fbpx
ಸಿನಿಮಾ

ಹ್ಯಾಂಡ್ ಸಂ ವಿಲನ್ ನ ಹೊಸ ವರಸೆ ಹಿಂಗಿದೆ ನೋಡಿ – ವಸಿಷ್ಠನ ಹೊಸ ಅವತಾರ

ತಮ್ಮ ಮನೋಜ್ಞ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ನಟ ವಸಿಷ್ಠ.ಎನ್.ಸಿಂಹ ಅವರು ಮೊದಲ ಬಾರಿಗೆ ಕಾಲಚಕ್ರ ಚಿತ್ರದಲ್ಲಿ ನಾಯಕನಾಗಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

 

ಬಿಡುಗಡೆಯಾಗಿರುವ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಎರಡು ವಯಸ್ಕ ಹಾಗೂ ವಯಸ್ಸಾದ ಎರಡು ರೀತಿಯ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
ನೈಜ ಪ್ರಯೋಗಾತ್ಮಕ ಚಿತ್ರ ಎಂದು ಮೊದಲ ನೋಟಕೆ ಅನಿಸುತ್ತದೆ .

ಕಾಲಚಕ್ರ ಸಿನಿಮಾದಲ್ಲ ನಾಯಕಿಯಾಗಿ ರಕ್ಷಾ ಅಭಿನಯಿಸುತ್ತಿದ್ದಾರೆ. ಅವಿಕಾ ರಾಥೋಡ್, ದೀಪಕ್ ಶೆಟ್ಟಿ ಹಾಗೂ ಸುಚೇಂದ್ರ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ .

 

 

ಈ ಹಿಂದೆ ನಾನಿ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಸುಮಂತ್ ಕ್ರಾಂತಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top