fbpx
ಮನೋರಂಜನೆ

ಟಗರು ಆಗಮನಕ್ಕೆ ಕೊನೆಗೂ ಫಿಕ್ಸ್ ಆಯ್ತು ಮುಹೂರ್ತ: ಇತಿಹಾಸದಲ್ಲೇ ದಾಖಲೆ ಸಂಖ್ಯೆ ಥಿಯೇಟರ್ ಗಳಲ್ಲಿ ಟಗರು ದರ್ಶನ.

ಟಗರು ಆಗಮನಕ್ಕೆ ಕೊನೆಗೂ ಫಿಕ್ಸ್ ಆಯ್ತು ಮುಹೂರ್ತ: ಇತಿಹಾಸದಲ್ಲೇ ದಾಖಲೆ ಸಂಖ್ಯೆ ಥಿಯೇಟರ್ ಗಳಲ್ಲಿ ಟಗರು ದರ್ಶನ.

 

 

ದುನಿಯಾ ಸೂರಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕಾಂಬಿನೇಷನ್ನಿನ ಬಹು ನಿರೀಕ್ಷಿತ ಚಿತ್ರ ಟಗರು. ಈಗಾಗಲೇ ಹಾಡುಗಳು ಮತ್ತು ಟೀಸರ್ ನಿಂದ ಕುತೂಹಲ ಹೆಚ್ಚು ಮಾಡಿರೋ ಟಗರು ಚಿತ್ರ ತನ್ನ ರಿಲೀಸ್ ಡೇಟ್ ಅನ್ನು ಫಿಕ್ಸ್ ಮಾಡಿಕೊಂಡಿದೆ..ಮೂಲಗಳ ಪ್ರಕಾರ ಟಗರು ಚಿತ್ರ ಫೆಬ್ರವರಿ 23ರಂದು ರಾಜ್ಯಾದ್ಯಂತ ದಾಖಲೆಯ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

 

 

ಸುಮಾರು ಐನೂರಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಟಗರು ಚಿತ್ರವನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿರುವ ಚಿತ್ರತಂಡ ಬೆಂಗಳೂರಿನ ಕೆ.ಜಿ.ರಸ್ತೆಯ್ಲಲಿರುವ ಸಂತೋಷ್ ಚಿತ್ರಮಂದಿರ ಮೇನ್ ಥಿಯೇಟರ್ ಆಗಿ ಮಾಡಿಕೊಳ್ಳಲು ನಿರ್ಧರಿಸಿದೆ. ತಾರಾಬಳಗದಿಂದಲೇ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿರುವ ಟಗರು ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿ ರಸಿಕರು ತುದಿಗಾಲಿನಲ್ಲಿ ನಿಂತಿದ್ದಾರೆ.

 

 

ಕಡ್ಡಿಪುಡಿ ಸಿನಿಮಾದ ನಂತರ ಶಿವಣ್ಣ ದುನಿಯಾ ಸೂರಿ ಡೈರೆಕ್ಷನ್ ನಲ್ಲಿ ಅಭಿನಯಿಸುತ್ತಿರುವ ಟಗರು ಚಿತ್ರದಲ್ಲಿ ವಿಲನ್‌ಗಳಾಗಿ ಧನಂಜಯ್‌ ಮತ್ತು ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ ಮಾನ್ವಿತಾ ಮತ್ತು ಭಾವನಾ ಶಿವರಾಜಕುಮಾರ್’ಗೆ ನಾಯಕಿಯರಾಗಿ ನಟಿಸಿದ್ದಾರೆ. ಚರಣ್ ರಾಜ್ ಅವರ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ರಿಲೀಸ್ ಆಗಿರುವ ಮೇಕಿಂಗ್ ವಿಡಿಯೋಗಳು, ಟೀಸರ್ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top