fbpx
ಸಮಾಚಾರ

ಜೀವನ ಪಾಠದ ಬಗ್ಗೆ ಸುದೀಪ್ ಬರೆದಿರುವ ಅದ್ಬುತ ಸಾಲುಗಳನ್ನು ಒಮ್ಮೆ ಓದಿ!

ಜೀವನ ಪಾಠದ ಬಗ್ಗೆ ಸುದೀಪ್ ಬರೆದಿರುವ ಅದ್ಬುತ ಸಾಲುಗಳನ್ನು ಒಮ್ಮೆ ಓದಿ!

 

 

ಜೀವನದಲ್ಲಿ ಜೀವನಕ್ಕಿಂತ ಯಾವುದು ದೊಡ್ಡದಲ್ಲ ಎಂಬ ಪರಿಕಲ್ಪನೆಯೊಂದಿಗೆ ಸಿದ್ದವಾಗಿರುವ ರಾಜು ಕನ್ನಡ ಮೀಡಿಯಂ ಚಿತ್ರ ಕರ್ನಾಟಕದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಗುರುನಂದನ್ ಮತ್ತು ಆವಂತಿಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಅಥಿತಿ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾಡಿ ಚಿತ್ರಕ್ಕೆ ಕ್ರೆಜ್ ತಂದುಕೊಟ್ಟಿದ್ದರು. ಚಿತ್ರದಲ್ಲಿ ಬರುವ ಜೀವನದ ಪಾಠದ ಬಗ್ಗೆ ​ ತಮ್ಮದೇ ರೀತಿಯಲ್ಲಿ ಸುದೀಪ್ ಅವರು ಜೀವನವನ್ನು ವರ್ಣಿಸಿ ಪತ್ರವೊಂದನ್ನು ಬರೆದಿದ್ದಾರೆ.

 

 

ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿರುವ ಅದ್ಭುತ ಚಿಂತನೆಗಳ ಪ್ರಭಾವದಿಂದ ನಾನು ಈ ಪತ್ರ ಬರೆಯುತ್ತಿದ್ದೇನೆ ಎಂದು ಸುದೀಪ್​ ಪತ್ರ ಪ್ರಾರಂಭಿಸಿದ್ದಾರೆ. ಈ ಕೆಳಕಂಡಂತೆ ಪಾತ್ರದಲ್ಲಿ ಸುದೀಪ್ ಬರೆದುಕೊಂಡಿದ್ದಾರೆ.

ಜೀವನ ಎಂದರೇನು ಎಂಬ ಪ್ರಶ್ನೆಗೆ ನಾವು ಬೇರೆ ಬೇರೆ ಸಂಧರ್ಭಗಳಲ್ಲಿ ಬೇರೆ ಬೇರೆ ಉತ್ತರವನ್ನು ಹೊಂದಿರುತ್ತೇವೆ, ಆ ಕ್ಷಣಕ್ಕೆ ಸರಿ ಎನಿಸುವ ಅಂಶವೇ ಜೀವನ ಎಂಬ ನಿರ್ಧಾರಕ್ಕೂ ನಾವು ಒಮ್ಮೊಮ್ಮೆ ಬಂದು ಬಿಡುತ್ತೇವೆ. ನಂತರದ ದಿನಗಳಲ್ಲಿ ಮತ್ತಷ್ಟು ಜೀವನವನ್ನು ಎದುರಿಸಿದಾಗ ಆ ನಿರ್ಧಾರ ಬದಲಾಗುತ್ತದೆ.ಜೀವನಕ್ಕೆ ಹೊಸ ಅರ್ಥವನ್ನು ಕೊಡುತ್ತಾ ಹೋಗುತ್ತೇವೆ. ಹೊಸ ಹೊಸ ಆಲೋಚನೆಗಳು ನಮ್ಮ ತಲೆಯಲ್ಲಿ ಮೂಡುತ್ತವೆ. ಇದರಿಂದ ಜೀವನ ಅಂದರೆ ಏನು ಎಂಬ ಪ್ರಶ್ನೆಗೆ ಹೊಸ ಉತ್ತರವನ್ನು ಹುಡುಕಿಕೊಳ್ಳುತ್ತೇವೆ.

 

 

ಅಸಲಿಗೆ ಜೀವನದ ಎಂದರೇನು ಎಂಬ ಪ್ರಶ್ನೆಗೆ ಉತ್ತರಗಳು ಕಾಲ ಕಾಲಕ್ಕೆ ಬದಲಾಗುತ್ತಾ ಹೋಗುತ್ತವೆ. ಕೊನೆಗೊಂದು ದಿನ ಅಂತಿಮವಾಗಿ ಒಂದು ತೀರ್ಮಾನಕ್ಕೆ ಬರುತ್ತೇವೆ. ಆಗ ಜೀವನವೆಂದರೆ ಆ ಕ್ಷಣಕ್ಕೆ ಬದುಕುವುದು ಎಂಬ ಸತ್ಯ ನಮಗೆ ಅರಿವಾಗುತ್ತದೆ. ಜೀವನದಲ್ಲಿ ಸರಳ ಜೀವನ ಅಂತ ಏನಿಲ್ಲಾ ನಾವು ಅದನ್ನು ಸರಳ ಮಾಡಿಕೊಳ್ಳಬೇಕು . ಈ ಅಂಶವನ್ನಿಟ್ಟುಕೊಂಡು ಚಿತ್ರವನ್ನು ಬಹಳ ಸೊಗಸಾಗಿ ನಿರ್ದೇಶಕ ನರೇಶ್​ ಕುಮಾರ್​ ಅವರು ತೋರಿಸಿದ್ದಾರೆ ಇದು ಒಳ್ಳೆಯ ಪ್ರಯತ್ನ. ಇಂತಹ ಒಳ್ಳೆಯ ಚಿಂತನೆಯುಳ್ಳ ಚಿತ್ರದಲ್ಲಿ ನಾನು ಒಂದು ಭಾಗವಾಗಿದ್ದಕ್ಕೆ ನನಗೆ ತುಂಬಾ ಸಂತೋಷವಿದೆ. ಈ ಅವಕಾಶ ಕೊಟ್ಟ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದಗಳು ಎಂದು ಸುದೀಪ್ ತಿಳಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top