fbpx
ಮನೋರಂಜನೆ

“ತಲೆಯಿಂದ ಬಾಲದವರೆಗೆ ಈಗ ಶೆಟ್ಟಿಗಳದ್ದೇ ದರ್ಬಾರ್ ಆಗೋಗಿದೆ” ರಂಗಾಯಣ ರಘು ಈ ರೀತಿ ಹೇಳಿದ್ದು ಯಾಕೆ?

“ತಲೆಯಿಂದ ಬಾಲದವರೆಗೆ ಈಗ ಶೆಟ್ಟಿಗಳದ್ದೇ ದರ್ಬಾರ್ ಆಗೋಗಿದೆ” ರಂಗಾಯಣ ರಘು ಈ ರೀತಿ ಹೇಳಿದ್ದು ಯಾಕೆ?

 

.

 

ಚಂದನವನದ ಕಾಮಿಡಿ ಸ್ಟಾರ್ ಗಳ ಪೈಕಿ ಮೊದಲ ಸಾಲಿನಲ್ಲಿ ನಿಂತುಕೊಳ್ಳುವ ನಟ ರಂಗಾಯಣ ರಘು ಸಿನಿಮಾ ಹೊರತಾಗಿ ಸುದ್ದಿಯಾದವರಲ್ಲ. ತಮ್ಮ ಬಾಡಿ ಲ್ಯಾಂಗ್ವೇಜ್, ಮಾತನಾಡುವ ಶೈಲಿ, ಹಾಸ್ಯ ಚಟಾಕಿಗಳಿಂದಲೇ ಪ್ರೇಕ್ಷಕರನ್ನು ರಂಜಿಸಿಕೊಂಡು ಬಂದಿರುವ ರಂಗಾಯಣ ರಘು ಇಂದು “ತಲೆಯಿಂದ ಬಾಲದವರೆಗೆ ಈಗ ಶೆಟ್ಟಿಗಳದ್ದೇ ದರ್ಬಾರ್ ಆಗೋಗಿದೆ” ಎಂಬ ಹೇಳಿಕೆಯನ್ನು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಅಷ್ಟಕ್ಕೂ ಇವರು ಈ ರೀತಿ ಹೇಳಿದ್ದು ಯಾಕೆ ಅಂತೀರಾ! ಮುಂದೆ ಓದಿ.

 

.

 

ತಮ್ಮ ಅಭಿನಯದ ಗುಳ್ಟು ಚಿತ್ರದ ಪತ್ರಿಕಾಗೋಷ್ಠಿಗೆ ಆಗಮಿಸಿದ್ದ ರಂಗಾಯಣ ರಘು ಚಿತ್ರದ ಕುರಿತು ಮಾತನಾಡುವಾಗ ” ಕನ್ನಡ ಚಿತ್ರರಂಗದಲ್ಲಿ ಯುವ ನಟರುಗಳು ಸಂಚಲನ ಮೂಡಿಸಿದ್ದಾರೆ. ಈಗ ಹೊಸ ಯುವ ಪ್ರತಿಭೆಗಳ ಜಮಾವಾಗಿದೆ ಇತ್ತೀಚಿಗೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ತಮ್ಮ ಪ್ರತಿಭೆಯಿಂದ ಚಿತ್ರರಂಗವನ್ನು ಮತ್ತಷ್ಟು ಬೆಳೆಸುತ್ತಿದ್ದಾರೆ. ಒಂದು ರೀತಿಯಲ್ಲಿ ಹೇಳಬೇಕಾದರೆ ಇಂದು ತಲೆಯಿಂದ ಬಾಲದವರೆಗೆ ಶೆಟ್ಟಿಗಳ ದರ್ಬಾರ್ ಜೋರಾಗಿದೆ” ಎಂದು ಯುವನಟರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹಾಸ್ಯ ಟೀಚಟಾಕಿ ಹಾರಿಸಿದರು.

 

 

ಅಷ್ಟಕ್ಕೂ ರಂಗಾಯಣ ರಘು ಹೇಳಿರುವ ಮಾತು ಅಕ್ಷರಶಃ ನಿಜವಾಗುತ್ತಿದೆ, ಒಂದು ಕಡೆ ರಕ್ಷಿತ್ ಶೆಟ್ಟಿ ಸ್ಟಾರ್ ಪಟ್ಟವನ್ನು ಅಲಂಕರಿಸಿಕೊಂಡಿದ್ದರೆ ಮತ್ತೊಂದು ಕಡೆ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಕಾವ್ಯ ಶೆಟ್ಟಿ, ಯಜ್ಞ ಶೆಟ್ಟಿ, ಶೀತಲ್ ಶೆಟ್ಟಿ, ಸೇರಿದಂತೆ ಮೊನ್ನೆ ಬಿಗ್ ಬಾಸ್ ವಿಜೇತನಾದ ಚಂದನ್ ಶೆಟ್ಟಿ ಅವರದ್ದೇ ಆದ ಕ್ಷೇತ್ರಗಳಲ್ಲಿ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಈ ಯುವ ಪ್ರತಿಭೆಗಳ ಬೆಳವಣಿಗೆಯನ್ನು ಗಮನಿಸಿದ ರಂಗಾಯಣ ರಘು ಈ ಯುವ ಪ್ರತಿಭೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನವೀನ್ ಶಂಕರ್ ಎಂಬ ಹೊಸ ಹುಡುಗ ಗುಳ್ಟು ಚಿತ್ರದ ನಾಯಕನಾಗಿದ್ದರೆ, ನಟಿ ಸೋನು ಗೌಡ ಚಿತ್ರದಲ್ಲಿ ನವೀನ್’ಗೆ ನಾಯಕಿಯಾಗಿದ್ದಾರೆ. ಗುಳ್ಟು’ ಚಿತ್ರವನ್ನು ಹೊಸಬರ ತಂಡವೊಂದು ತಯಾರು ಮಾಡುತ್ತಿದ್ದು. ಜನಾರ್ಧನ್ ಚಿಕ್ಕಣ್ಣ ಎಂಬುವವರು ಚಿತ್ರ ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ರೆಡ್ಡಿ ಮತ್ತು ದೇವರಾಜ್ ಆರ್ ಎಂಬುವವರು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top