fbpx
ಮನೋರಂಜನೆ

ಸೂಪರ್ ಸ್ಟಾರ್ ಜೆಕೆಯ ಮುಂದಿನ ಚಿತ್ರಕ್ಕೆ ಈ ಬಿಗ್ ಬಾಸ್ ಸ್ಪರ್ಧಿಯೇ ನಾಯಕಿ!

ಸೂಪರ್ ಸ್ಟಾರ್ ಜೆಕೆಯ ಮುಂದಿನ ಚಿತ್ರಕ್ಕೆ ಈ ಬಿಗ್ ಬಾಸ್ ಸ್ಪರ್ಧಿಯೇ ನಾಯಕಿ! !

 

 

ಕಿರುತೆರೆಯ ಸೂಪರ್ ಸ್ಟಾರ್ ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಮ್ ಬಿಗ್’ಬಾಸ್ ಮನೆಯೊಳಗೇ ತಮ್ಮ ತರ್ಲೆ ತಮಾಷೆಗಳಿಂದ ಮನೆಮಂದಿಯನ್ನೆಲ್ಲಾ ನಗಿಸುತ್ತಿದ್ದರು. ಬೇರೆ ಯಾರ ವಿಷ್ಯಕ್ಕೂ ಮೂಗು ತೋರಿಸದೆ ತಾವಾಯಿತು ತಮ್ಮ ಟಾಸ್ಕ್ ಆಯ್ತು ಅಂತ ಇದ್ದ ಕಾರ್ತಿಕ್ ಕಾರ್ಯಕ್ರಮದ ಸ್ಪರ್ಧೆಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಮನೆಯಿಂದ ಹೊರಬಂದ ಮೇಲೆ ತಮ್ಮ ಚಿತ್ರಗಳ ಗಮನಹರಿಸಿರುವ ಜೆಕೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

 

 

ಸದ್ಯ ಕಾರ್ತಿಕ್ ಮೇ 1st, ವಾರೆಂಟ್, ಆ ಕರಾಳ ರಾತ್ರಿ, ಮತ್ತು ಪುಟ ಸಂಖ್ಯೆ 109′ ಎನ್ನುವ ನಾಲ್ಕು ಚಿತ್ರಗಳಲ್ಲಿ ಬ್ಯುಸಿಯಾಗಲಿದ್ದು ಇವುಗಳಲ್ಲಿ ಮೇ 1st ಮೊದಲು ಬಿಡುಗಡೆಗೊಳ್ಳಲಿದೆ. ಈ ಚಿತ್ರ ಮುಕ್ತಾಯಗೊಂಡ ನಂತರ ಶುರುವಾಗುವ ‘ಆ ಕರಾಳ ರಾತ್ರಿ’ ಚಿತ್ರದಲ್ಲಿ ಜೆಕೆ ಜೊತೆ ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಿದ್ದ ಅನುಪಮಾ ಗೌಡ ಅವರೇ ನಾಯಕಿಯಾಗಲಿದ್ದಾರೆ.

ದಯಾಳ್ ಪದ್ಮನಾಭ್ ಅವರು 2 ಸ್ಕ್ರಿಪ್ಟ್ ಗಳನ್ನು ರೆಡಿಮಾಡಿಕೊಂಡಿದ್ದು, ಅದರಲ್ಲಿ ‘ಆ ಕರಾಳ ರಾತ್ರಿ’ ಎನ್ನುವ ಚಿತ್ರದಲ್ಲಿ ಜೆಕೆ ಹಾಗೂ ಅನುಪಮಾ ಗೌಡ ಜೊತೆಯಾಗಿ ನಟಿಸಲಿದ್ದಾರೆ. ಉಳಿದಂತೆ ಬಿಗ್ ಬಾಸ್ ಸ್ಪರ್ಧಿಗಳಾಗಿದ್ದ ಜಯಶ್ರೀನಿವಾಸನ್,ಸಿಹಿ ಕಹಿ ಚಂದ್ರು, ಕೂಡ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರಂತೆ. ಈ ಚಿತ್ರ ಸಾಹಿತಿ ಮೋಹನ್ ಹಬ್ಬು ಅವರ ‘ಕರಾಳ ರಾತ್ರಿ’ ನಾಟಕವನ್ನುಆಧರಿಸಿರುತ್ತದೆಯಂತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top