fbpx
ಮನೋರಂಜನೆ

ಸದ್ಯದಲ್ಲೇ ಸುದೀಪ್ ಜೊತೆ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ ಶೃತಿ ಹರಿಹರನ್!

ಸದ್ಯದಲ್ಲೇ ಸುದೀಪ್ ಜೊತೆ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ ಶೃತಿ ಹರಿಹರನ್!

 

 

ಅಂಬರೀಶ್ ಮುಖ್ಯಭೂಮಿಕೆಯಲ್ಲಿರೋ ಅಂಬಿ ನಿಂಗೆ ವಯಸಾಯ್ತೋ ಚಿತ್ರ ಟೈಟಲ್ ಕಾರಣದಿಂದಲೇ ಭಲೇ ಪ್ರಸಿದ್ಧಿ ಪಡೆದಿದೆ. ಚಿತ್ರೀಕರಣಕ್ಕೂ ಮುಂಚೆಯೇ ಇಂಥಾದ್ದೊಂದು ಕ್ರೇಜ್ ಹುಟ್ಟಿಕೊಂಡಿರೋದು ನಿಜಕ್ಕೂ ಚಿತ್ರರಂಗದಲ್ಲಿ ಸಕಾರಾತ್ಮಕ ಬೆಳವಣಿಗೆಯೇ. ಚಿತ್ರದ ಶೂಟಿಂಗ್ ಈಗಾಗಲೇ ಭರದಿಂದ ಸಾಗುತ್ತಿದೆ. ಈ ಚಿತ್ರವನ್ನು ಕಿಚ್ಚ ಸುದೀಪ್ ಅವರೇ ನಿರ್ಮಿಸಿ, ತಾವೇ ಸ್ವತಃ ಒಂದು ಪಾತ್ರವನ್ನೂ ನಿರ್ವಹಿಸೋ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಿದೆ.

 

 

ಸುದೀಪ್ ಅವರ ಭಾಗದ ಚಿತ್ರೀಕರಣ ಸದ್ಯದ್ಲಲೇ ಚಿತ್ರೀಕರಣಗೊಳ್ಳಲಿದ್ದು ಸುದೀಪ್ ಜೊತೆ ನಾಯಕಿಯಾಗಿ ಇದೆ ಮೊದಲ ಬಾರಿಗೆ ಶೃತಿ ಹರಿಹರನ್ ಜೊತೆಯಾಗುತ್ತಿದ್ದಾರೆ. ಸುದೀಪ್ ಮತ್ತು ಶೃತಿ ಹರಿಹರನ್ ಜೊತೆಗಿನ ಸೀನ್ ಗಳನ್ನು ಫೆಬ್ರವರಿ ಎರಡನೇ ವಾರದಿಂದ ಶೂಟಿಂಗ್ ಮಾಡಲಾಗುತ್ತದೆ ಎಂದು ಮಾಹಿತಿ ಬಂದಿದೆ. ಸುದೀಪ್ ಶೃತಿ ಭಾಗದ ಶೂಟಿಂಗ್ ಸುಮಾರು 15 ದಿನಗಳ ಕಾಲ ನಡೆಯಲಿದೆಯಂತೆ.

ಗುರುದತ್ತ ಗಾಣಿಗ ನಿರ್ದೇಶನದ ಈ ಚಿತ್ರವನ್ನು ಕಿಚ್ಚ ಸುದೀಪ್ ಮತ್ತು ಮಂಜುನಾಥ್ ಗೌಡ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.ಅರ್ಜುನ್ಯ ಜನ್ಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಅಂಬರೀಷ್ ಅವರ ಫ್ಲಾಷ್ ಬ್ಯಾಕ್ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ.ಚಿತ್ರದಲ್ಲಿ ಅಂಬರೀಷ್’ಗೆ ನಟಿ ಸುಹಾಸಿನಿ ನಾಯಕಿಯಾಗಿದ್ದಾರೆ. ಈಗಾಗಲೇ ಚಿತ್ರಕ್ಕೆ ಸಂಭಂದಿಸಿದಂತೆ ಅಂಬರೀಷ್ ಅವರ ಆಟೋಗ್ರಾಫ್ ವಿಡಿಯೋ ಬಿಡುಗಡೆಗೊಂಡಿದ್ದು ಪ್ರೇಕ್ಷಕರಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top