒಪೀನಿಯನ್ನುಗಳನ್ನ ಕೇಳಿದ ಮೇಲೆ, ನಿಜಕ್ಕೂ ಈ ಶೋಗೆ ಹೋಗಬಾರದಿತ್ತು ಅನ್ನಿಸುತ್ತಿದೆ’ ಇದು ಜೆಕೆ ಅಸಹನೆಯ ಸಂಕ್ಷಿಪ್ತ ಸಾರಾಂಶ.

ಜೆಕೆ ವರ್ಷಾಂತರಗಳಿಂದಲೂ ಪಟ್ಟಾಗಿ ವರ್ಕೌಟ್ ಮಾಡುತ್ತಾ ದೇಹವನ್ನು ಚೆಂದಗೆ ರೂಪಿಸಿಕೊಂಡಿರುವವರು. ಅದೇನು ಸಲೀಸಿನ ಸಂಗತಿಯಲ್ಲ. ಪ್ರತೀ ದಿನವೂ ಶ್ರಮ ಬೇಡುತ್ತೆ. ನಿಮಗೆ ಅಚ್ಚರಿಯಾಗಬಹುದೇನೋ… ಜೆಕೆ ಬಿಗ್‌ಬಾಸ್ ಮನೆಯೊಳಗೂ ಕೂಡಾ ಜಿಮ್ ವರ್ಕೌಟ್‌ಗೆಂದೇ ಬಹಳಾ ಸಮಯವನ್ನು ವ್ಯಯಿಸಿದ್ದಾರೆ. ಆದರೆ ಜೆಕೆ ತಮ್ಮ ಆಹಾರದ ವಿಚಾರದಲ್ಲಿ ಬೇಸರಿಕೊಂಡಿದ್ದನ್ನ ಬಿಗ್‌ಬಾಸ್ ಮಂದಿ ತೋರಿಸಿದರೇ ವಿನಃ ಅವರು ವರ್ಕೌಟ್ ಮಾಡಿ ಬೆವರು ಹರಿಸಿದ್ದನ್ನು ತೋರಿಸಿದ್ದು ಕಡಿಮೆ..

 

 

ಇನ್ನುಳಿದಂತೆ ಪ್ರತೀ ಸೀಜನ್ನಿನಲ್ಲಿಯೂ ಬಿಗ್‌ಬಾಸ್ ಮನೆಯೊಳಗೆ ಒಂದೊಂದು ಲವ್ ಸ್ಟೋರಿ ಹುಟ್ಟಿಕೊಳ್ಳುತ್ತದಲ್ಲಾ? ಅದೂ ಕೂಡಾ ಬಿಗ್‌ಬಾಸ್ ಮಂದಿಯ ಗಿಮಿಕ್ಕು. ಈ ಬಾರಿ ಜೇಕೆ ಮತ್ತು ಶ್ರುತಿ ಪ್ರಕಾಶ್ ಅವರುಗಳನ್ನು ಜೋಡಿಯಾಗಿಸಿ ಟಿಆರ್‌ಪಿ ಗುಂಜುವ ಕಸರತ್ತು ಮಾಡಲಾಗಿದೆ. ಈ ವಿಚಾರದಲ್ಲಿ ಖುದ್ದು ಜೇಕೆ ಭಾರೀ ಡಿಸ್ಟರ್ಬ್ ಮೂಡಿಗೆ ಜಾರಿದ್ದಾರೆ. ಅವರ ಮಾತಿನಲ್ಲಿಯೇ ಹೇಳೋದಾದರೆ ಜೇಕೆ ಮತ್ತು ಶ್ರುತಿ ಪ್ರಕಾಶ್ ಬೆಸ್ಟ್ ಫ್ರೆಂಡ್ಸ್ ಅಷ್ಟೆ. ಅವರಿಬ್ಬರ ನಡುವೆ ನಡೆದಿದ್ದದ್ದೂ ಕೂಡಾ ಸ್ನೇಹದ ಸುತ್ತಲಿನ ವಿದ್ಯಮಾನಗಳು ಮಾತ್ರ. ಆದರೆ ಇವರಿಬ್ಬರ ನಡುವೆ ಲವ್ವಿದೆ, ಮದುವೆಯಾಗಿ ಬಿಡುತ್ತಾರೆಂಬಂತೆ ಬಿಂಬಿಸಿದ್ದು ಬೂಸಾ ಬಿಗ್‌ಬಾಸಿನ ಅಸಲೀ ಷಡ್ಯಂತ್ರ. ಜೇಕೆ ಮತ್ತು ಶ್ರುತಿ ಫ್ರೆಂಡ್ಸ್ ಎಂಬುದನ್ನು ಬಿಂಬಿಸೋ ದೃಶ್ಯಾವಳಿಗಳಿಗೆ ನೀಟಾಗಿ ಕತ್ತರಿ ಹಾಕಿ ಅವರಿಬ್ಬರನ್ನು ಪ್ರೇಮಿಗಳೆಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂಬುದು ಖುದ್ದು ಜೇಕೆಗಿರೋ ದೊಡ್ಡ ಬೇಸರ.

ಇನ್ನುಳಿದಂತೆ, ಯಾವ ಹುಡುಗನಾದರೂ, ಹುಡುಗಿಯಾದರೂ ಬಿಗ್‌ಬಾಸ್ ಮನೆಯೊಳಗೆ ಅನುಚಿತವಾಗಿ ವರ್ತಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ಅಷ್ಟೊಂದು ಕ್ಯಾಮೆರಾ ಕಣ್ಗಾವಲಿರುತ್ತದೆ. ಆದರೆ ಒಂದು ಸಣ್ಣ ಸಣ್ಣ ಘಟನೆಗಳನ್ನಿಟ್ಟುಕೊಂಡು ಏನೋ ನಡೆದಿದೆ ಎಂಬಂತೆ ಚಿತ್ರಿಸೋದು ಆಯೋಜಕರ ಕುತ್ಸಿತ ಬುದ್ಧಿಯಷ್ಟೆ. ಇಂಥಾದ್ದರಿಂದ ಹುಡುಗೀರ ಮಾನ ಹರಾಜಾದರೂ, ಜೆಕೆಯಂಥವರ ಇಮೇಜು ಕಳೆಗುಂದಿದರೂ ಬಿಗ್‌ಬಾಸ್ ಆಯೋಜಕರು ತಲೆ ಕೆಡಿಸಿಕೊಳ್ಳೋದಿಲ್ಲ!

 

 

ಹೇಳಿ ಕೇಳಿ ಜೇಕೆ ಕಿಚ್ಚಾ ಸುದೀಪ್ ಆಪ್ತ. ಆದರೀಗ ಅಂಥಾ ಜೇಕೆ ಬಿಗ್‌ಬಾಸ್ ವಿರುದ್ಧ ಅಸಹನೆ ಹೊರ ಹಾಕಿದ್ದಾರೆಂದರೆ ಈ ಶೋದ ಹಿಕ್ಮತ್ತುಗಳು ಅದೆಂಥಾದ್ದಿರಬಹುದೆಂಬುದನ್ನು ಯಾರಾದರೂ ಊಹಿಸಬಹುದು. ಹಾಗಂತ ಜೆಕೆ ಸುದೀಪ್ ವಿರುದ್ಧ ಅಸಹನೆ ಹೊಂದಿದ್ದಾರೆ ಅಂತ ಅರ್ಥವಲ್ಲ. ಆದರೆ ಎಲ್ಲ ಷಡ್ಯಂತ್ರಗಳನ್ನೂ ಕೂಡಾ ಆಯೋಜಕರು ಸುದೀಪ್ ಅವರನ್ನು ಮೀರಿಕೊಂಡು ಮಾಡುತ್ತಾರೆ. ಮತ್ತೊಂದಷ್ಟು ಮಾಸ್ಟರ್ ಪ್ಲಾನುಗಳಿಗೆ ಕಿಚ್ಚ ಮೂಕಪ್ರೇಕ್ಷಕರಾಗಬೇಕಾಗುತ್ತದೆ. ಇಂಥಾ ಬಿಗ್ ಬಕ್ವಾಸ್ ಶೋ ಮಾಡಿ ಪ್ರೇಕ್ಷಕರ ನಂಬಿಕೆಗಳ ಜೊತೆ, ಸ್ಪರ್ಧಿಗಳ ಘನತೆಯ ಜೊತೆ ಆಟವಾಡುವ ಆಯೋಜಕರು ಮಾನ ನಡುಬೀದಿಯಲ್ಲಿ ಹರಾಜಾಗುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top