fbpx
ಸಿನಿಮಾ

ಫೇಸ್ಬುಕ್ ಗೆ ಟಾಟಾ ಬೈ ಬೈ ಹೇಳಿದ ನಟಿ ಮೇಘನಾ ಗಾವ್ಕರ್ ಅಂತದ್ದೇನಾಯ್ತು ಆಕೆಗೆ ?

ಕನ್ನಡದ ಖ್ಯಾತ ನಟನಟಿಯರು ಫೇಸ್ ಬುಕ್ ನಲ್ಲಿ ಜಾಲಿ ಜಾಲಿ ಫೋಟೋಗಳ ಮಧ್ಯೆ ತಮ್ಮ ನೋವು ನಲಿವು ಎಲ್ಲವನ್ನು ಹಂಚಿಕೊಳ್ಳುತ್ತಾರೆ , ಕೆಲವೊಮ್ಮೆ ಯಾವ ನಟ ನಟನಟಿಯರಿಗೆ ಹೆಚ್ಚು ಫಾಲ್ಲೋರ್ಸ್ ಇರುತ್ತಾರೆ ಎಂಬುದು ಕೂಡ ಚರ್ಚೆಯ ವಿಷಯ , ಹೀಗೆ ಹೆಚ್ಚು ಹೆಚ್ಚು ಫಾಲ್ಲೋರ್ಸ್ ಮೇಲೆ ಅವರ ಖ್ಯಾತಿಯನ್ನು ಹಾಗು ಆಕ್ಟಿವ್ ನೆಸ್ ಅನ್ನು ಅಳೆಯುತ್ತಾರೆ ನೆಟ್ಟಿಗರು .

 

 

 

ಇನ್ನು ಕಿರುತೆರೆಯಿಂದ ಸಿನೆಮಾಗೆ ಲಗ್ಗೆ ಇಟ್ಟ ಚಂದುಳ್ಳಿ ಚೆಲುವೆ ಮೇಘನಾ ಗಾವ್ಕರ್ ಫೇಸ್ ಬುಕ್ ಗೆ ಟಾಟಾ ಹೇಳಿ ತಮ್ಮ ಪ್ರೈವೇಟ್ ಫೇಸ್ಬುಕ್ ಅಕೌಂಟ್ ಡಿಆಕ್ಟಿವೇಟ್ ಮಾಡಿಕೊಂಡಿದ್ದಾರೆ , ಇನ್ನು ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಹಾಗು ಇನ್ಸ್ಟಾಗ್ರಾಮ್ ನಲ್ಲಿ ಮೇಘನಾ ಇನ್ನು ಆಕ್ಟಿವ್ ಇರುತ್ತಾರಂತೆ .

 

ಮೇಘನಾ ಗಾವ್ಕರ್ ಹೆಸರಿನ ಕೆಲವು ಫೇಸ್ ಬುಕ್ ಅಕೌಂಟ್ ಗಳು ಇದ್ದು ಅವುಗಳು ನನ್ನದಲ್ಲ ಎಂದು ಮೇಘನಾ ಹೇಳಿಕೊಂಡಿದ್ದಾರೆ , ಕೆಲವು ಅಭ್ಯಾಸಗಳನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಫೇಸ್ ಬುಕ್ ಅಕೌಂಟ್ ಡಿಆಕ್ಟಿವೇಟ್ ಮಾಡಿದ್ದೇನೆ ಎನ್ನುತ್ತಾರೆ ಈ ನಟಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top